ಕುಡುಕರಿಗೆ ಮತ್ತಷ್ಟು ಸಂಕಷ್ಟ, ಲಿವರ್ ಜೊತೆ ಜೇಬು ಕೂಡ ಸುಡುತ್ತೆ ಹುಷಾರ್!
ಕುಡುಕರು ಮೊದಲೇ ಕಷ್ಟದಲ್ಲಿದ್ದಾರೆ, ಕುಡುಕರಿಗೆ ಸರ್ಕಾರ ಸಹಾಯ ಮಾಡಬೇಕು ಅಂತೆಲ್ಲಾ ಇತ್ತೀಚೆಗೆ 'ಮದ್ಯ ಪ್ರಿಯ' ಸಂಘಟನೆ ಮನವಿ ಮಾಡಿತ್ತು. ಆದರೆ ಈ ಬಾರಿಯ ಬಜೆಟ್‌ನಲ್ಲಿಯೂ ಕುಡುಕರಿಗೆ ಶಾಕ್ ಸಿಕ್ಕಿದೆ. ಅದು ಯಾವುದೇ ಸರ್ಕಾರ ಬರಲಿ, ಕುಡುಕರಿಗೆ ಶಾಕ್ ಸಿಗೋದಂತೂ ಗ್ಯಾರಂಟಿ. ಇದೀಗ ಸಿಎಂ ಸಿದ್ದರಾಮಯ್ಯ ಅವರು 15ನೇ ಬಾರಿಗೆ ಬಜೆಟ್ ಮಂಡಿಸುವಾಗ ಕೂಡ ಕುಡುಕರಿಗೆ ಬೆಲೆ ಏರಿಕೆ ಆಘಾತ ನೀಡಿದ್ದಾರೆ ಅಂತಾ ಕುಡುಕರು ಗೊಣಗುತ್ತಿದ್ದಾರೆ!
ಹೌದು, ಎಣ್ಣೆ ಹೊಡಿಯದೆ ಕೆಲವರಿಗೆ ನಿದ್ದೆ ಬರೋದಿಲ್ಲ. ಇನ್ನೂ ಕೆಲವರಿಗೆ ಕೈಕಾಲು ಕೂಡ ಆಡೋದಿಲ್ಲ. ಎಣ್ಣೆ ಅಂದ್ರೆ ಲಿಕ್ಕರ್ ಆರೋಗ್ಯಕ್ಕೆ ಹಾನಿಕರ ಅಂತಾ ವೈದ್ಯರು ಹೇಳಿದರೆ, ಇಲ್ಲ ಎಣ್ಣೆ ತುಂಬಾ ಒಳ್ಳೆಯದು. ಕಷ್ಟಗಳನ್ನು, ನೋವನ್ನು ಮರೆ ಮಾಚುವ ಔಷಧ ಅಂತಾ ಮದ್ಯ ಪ್ರಿಯರು ಎಂಜಾಯ್ ಮಾಡುತ್ತಾರೆ. ಹೀಗಿದ್ದಾಗ ಪ್ರತಿ ಸರ್ಕಾರವೂ ಕುಡುಕರಿಗೆ ಶಾಕ್ ಕೊಡುತ್ತಲೇ ಇದೆ. ಅದು ಬಿಜೆಪಿ ಸರ್ಕಾರವೇ ಇರಲಿ, ಕಾಂಗ್ರೆಸ್ ಸರ್ಕಾರವೇ ಬರಲಿ. ಎಣ್ಣೆ ರೇಟ್ ಜಾಸ್ತಿ ಆಗ್ತಾನೆ ಇದೆ ಅಂತ ಕುಡುಕರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಬೇಸರ ಹೊರಹಾಕುತ್ತಿದ್ದಾರೆ.

ಏನಪ್ಪಾ ಇದು ಎಣ್ಣೆ ರೇಟ್?
ಕರ್ನಾಟಕದಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತಾ ಕೊರಗುತ್ತಿದ್ದ ಮದ್ಯ ಪ್ರಿಯರಿಗೆ ಮತ್ತೆ ಶಾಕ್ ಸಿಗುತ್ತಿದ್ದು ದುಬಾರಿ ದುನಿಯಾದಲ್ಲಿ 'ಮದ್ಯ' ಪ್ರಿಯರಿಗೆ ಆಘಾತವೇ ಎದುರಾಗಿಬಿಟ್ಟಿದೆ.'ಕೊರೊನಾ' ನಂತರ ರಾಜ್ಯದಲ್ಲಿ ಮದ್ಯದ ಬೆಲೆ ವಿಪರೀತ ಏರಿಕೆ ಆಗುತ್ತಿದೆ ಎಂಬುದು ಕುಡುಕರು ಅಥವಾ ಮದ್ಯ ಪ್ರಿಯರ ಆರೋಪ. ಆದರೆ ಅಸಲಿ ಕಹಾನಿ ಏನೆಂದರೆ, ಹಿಂದಿನಿಂದ ಬಜೆಟ್ ಘೋಷಣೆ ಆಗುತ್ತಿದ್ದಂತೆ ಮದ್ಯ ಬೆಲೆ ಏರಿಕೆ ಆಗುತ್ತಾ ಬಂದಿದೆ.
ಈಗಲೂ ಅಷ್ಟೇ ಮದ್ಯ ರೇಟ್ ಜಾಸ್ತಿ ಆಗುತ್ತಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಮಂಡನೆಯಲ್ಲಿ ಮದ್ಯದ ಮೇಲಿನ ಸುಂಕವನ್ನ, ಅಂದ್ರೆ ತೆರಿಗೆಯನ್ನು ಈಗ ಪರಿಷ್ಕರಣೆ ಮಾಡಲಾಗುವುದು ಎಂದಿದ್ದಾರೆ. ಹೀಗಾಗಿ ಮದ್ಯದ ಬೆಲೆ ಹೆಚ್ಚಳ ಆಗೋದು ಪಕ್ಕಾ ಎನ್ನಲಾಗಿದ್ದು, ಈ ಬಗ್ಗೆ ಇದೀಗ ಭಾರಿ ದೊಡ್ಡ ಚರ್ಚೆಯೇ ಶುರುವಾಗಿದೆ. ಹಾಗಾದರೆ ರಾಜ್ಯ ಸರ್ಕಾರ ಇದೀಗ ಮತ್ತೆ ಏಕೆ ಎಣ್ಣೆ ಬೆಲೆ ಹೆಚ್ಚಳ ಮಾಡುತ್ತಿದೆ ಗೊತ್ತೆ?
ಕುಡುಕರಿಗೆ ಈಗ ಸಿಕ್ಕಾಪಟ್ಟೆ ಬೇಸರ!
2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದಲೇ, 28,181 ಕೋಟಿ ರೂಪಾಯಿ ರಾಜ್ಯ ಸರ್ಕಾರಕ್ಕೆ ಬಂದಿದೆ. 2024-25ನೇ ಸಾಲಿಗೆ 38,525 ಕೋಟಿ ರೂ. ತೆರಿಗೆಯನ್ನ ಸಂಗ್ರಹಣೆ ಮಾಡುವ ಗುರಿಯನ್ನ ನಿಗದಿಪಡಿಸಲಾಗಿದೆ. ಹೀಗಾಗಿ ಈ ಬಾರಿ ಕೂಡ ಮದ್ಯದ ಬೆಲೆ ಏರಿಕೆ ಆಗೋದು ಪಕ್ಕಾ ಅಂತಾ ಗೊತ್ತಾಗುತ್ತಿದೆ. ಈ ವಿಚಾರ ಈಗ ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಕೆಲವು ತಿಂಗಳ ಅಂತರದಲ್ಲಿ ಮತ್ತೆ ಮತ್ತೆ ಮದ್ಯದ ದರ ಏರಿಕೆ ಆಗಿರುವುದು ಚರ್ಚೆಗೆ ಬಂದಿದೆ. ಯಾವುದೇ ಸರ್ಕಾರ ಬಂದರೂ ಕುಡುಕರ ಕಷ್ಟಗಳು ಕಡಿಮೆ ಆಗಿಲ್ಲ ಅಂತಾ ಮದ್ಯ ಪ್ರಿಯರು ಈಗ ಬೇಸರ ಮಾಡಿಕೊಂಡಿದ್ದಾರೆ.

ವೆರೈಟಿ ವೆರೈಟಿ ಕುಡುಕರು ಇದ್ದಾರೆ!
ಮದ್ಯ ಪ್ರಿಯರಲ್ಲಿ ಸಾಕಷ್ಟು ವೆರೈಟಿ ಇದ್ದು, ಕೆಲವರು ವಿಸ್ಕಿ ಇಷ್ಟಪಡ್ತಾರೆ. ಆದ್ರೆ ಇನ್ನೂ ಕೆಲವರು ರಮ್ ಮೊರೆ ಹೋಗ್ತಾರೆ. ಮತ್ತೆ ಕೆಲವರಿಗೆ ಬ್ರಾಂಡಿ ಅಂದ್ರೆ ತುಂಬಾನೇ ಇಷ್ಟ. ಆದರೆ ಬಹುತೇಕರು ಬಿಯರ್ ಪ್ರಿಯರು. ಹೀಗೆ ಎಲ್ಲಾ ಬ್ರ್ಯಾಂಡ್ ಟೇಸ್ಟ್ ಮಾಡುವವರು ಇರ್ತಾರೆ. ಇವರೆಲ್ಲರ ಜೇಬಿಗೂ ಇನ್ನುಮುಂದೆ ಹೊರೆಯಾಗೋದು ಗ್ಯಾರಂಟಿ. ಯಾಕಂದ್ರೆ ಈಗ ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿ ಎಲ್ಲಾ ಬಗೆಯ ಮದ್ಯದ ರೇಟ್ ಏರಿಕೆ ಆಗೋದು ಬಹುತೇಕ ಪಕ್ಕಾ ಆಗಿದೆ. ಆದರೆ ಬಜೆಟ್ ಆದೇಶ ಜಾರಿಗೆ ಬಂದ ನಂತರ ಎಷ್ಟು ರೇಟ್ ಜಾಸ್ತಿ ಆಯ್ತು ಅನ್ನೋದು ಗೊತ್ತಾಗಲಿದೆ.
ಒಟ್ನಲ್ಲಿ ಎಣ್ಣೆ ಪ್ರಿಯರಿಗೆ ಮತ್ತೆ ಮತ್ತೆ ಶಾಕ್ ಸಿಗುತ್ತಿದೆ. 2023-24ರ ಬಜೆಟ್‌ನಲ್ಲಿ ಕೂಡ ಇದೇ ರೀತಿ ಮದ್ಯದ ಬೆಲೆ ಏರಿಕೆ ಮಾಡಲಾಗಿತ್ತು, ಇದೀಗ 2024-25ನೇ ಸಾಲಿನಲ್ಲಿ ಕೂಡ ಮದ್ಯ ದರ ಏರಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ, ಮತ್ತೊಮ್ಮೆ ಎಣ್ಣೆ ಪ್ರಿಯರಿಗೆ ಶಾಕಿಂಗ್ ಸುದ್ದಿ ಸಿಕ್ಕಂತಾಗಿದೆ. ಇದೀಗ ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ಚರ್ಚೆ ಕೂಡ ನಡೆಯುತ್ತಿದೆ.












Click it and Unblock the Notifications