Get Updates
Get notified of breaking news, exclusive insights, and must-see stories!

ಮಾಜಿ ಪ್ರಧಾನಿ ಪುತ್ರ ಎಚ್.ಡಿ.ರೇವಣ್ಣಗೆ ಹೈಕೋರ್ಟ್ ಆದೇಶದಿಂದ ಆಘಾತ!

ಬೆಂಗಳೂರು: ಒಂದು ಕಡೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ದೋಸ್ತಿಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಇದೇ ಸಮಯದಲ್ಲಿ ಜೆಡಿಎಸ್ ಹಿರಿಯ ನಾಯಕ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಆಘಾತ ಎದುರಾಗಿದೆ. ಕರ್ನಾಟಕದ ಹೈಕೋರ್ಟ್ ಈಗ ನೀಡಿರುವ ಆದೇಶವು ಮಾಜಿ ಪ್ರಧಾನಿ ಪುತ್ರನಿಗೆ ದೊಡ್ಡ ಶಾಕ್ ಕೊಟ್ಟಿದೆ. ಹಾಗಾದ್ರೆ ಈಗ ಹೈಕೋರ್ಟ್ ಎಚ್.ಡಿ. ರೇವಣ್ಣ ಅವರ ವಿರುದ್ಧ ನೀಡಿರುವ ಆದೇಶ ಏನು?

ಅಂದಹಾಗೆ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌ಡಿ ರೇವಣ್ಣ ವಿರುದ್ಧ ಚುನಾವಣಾ ಅಕ್ರಮದ ಆರೋಪ ಮಾಡಲಾಗಿತ್ತು. ಎಚ್.ಡಿ. ರೇವಣ್ಣ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯಲ್ಲಿ ರೇವಣ್ಣ ಹಲವು ಅಕ್ರಮ ನಡೆಸಿ ಆಯ್ಕೆಯಾಗಿದ್ದಾರೆ. ಹೀಗಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಹೀಗೆ ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಎಚ್.‌ಡಿ. ರೇವಣ್ಣ ಅವರಿಗೆ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಹೊಸ ಸಮಸ್ಯೆಗೆ ಎಚ್.ಡಿ. ರೇವಣ್ಣ ಅವರು ಸಿಲುಕಿದಂತಾಗಿದೆ.

Discover Why HD Revanna Is In A Big Trouble After The Karnataka High Court Order

ಅರ್ಜಿ ಸಲ್ಲಿಸಿದ್ದು ಯಾರು?

ಅಷ್ಟಕ್ಕೂ ಹಿಂದೆ ವಿಚಾರಣೆ ನಡೆಸಿದ್ದಾಗ ರೇವಣ್ಣ ಅವರಿಗೆ ವಿಧಾನಸಭೆಯ ಕಾರ್ಯದರ್ಶಿಗಳ ಮೂಲಕ ಸಮನ್ಸ್ ಜಾರಿ ಮಾಡಲು ಹೈಕೋರ್ಟ್ ಆದೇಶ ನೀಡಿತ್ತು. ಆದರೆ ರೇವಣ್ಣ ಅವರಿಗೆ ಸಮನ್ಸ್ ತಲುಪಿರಲಿಲ್ಲ ಎನ್ನಲಾಗಿದೆ. ಮೇನಲ್ಲಿ ನಡೆದ ವಿಧಾನಸಭೆ ಎಲೆಕ್ಷನ್‌ನಲ್ಲಿ ರೇವಣ್ಣ ಆಯ್ಕೆ ಪ್ರಶ್ನಿಸಿ ಅವರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಜಿ.ದೇವರಾಜೇಗೌಡ ಅವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಚುನಾವಣೆ ಅಕ್ರಮದ ಕುರಿತಾಗಿ ಆರೋಪ ಮಾಡಲಾಗಿತ್ತು.

ನವೆಂಬರ್ 29ಕ್ಕೆ ವಿಚಾರಣೆ ಮುಂದೂಡಿಕೆ

ಇಂದು ಮತ್ತೆ ಅರ್ಜಿ ವಿಚಾರಣೆ ನಡೆದು, ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಪತ್ರಿಕೆಗಳಲ್ಲಿ ಜಾಹೀರಾತಿನ ಮೂಲಕ ಸಮನ್ಸ್ ನೀಡಲು ನಿರ್ದೇಶನ ನೀಡಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದ್ರೆ ಚುನಾವಣೆ ತಕರಾರು ಅರ್ಜಿ ನಿಯಂತ್ರಿಸುವ ನಿಯಮಗಳ ಪ್ರಕಾರವೇ ಸಮನ್ಸ್ ಮತ್ತೆ ಜಾರಿ ಮಾಡಲಾಗುವುದು ಎಂದು ಹೈಕೋರ್ಟ್ ತಿಳಿಸಿ ವಿವರಣೆ ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರು, ಸಮನ್ಸ್ ಜಾರಿಗೆ ಆದೇಶಿಸಿ ಅರ್ಜಿಯ ವಿಚಾರಣೆಯನ್ನು ಇದೀಗ ನವೆಂಬರ್ 29ಕ್ಕೆ ಮುಂದೂಡಿದ್ದಾರೆ.

ಏನಿದು ರೇವಣ್ಣ ವಿರುದ್ಧ ಆರೋಪ?

ಅಂದಹಾಗೆ ಚುನಾವಣೆಯ ಸಮಯದಲ್ಲಿ ರೇವಣ್ಣ ಅವರ ಬೆಂಬಲಿಗರು ಮತದಾರರಿಗೆ ತಲಾ 2 ಕೋಳಿ ಮತ್ತು 2 ಸಾವಿರ ರೂಪಾಯಿ ಹಣ ಹಂಚಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಹೀಗೆ ನಗದು ಹಂಚಿ ಮತ ಹಾಕಿಸಿಕೊಂಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ರು. ಈ ನಡುವೆ ಇನ್ನೂ ಹಲವು ವಿಚಾರಗಳನ್ನು ಅರ್ಜಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಈಗ ಈ ಕುರಿತು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

Discover Why HD Revanna Is In A Big Trouble After The Karnataka High Court Order

ರೇವಣ್ಣ ಅವರ ಮುಂದಿನ ನಡೆ?

ಮತ್ತೊಂದು ಕಡೆ ಎಚ್.ಡಿ. ರೇವಣ್ಣ & 2ನೇ ಸ್ಥಾನ ಪಡೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇಬ್ಬರು ಮತದಾರರಿಗೆ ಲಂಚ ನೀಡಿ ಪ್ರಚೋದನೆ ನೀಡಿದ್ದಾರೆಂದು ಅರ್ಜಿದಾರರು ಈ ಮೂಲಕ ಆರೋಪ ಮಾಡಿದ್ದರು. ಅವರಿಬ್ಬರೂ ಪಡೆದ ಮತಗಳನ್ನ ಅಮಾನ್ಯಗೊಳಿಸಬೇಕು ಎಂದು ದೇವರಾಜೇಗೌಡ ಒತ್ತಾಯ ಮಾಡಿದ್ದರು. ಈ ಕುರಿತಾಗಿ ಆಗಸ್ಟ್ 2ರಂದು ಹೈಕೋರ್ಟ್ ರೇವಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದ್ರೆ ಅದನ್ನ ರೇವಣ್ಣ ಅವರು ಸ್ವೀಕರಿಸಿರಲಿಲ್ಲ. ಈಗ ರೇವಣ್ಣ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಇನ್ನು ಸೆಪ್ಟೆಂಬರ್ 4 ರಂದು ಹೈಕೋರ್ಟ್, ವಿಧಾನಸಭೆ ಕಾರ್ಯದರ್ಶಿ ಮೂಲಕ ಸಮನ್ಸ್‌ಗೆ ಆದೇಶಿಸಿತ್ತು. ಈ ಚುನಾವಣೆಯಲ್ಲಿ ರೇವಣ್ಣ ಅವರು 88,103 ಮತಗಳನ್ನ ಪಡೆದು ಗೆಲುವು ಸಾಧಿಸಿದ್ರೆ, ಶ್ರೇಯಸ್ ಪಟೇಲ್ ಅವರು 84,951 ಮತವನ್ನ ಪಡೆದು 2ನೇ ಸ್ಥಾನ ಪಡೆದಿದ್ದರು. ಹಾಗೇ ದೇವರಾಜೇಗೌಡ ಅವರು 4,850 ಮತ ಪಡೆದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+