ಮರಳು ಸಾಗಣೆ ಲಾರಿ ವಶ ಮತ್ತು ಇತರ ಸುದ್ದಿಗಳು

ಬೆಂಗಳೂರು, ನ. 19 : ಅಕ್ರಮವಾಗಿ ಮರಳು ಸಾಗಣೆ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಿ.ಸಿ ಶಂಕರ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮಂಗಳವಾರ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 209 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ಲಾರಿಗೂ 20,000 ರೂ. ದಂಡ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಂಗಳವಾರ ಮುಂಜಾನೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಹಾಯದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 209 ಲಾರಿಗಳನ್ನು ಜಿಲ್ಲಾಧಿಕಾರಿ ಡಿ.ಸಿ.ಶಂಕರ್ ವಶಕ್ಕೆ ಪಡೆದಿದ್ದಾರೆ. ಹೊಸಕೋಟೆಯಲ್ಲಿ 81, ನೆಲಮಂಗಲದಲ್ಲಿ 98, ದೊಡ್ಡಬಳ್ಳಪುರದಲ್ಲಿ 18 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮುಂಜಾನೆ 4 ಗಂಟೆಯಿಂದ 6 ಗಂಟೆಯವರೆಗೆ ದಾಳಿ ನಡೆಸಲಾಗಿದೆ. ಈ ವೇಳೆ 209 ಲಾರಿಗಳನ್ನು ಜಪ್ತಿ ಮಾಡಲಾಗಿದ್ದು, ಪ್ರತಿ ಲಾರಿಗೆ ತಲಾ 20,000 ರೂ. ದಂಡ ವಿಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಚರಣೆಗೆ ಲಾರಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲಿ ಆದರೆ, ಲಾರಿ ಮಾಲೀಕರಿಗೆ ದಂಡ ವಿಧಿಸುವುದಕ್ಕೆ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಅಕ್ರಮ ಮರಳು ಸಾಗಣೆ, ಲಾರಿಗಳು ವಶಕ್ಕೆ

ಅಕ್ರಮ ಮರಳು ಸಾಗಣೆ, ಲಾರಿಗಳು ವಶಕ್ಕೆ

ಅಕ್ರಮವಾಗಿ ಮರಳು ಸಾಗಣೆ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಿ.ಸಿ ಶಂಕರ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮಂಗಳವಾರ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 209 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿ ಲಾರಿಗೂ 20,000 ರೂ. ದಂಡ ವಿಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಹಾಯದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸಕೋಟೆಯಲ್ಲಿ 81, ನೆಲಮಂಗಲದಲ್ಲಿ 98, ದೊಡ್ಡಬಳ್ಳಪುರದಲ್ಲಿ 18 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಪೈಸ್ ಜೆಟ್ ವೇಳಾಪಟ್ಟಿ ಬದಲು

ಸ್ಪೈಸ್ ಜೆಟ್ ವೇಳಾಪಟ್ಟಿ ಬದಲು

ಪ್ರಯಾಣಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು-ಬೆಳಗಾವಿ ಮಾರ್ಗವಾಗಿ ನಿತ್ಯ ಸಂಚರಿಸುವ ಸ್ಪೈಸ್ ಜೆಟ್ ವಿಮಾನಯಾನದ ವೇಳಾಪಟ್ಟೆಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ಬೆಳಗ್ಗೆ 8.05ಕ್ಕೆ ಹೊರಟು, 9.25ಕ್ಕೆ ಈ ವಿಮಾನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬೆಳಗಾವಿಯಿಂದ 9.55ಕ್ಕೆ ಹೊರಟು, 11.05ಕ್ಕೆ ಬೆಂಗಳೂರು ತಲುಪಲಿದೆ ಎಂದು ಸ್ಪೈಸ್‌ಜೆಟ್ ಪ್ರಕರಣೆಯಲ್ಲಿ ತಿಳಿಸಲಾಗಿದೆ.

ಜೈಲು ಸೇರಿದ ಜೈಲ್ ವಾರ್ಡನ್

ಜೈಲು ಸೇರಿದ ಜೈಲ್ ವಾರ್ಡನ್

ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಅನಾರೋಗ್ಯಪೀಡಿತರಾಗಿದ್ದ ವಿಚಾರಣಾಧೀನ ಕೈದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು 5 ಸಾವಿರ ಲಂಚ ಕೇಳಿದ್ದ ಜೈಲ್ ವಾರ್ಡನ್ ಸುರೇಶ್ ಬಾಬು ಎಂಬುವವರಿಗೆ 3 ವರ್ಷ ಜೈಲುವಾಸ, 4 ಸಾವಿರ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. 2011ರ ಮಾರ್ಚ್‌ನಲ್ಲಿ ಸಂತೋಷ್ ಎಂಬ ಆರೋಪಿಯನ್ನು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು. ಅವರಿಗೆ ಅನಾರೋಗ್ಯ ಉಂಟಾದಾಗ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಉಡುಪಿ ಜಿಲ್ಲಾ ಕಾರಾಗೃಹದ ಜೈಲ್ ವಾರ್ಡನ್ ಸುರೇಶ್ ಬಾಬು 5 ಸಾವಿರ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. ಈ ಕುರಿತು ದೂರು ದಾಖಲಾಗಿತ್ತು. ಸದ್ಯ ವಿಚಾರಣೆ ಮುಗಿದಿದ್ದು, ಸುರೇಶ್ ಬಾಬು 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಆನೆ ಓಡಿಸಲು ಕಾರ್ಯಾಚರಣೆ

ಆನೆ ಓಡಿಸಲು ಕಾರ್ಯಾಚರಣೆ

ತುಮಕೂರು ಜಿಲ್ಲೆಯ ಶಿರಾ, ಗುಬ್ಬಿ, ಚಿಕ್ಕನಾಯಕನ ಹಳ್ಳಿ, ತುಮಕೂರು ತಾಲೂಕುಗಳಲ್ಲಿ ಕಳೆದ 15 ದಿನಗಳಿಂದ ಎರಡು ತಂಡಗಳಾಗಿ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಎರಡು ತಂಡಗಳಲ್ಲಿ ಒಟ್ಟು 9 ಆನೆಗಳಿದ್ದು, ಮಂಗಳವಾರ ಮುಂಜಾನೆಯಿಂದಲೇ ಅವುಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ ಆನೆಗಳು ರೈತರ ಬೆಳಗಳನ್ನು ನಾಶ ಮಾಡಿವೆ.

ಮಂಡ್ಯಕ್ಕೆ ಬಂತು 30 ಸಿಟಿ ಬಸ್

ಮಂಡ್ಯಕ್ಕೆ ಬಂತು 30 ಸಿಟಿ ಬಸ್

ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರ ಮಂಡ್ಯದಲ್ಲಿ ನಗರ ಸಾರಿಗೆ ಉತ್ತಮ ಪಡಿಸಲು 30 ಬಸ್ ಗಳನ್ನು ನೀಡಿದೆ. ಫೆಬ್ರವರಿ ತಿಂಗಳಿನಿಂದ ಈ ಸಾರಿಗೆ ಬಸ್ ಗಳು ಕಾರ್ಯಾರಂಭ ಮಾಡಲಿವೆ. ಐದು ಮಾರ್ಗಗಳಲ್ಲಿ ಬಸ್ ಸಂಚಾರ ನಡೆಸಲು ಸಾರಿಗೆ ಇಲಾಖೆ ಯೋಜನೆ ತಯಾರಿಸಿದೆ.

ಹುಚ್ಚುನಾಯಿ ದಾಳಿ 13 ಜನರು ಆಸ್ಪತ್ರೆಗೆ

ಹುಚ್ಚುನಾಯಿ ದಾಳಿ 13 ಜನರು ಆಸ್ಪತ್ರೆಗೆ

ಹಾಸನ ಜಿಲ್ಲೆ ಅರಕಲಗೋಡು ಪಟ್ಟಣದಲ್ಲಿ ಹುಚ್ಚುನಾಯಿಯೊಂದು 13 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಮೊದಲು ಸಿಂಚನ (8) ವರ್ಷದ ಬಾಲಕಿಗೆ ಕಚ್ಚಿದ ನಾಯಿ ನಂತರ ರಸ್ತೆ ಬದಿ ನಿಂತಿದ್ದ ಜನರಿಗೆ ಕಚ್ಚಿದೆ. ಜನರು ದೊಣ್ಣೆ ಹಿಡಿದು ಅದನ್ನು ಓಡಿಸುವ ವೇಳೆಗಾಗಲೇ ಅದು 13 ಜನರಿಗೆ ಕಚ್ಚಿ ಗಾಯಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+