‘ಛೇ ಇದೆಂತಹಾ ದುಸ್ಥಿತಿ ಬೊಮ್ಮಾಯಿ ಅವರೇ’... ಕಾಂಗ್ರೆಸ್ ಹಿಂಗೆ ಹೇಳಿದ್ದು ಯಾಕೆ?
ಲೋಕಸಭೆ ಚುನಾವಣೆ 2024 ಇನ್ನೇನು ಬಂದೇ ಬಿಡುತ್ತೆ, ಅದಕ್ಕೂ ಮೊದಲೇ ಕಾಂಗ್ರೆಸ್ & ಬಿಜೆಪಿ ನಡುವೆ ಕಿಚ್ಚು ಹೊತ್ತಿಕೊಂಡಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಟಿಕೆಟ್ ಘೋಷಣೆಯ ನಂತರ ಎರಡೂ ಪಕ್ಷಗಳು ಪರಸ್ಪರ ಕೆಸರೆರಚಾಟ ಮುಂದುವರಿಸಿವೆ. ಹೀಗಿದ್ದಾಗ ದಿಢೀರ್, ಕರ್ನಾಟಕ ಕಾಂಗ್ರೆಸ್ 'ಛೇ ಇದೆಂತಹಾ ದುಸ್ಥಿತಿ ಬೊಮ್ಮಾಯಿ ಅವರೇ...' ಅಂತಾ ಹೇಳಿದ್ದು ಯಾಕೆ ಗೊತ್ತಾ? ಬನ್ನಿ ತಿಳಿಯೋಣ.
ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ನಂತರ ಭಾರಿ ತಲ್ಲಣ ಸೃಷ್ಟಿಯಾಗಿದೆ. ಅದರಲ್ಲೂ ಬಿಜೆಪಿ ಒಳಗೆ ಈಗ ಅಸಮಾಧಾನದ ಬೆಂಕಿಯು ಭಾರಿ ದೊಡ್ಡ ಪ್ರಮಾಣದಲ್ಲಿ ಆವರಿಸಿದ್ದು. ಹೀಗಿದ್ದಾಗ ಕರ್ನಾಟಕ ಕಾಂಗ್ರೆಸ್ ಈ ಬೆಂಕಿಗೆ, ತುಪ್ಪ ಸುರಿಯುತ್ತಿದೆ ಎಂಬ ಆರೋಪವು ಕೇಳಿಬರುತ್ತಿದೆ. ಇಂತಹ ಆರೋಪಗಳ ನಡುವೆ ದಿಢೀರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ. ಹಾಗಾದರೆ ಅಸಲಿಗೆ ಕಾಂಗ್ರೆಸ್ ಈಗ ಬೊಮ್ಮಾಯಿ ಕುರಿತು ಹೇಳಿದ್ದೇನು? ಸಂಪೂರ್ಣವಾದ ಮಾಹಿತಿಗೆ ಮುಂದೆ ಓದಿ.

ಕಾಲಿಗೆ ಬಿದ್ದರಾ ಬೊಮ್ಮಾಯಿ?
ಈಗಾಗಲೇ ಘೋಷಣೆ ಮಾಡಿರುವಂತೆ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಕ್ಷೇತ್ರದ ಅಂದ್ರೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಹೀಗಾಗಿ ಬೊಮ್ಮಾಯಿ ಅವರು ಮಾಜಿ ಶಾಸಕ & ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗೇ ಇದೇ ವೇಳೆ ಬಿ.ಸಿ. ಪಾಟೀಲ್ ಅವರ ಬೆಂಬಲ ಕೋರಿದ್ದಾರೆ. ಈ ವಿಡಿಯೋ ಕುರಿತು ಈಗ ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ. ಹಾಗಾದರೆ, ಅಸಲಿಗೆ ಕಾಂಗ್ರೆಸ್ ಹೇಳಿದ್ದೇನು? ಆ ವಿಡಿಯೋದಲ್ಲಿ ಅಂತಹದ್ದು ಏನಿದೆ? ಮುಂದೆ ಓದಿ.
ಛೇ ಇದೆಂತಹಾ ದುಸ್ಥಿತಿ @BSBommai ಅವರೇ,
— Karnataka Congress (@INCKarnataka) March 15, 2024
ಮಾಜಿ ಮುಖ್ಯಮಂತ್ರಿಯಾಗಿ, ವಯಸ್ಸಿನಲ್ಲಿ ಹಿರಿಯರಾಗಿ ಕಿರಿಯ ವಯಸ್ಸಿನ ಬಿ ಸಿ ಪಾಟೀಲ್ ಕಾಲಿಗೆ ಬೀಳುವುದೇ?
“ಗೋ ಬ್ಯಾಕ್ ಬೊಮ್ಮಯಿ“ ಅಭಿಯಾನ ಶುರುವಾಗದಿರಲಿ ಎಂದು ಅಂಟಸಿಪೇಟರಿ ಬೇಲ್ ತೆಗೆದುಕೊಳ್ಳುತ್ತಿರುವುದಾ ಅಥವಾ ಟಿಕೆಟ್ ವಂಚಿತ ಪಾಟೀಲರನ್ನು ಓಲೈಸಿಕೊಳ್ಳುತ್ತಿರುವುದಾ?
ಬೊಮ್ಮಯಿಯವರ ಇಂತಹ… pic.twitter.com/tkhGwZzeqs
ಇದೀಗ ಕಾಂಗ್ರೆಸ್ ಮಾಡಿರುವ ಟ್ವೀಟ್‌ನಲ್ಲಿ 'ಛೇ ಇದೆಂತಹಾ ದುಸ್ಥಿತಿ @BSBommai ಅವರೇ, ಮಾಜಿ ಮುಖ್ಯಮಂತ್ರಿಯಾಗಿ, ವಯಸ್ಸಿನಲ್ಲಿ ಹಿರಿಯರಾಗಿ ಕಿರಿಯ ವಯಸ್ಸಿನ ಬಿ ಸಿ ಪಾಟೀಲ್ ಕಾಲಿಗೆ ಬೀಳುವುದೇ? "ಗೋ ಬ್ಯಾಕ್ ಬೊಮ್ಮಯಿ" ಅಭಿಯಾನ ಶುರುವಾಗದಿರಲಿ ಎಂದು ಅಂಟಸಿಪೇಟರಿ ಬೇಲ್ ತೆಗೆದುಕೊಳ್ಳುತ್ತಿರುವುದಾ ಅಥವಾ ಟಿಕೆಟ್ ವಂಚಿತ ಪಾಟೀಲರನ್ನು ಓಲೈಸಿಕೊಳ್ಳುತ್ತಿರುವುದಾ ಬೊಮ್ಮಯಿಯವರ ಇಂತಹ ಶರಣಾಗತಿಯ ಸ್ಥಿತಿ ದಯನಿಯವಾಗಿದೆ.' ಎಂದು ಇದೀಗ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಮೂಲಕ ಬಿಜೆಪಿ ನಾಯಕರನ್ನು ಕರ್ನಾಟಕ ಕಾಂಗ್ರೆಸ್ ಕೆಣಕಿದೆ.
ಒಟ್ನಲ್ಲಿ ಕಿರಿಕ್ ಬಲು ಜೋರಾಗಿದೆ, ರಾಜಕೀಯ ಅಖಾಡದಲ್ಲಿ ನಡೆಯುತ್ತಿರುವ ಕಿತ್ತಾಟ & ತಿಕ್ಕಾಟ ಈಗ ಸೋಷಿಯಲ್ ಮೀಡಿಯಾಗೂ ಬಂದು ನಿಂತಿದೆ. ಬಿಜೆಪಿ ನಾಯಕರು ಹಾಗು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಕಾಂಗ್ರೆಸ್ ಈ ರೀತಿ ವ್ಯಂಗ್ಯವಾಡಿದೆ. ಹೀಗಾಗಿ ಕಾಂಗ್ರೆಸ್‌ನ ಈ ವ್ಯಂಗ್ಯಕ್ಕೆ ಬಿಜೆಪಿ ಯಾವ ರೀತಿ ತಿರುಗೇಟು ನೀಡಲಿದೆ? ಅನ್ನೋನದ್ನ ಕಾದು ನೋಡಬೇಕಿದೆ.












Click it and Unblock the Notifications