ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ: 1000 ಬೆಂಜ್, ಡೆಸ್ಕ್‌ ಸರ್ಕಾರಿ ಶಾಲೆಗೆ ವಿತರಣೆ

ಬೆಂಗಳೂರು, ಜನವರಿ 05: ಪ್ಲಾಸ್ಟಿಕ್‌ ತಾಜ್ಯಗಳ ಮರುಬಳಕೆ ವಿಭಿನ್ನ ಪ್ರಯತ್ನದಲ್ಲಿ ಐಟಿಸಿ ಸಂಸ್ಥೆಯ ಸನ್‌ಫೀಸ್ಟ್ ಹಿಪ್ಪಿ ನೂಡಲ್ಸ್‌ ಹಾಗೂ ವೇ ಫಾರ್‌ ಲೈಫ್ ಸರ್ಕಾರೇತರ (ಎನ್‌ಜಿಓ) ಸಂಸ್ಥೆ ಯಶಸ್ವಿಯಾಗಿದೆ. ತ್ಯಾಜ್ಯದಿಂದ ತಯಾರಿಸಲಾದ

ಪ್ಲಾಸ್ಟಿಕ್‌ನಿಂದ ಬೆಂಜ್ ಹಾಗೂ ಡೆಸ್ಕ್‌ ಗಳನ್ನು ತಯಾರಿ, ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀಡಲಾಗಿದೆ.

ಕ್ರೀಡಾ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರ ನೇತೃತ್ವದಲ್ಲಿ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ಸಾವಿರಕ್ಕೂ ಹೆಚ್ಚು ಬೆಂಚ್ ಹಾಗೂ ಡೆಸ್ಕ್‌ಗಳನ್ನು ಜಕ್ಕೂರು ಸರ್ಕಾರಿ ಶಾಲೆಗೆ ವಿತರಿಸಲಾಯಿತು.

Distribution To Government School Of 1000 Benches And Desks Made Recycled Plastic Waste

ಈ ಸಂದರ್ಭದಲ್ಲಿ ಮಾತನಾಡಿದ ಐಟಿಸಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಕವಿತಾ ಚತುರ್ವೇದಿ ಅವರು, ಐಟಿಸಿ ಸಂಸ್ಥೆಯ ಸನ್‌ಫೀಸ್ಟ್‌ ಹಿಪ್ಪಿ ಹಾಗೂ ವೇ ಫಾರ್‌ ಲೈಫ್‌ ಎನ್‌ಜಿಓ ಜೊತೆಗೂಡಿ 'ವರ್ಲ್ಡ್‌ ಥ್ರಾಶ್‌ ಟು ಟ್ರೆಶರ್" ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಭಾಗವಾಗಿ 1,000 ಬೆಂಜ್ ಮತ್ತು ಡೆಸ್ಕ್‌ಗಳನ್ನು ತಯಾರಿಸಲಾಗಿದೆ. ಇದಕ್ಕಾಗಿ 18,000 ಕೆ.ಜಿ ಪ್ಲಾಸ್ಟಿಕ್‌ ಅನ್ನು ಬಳಕೆ ಮಾಡಲಾಗಿದೆ ಎಂದು ವಿವರಿಸಿದರು.

ನಾಡಿನೆಲ್ಲಡೆ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವಂತೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಲೆ ಇವೆ. ಆದರೆ ಈಗಾಗಲೇ ಬಳಕೆ ಮಾಡಿರುವ ಪ್ಲಾಸ್ಟಿಕ್‌ ಪರಿಸರವನ್ನು ಹಾಳು ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಪ್ಲಾಸ್ಟಿಕ್‌ನನ್ನು ಮರುಬಳಕೆ ಮಾಡುವ ಥ್ರಾಶ್ ಟು ಟ್ರೆಶರ್‌ ಕಾರ್ಯಕ್ರಮವನ್ನು ವಿಶ್ವಾದ್ಯಂತ ಹಮ್ಮಿಕೊಂಡಿದ್ದೇವೆ.

Distribution To Government School Of 1000 Benches And Desks Made Recycled Plastic Waste

ಪಸ್ತುತದಲ್ಲಿ ಬೆಂಗಳೂರಿನಲ್ಲಿ ಈ ಪ್ಲಾಸ್ಟಿಕ್‌ ರೀಸೈಕಲ್ ಮಾಡಿ ತಯಾರಿಸಿದ ಬೆಂಚ್‌ ಹಾಗೂ ಡೆಸ್ಕ್‌ಗಳನ್ನು ಜಕ್ಕೂರಿನ ಸರ್ಕಾರಿ ಶಾಲೆಗೆ ನೀಡಲಾಗಿದೆ. ಇನ್ನಷ್ಟು ಡೆಸ್ಕ್‌ ತಯಾರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷ 2024ರ ಮಾರ್ಚ್‌ ಒಳಗಾಗಿ ಶಾಲೆಗಳಿಗೆ ನೀಡಲಿದ್ದೇವೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಮಕ್ಕಳಿಗೂ ತರಬೇತಿ

ಪ್ಲಾಸ್ಟಿಕ್‌ ತ್ಯಾಜ್ಯಗಳ ಮರುಬಳಕೆ ಕುರಿತು ಮಕ್ಕಳಿಗೂ ತರಬೇತಿ ನೀಡಲು ಎಲ್ಲಾ ಶಾಲೆಗಳೊಂದಿಗೆ ಈ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶ್ವಾದ್ಯಂತ ಸುಮಾರು 100 ನಗರಗಳಲ್ಲಿ 3.5 ಮಿಲಿಯನ್‌ ಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್‌ ಮರು ಬಳಕೆಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+