ಡಿಕೆ ರವಿ ಶವ ಪರೀಕ್ಷೆ ಗೊಂದಲದಲ್ಲಿ ಸಿಬಿಐ
ಬೆಂಗಳೂರು, ಮೇ. 7: ಡಿಕೆ ರವಿ ಸಾವಿನ ತನಿಖೆ ವಹಿಸಿಕೊಂಡಿರುವ ಸಿಬಿಐ ಅಧಿಕಾರಿಗಳು ರವಿ ಕುಟುಂಬದ ಸದಸ್ಯರನ್ನು ಪ್ರಶ್ನೆ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ. ಕುಟುಂಬದ ಕಡೆಯಿಂದ ಯಾವುದಾದರೂ ಒತ್ತಡವಿತ್ತೇ? ಅಥವಾ ವೈಯಕ್ತಿಕ ಸಮಸ್ಯೆಗಳಿದ್ದವೇ? ಎಂಬುದರ ಕುರಿತು ಸಿಬಿಐ ಮಾಹಿತಿ ಕಲೆಹಾಕಿದೆ.
ಡಿಕೆ ರವಿ ಅವರ ದೇಹವನ್ನು ಮತ್ತೆ ಹೊರತೆಗೆದು ಪರೀಕ್ಷೆಗೆ ಒಳಪಡಿಸಬೇಕೋ? ಬೇಡವೋ? ಎಂಬ ಗೊಂದಲವೂ ಉಂಟಾಗಿದೆ. ಸಿಬಿಐ ಅಧಿಕಾರಿಗಳು ಈ ಬಗ್ಗೆ ಪ್ರಶ್ನೆ ಮಾಡಿದ್ದು ಕುಟುಂಬ ಸದಸ್ಯರ ಅಭಿಪ್ರಾಯವನ್ನು ಕಲೆ ಹಾಕಿದ್ದಾರೆ. ಆದರೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.["ಡಿಕೆ ರವಿ ಸಂಸಾರದಲ್ಲಿ ಯಾವುದೇ ತೊಂದರೆ ಇರ್ಲಿಲ್ಲ"]

ಆಡಳಿತ ಒತ್ತಡ ಹೆಚ್ಚಾಗಿತ್ತೇ?
ಡಿಕೆ ರವಿ ಕೆಲಸಗಳು ಬದಲಾಗುತ್ತಿದ್ದು ಅಧಿಕಾರಕ್ಕೆ ಸಂಬಂಧಿಸಿದ ಅನೇಕ ಒತ್ತಡಗಳು ಇದ್ದದ್ದು ನಿಜ. ಇದನ್ನು ಅವರು ಮನೆಯಲ್ಲಿ ಕೆಲವೊಮ್ಮೆ ಹಂಚಿಕೊಂಡಿದ್ದರು. ಅವರ ಸಾವಿನ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿದೆ ಎಂದು ಕುಟುಂಬ ಸದಸ್ಯರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.[ಚಾಲಕನ ಹೇಳಿಕೆಗೆ ಹೆಚ್ಚು ಮಹತ್ವ]
ಶವ ಹೊರತೆಗೆದು ಮತ್ತೆ ಪರೀಕ್ಷೆಗೆ ಒಳಪಡಿಸುವ ಬಗ್ಗೆಯೂ ಮಾತುಕತೆ ನಡೆದಿದೆ. ಆದರೆ ಈ ಬಗ್ಗೆ ಅಂತಿಮವಾಗಿ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ.
ದಾಖಲೆಗಳ ಪರಿಶೀಲನೆ
ರವಿ ಸಾವಿಗೆ ಸಂಬಂಧಿಸಿದ ಡಜನ್ ಗೂ ಅದಿಕ ಫೈಲ್ ಗಳನ್ನು ಸಿಬಿಐ ಅಧಿಕಾರಿಗಳು ಪರೀಶಿಲನೆ ಮಾಡಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆಯೂ ತಂಡ ಮಾಹಿತಿ ಕಲೆ ಹಾಕಿದೆ.
ಸಿಬಿಐ ತಂಡ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ, ಡಿಕೆ ರವಿ ಸಹೋದ್ಯೋಗಿಗಳು, ಡಿಕೆ ರವಿ ಮಾವ ಅವರನ್ನು ಪ್ರಶ್ನೆ ಮಾಡಿ ಮಾಹಿತಿ ಕಲೆ ಹಾಕಿತ್ತು. ಅಲ್ಲದೇ ರವಿ ಕೊನೆಯದಾಗಿ ಕಳಿಸಿದ್ದ ಮೆಸೇಜ್ ಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದೆ. [ಡಿಕೆ ರವಿ ಸಾವು: ಸಿಬಿಐಗೆ ಉತ್ತರ ನೀಡಿದ ಎಂಎನ್ ರೆಡ್ಡಿ]
ಸಿಐಡಿ ಏನು ಹೇಳುತ್ತಿದೆ?
ಈ ಮೊದಲುಮ ತನಿಖೆ ನಡೆಸಿದ್ದ ಸಿಐಡಿ ಡಿಕೆ ರವಿ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ತೀರ್ಮಾನಕ್ಕೆ ಬಂದಿತ್ತು. ಸಿಬಿಐ ಅಧಿಕಾರಿಗಳು ಸಿಐಡಿ ಅಧಿಕಾರಿಗಳನ್ನು ಪ್ರಶನೆ ಮಾಡಿದ್ದಾರೆ. ಅವರ ಎದುರು ಸಂಬಂಧಿಸಿದರು ನೀಡಿದ ಹೇಳಿಕೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ.[ಡಿಕೆ ರವಿ ಸಾವು ಪ್ರಕರಣದ ಸಂಪೂರ್ಣ ಮಾಹಿತಿ]












Click it and Unblock the Notifications