ಸಿದ್ದರಾಮಯ್ಯ ಅವರಿಗೆ ಈಗ ಅಷ್ಟೊಂದು ಪವರ್ ಇಲ್ಲ: ಎಚ್.ಆಂಜನೇಯ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಸವಾಲು ಇದೀಗ ಎದುರಾಗುತ್ತಿವೆ. ಅದರಲ್ಲೂ ಆಂತರಿಕ ಅಸಮಧಾನ ಕಾಂಗ್ರೆಸ್ ನಾಯಕರಿಗೆ ಬಿಡಿಸಲಾಗದ ಕಗ್ಗಂಟಾಗಿದೆ. ಇದೇ ಸಮಯದಲ್ಲಿ, ಒಂದು ಕಾಲದಲ್ಲಿ ಸಿಎಂ ಸಿದ್ದರಾಮಯ್ಯರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಚ್.ಆಂಜನೇಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅದು ಜಾತಿ ಗಣತಿ ಸ್ವೀಕಾರದ ವಿಚಾರದಲ್ಲಿ!
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ 2013ರಲ್ಲಿ ಕೂಡ ಸಿಎಂ ಆಗಿದ್ದರು. ಆಗ ಅವರ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಫುಲ್ ಪವರ್ ಕೊಟ್ಟಿತ್ತು. ಆದರೆ ಈಗ ಪರಿಸ್ಥಿತಿ ಹಂಗೆ ಇಲ್ಲ ಅನ್ನೋ ಆರೋಪ ಕೇಳಿಬರುತ್ತಿತ್ತು. ಆದರೆ ಈ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಎಚ್.ಆಂಜನೇಯ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅದು ಏನೆಂದರೆ ಸಿದ್ದರಾಮಯ್ಯ ಅವರಿಗೆ 2013ರಲ್ಲಿ ಇದ್ದಷ್ಟು ಸ್ವಾತಂತ್ರ್ಯ ಇಲ್ಲವೆಂದು.

ಜಾತಿ ಗಣತಿ ವಿಚಾರವಾಗಿ ಸ್ಫೋಟಕ ಹೇಳಿಕೆ!
ಕಾಂಗ್ರೆಸ್ ಭಾರತದಲ್ಲಿ ಒನ್‌ಲೈನ್ ಅಜೆಂಡಾ ಪ್ರದರ್ಶನ ಮಾಡುತ್ತಿದೆ, ಅದೇನೆಂದರೆ ಜಾತಿ ಗಣತಿ ವರದಿ ನಾವು ಅಧಿಕಾರಕ್ಕೆ ಬಂದರೆ ಅಕ್ಕಾ ಅಂತಾ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡುವ ವಾಗ್ದಾನ ನೀಡುತ್ತಿದ್ದಾರೆ.
ಈ ಸಮಯದಲ್ಲೇ ಕರ್ನಾಟಕದ ಜಾತಿ ಗಣತಿ ವಿಚಾರ ಕೂಡ ಪ್ರಸ್ತಾಪವಾಗುತ್ತಿದೆ. ಅದೇನೆಂದ್ರೆ ಕರ್ನಾಟಕದಲ್ಲಿ ಈಗಾಗಲೇ ಸಿದ್ಧವಾದ ಜಾತಿ ಗಣತಿ ವರದಿಯನ್ನ ರಿಲೀಸ್ ಮಾಡಿ, ಜನರ ಎದುರು ಇಡಲು ಕಾಂಗ್ರೆಸ್ ಹೈಕಮಾಂಡ್ ಹಿಂದೆ ಮುಂದೆ ಯೋಚಿಸುತ್ತಿದೆ ಅಂತಾ. ಹೀಗೆ ಈ ಆರೋಪದ ನಡುವೆ ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಸಂಚಲನ ಸೃಷ್ಟಿಸಿದೆ.
ಸಿದ್ದರಾಮಯ್ಯ ಅವರಿಗೆ ಅಷ್ಟು ಪವರ್ ಇಲ್ವಾ?
ಮೊದಲೇ ಹೇಳಿದಂತೆ 2013ರಲ್ಲಿ ಕೂಡ ಸಿದ್ದರಾಮಯ್ಯ ಸಿಎಂ ಆಗಿದ್ದರು, ಹಾಗೇ ಅವರು 2018ರ ತನಕ ಕರ್ನಾಟಕದ ಸಿಎಂ ಆಗಿ ಪೂರ್ಣಾವಧಿ ಮುಗಿಸಿದ್ದರು. ಆದರೆ ಈ ಬಾರಿಯ ಸರ್ಕಾರದಲ್ಲಿ, ಸಿದ್ದರಾಮಯ್ಯ ಅವರಿಗೆ ಅಷ್ಟೊಂದು ಸ್ವಾತಂತ್ರ ಸಿಕ್ಕಿಲ್ಲ, ಅನ್ನೋದು ಈಗ ಮಾಜಿ ಸಚಿವ ಎಚ್. ಆಂಜನೇಯ ಅವರು ಹೇಳಿರುವ ಮಾತಂತೆ. ಹೀಗಾಗಿ, ಜಾತಿ ಗಣತಿ ವರದಿ ಸ್ವೀಕಾರ ತಡವಾಗಿದೆ ಎಂದು ಮಾಜಿ ಸಚಿವ ಆಂಜನೇಯ ಅವರು ಬೆಂಗಳೂರಿನಲ್ಲಿ ಹೇಳಿರುವುದಾಗಿ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಒಟ್ನಲ್ಲಿ ಕರ್ನಾಟಕ ಕಾಂಗ್ರೆಸ್ ಒಳಗೆ ಜಾತಿ ಗಣತಿ ವರದಿ ಬಿಡುಗಡೆ ವಿಚಾರ ತೊಳಲಾಟ ತಂದೊಡ್ಡಿದೆ. ಹೀಗಾಗಿಯೇ ಅತ್ತ ಕಾಂಗ್ರೆಸ್ ಹೈಕಮಾಂಡ್ ಕೂಡ ಎಲ್ಲಾ ಆಂಗಲ್‌ನಲ್ಲೂ ಈ ವಿಚಾರವನ್ನು ಅಳೆದು & ತೂಗಿ ಲೆಕ್ಕ ಹಾಕುತ್ತಿದೆ. ಹೀಗಾಗಿ ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಆದರೆ ಲೋಕಸಭೆ ಚುನಾವಣೆಗೂ ಮೊದಲು ಕರ್ನಾಟಕದ ಜಾತಿ ಗಣತಿ ವಿಚಾರ ಕಿಚ್ಚು ಹೊತ್ತಿಸಿರುವುದು ಸುಳ್ಳಲ್ಲ. ಹೀಗಾಗಿ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಕುತೂಹಲ ಕೂಡ ಡಬಲ್ ಆಗುತ್ತಿದೆ.












Click it and Unblock the Notifications