33 ಮಂದಿಯನ್ನೂ ಡಿಸಿಎಂ ಮಾಡಿ ಮುರಿಯಲಾರದ ಇತಿಹಾಸ ಸೃಷ್ಟಿಸಿ!
ಅತ್ತ ದೆಹಲಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ವಿಚಾರ ಬಹುತೇಕ ಫೈನಲ್ ಹಂತಕ್ಕೆ ಬಂದಿದೆ. ಇದೇ ಹೊತ್ತಲ್ಲಿ ಎರಡೂ ಪಕ್ಷದ ನಾಯಕರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದಲ್ಲಿ ಕಿಡಿ ಹೊತ್ತಿಸಿದ ಡಿಸಿಎಂ ವಿಚಾರವನ್ನೇ ಹಿಡಿದು ಕಮಲ ಪಾಳಯ ಕಾಂಗ್ರೆಸ್‌ಗೆ ಟಕ್ಕರ್ ಕೊಟ್ಟಿದೆ. ಹಾಗಾದರೆ ಈಗ ಸಂಚಲನ ಸೃಷ್ಟಿಸಿರುವ ಡಿಸಿಎಂ ಫೈಟ್ ಬಗ್ಗೆ ಕರ್ನಾಟಕ ಬಿಜೆಪಿ ಹೇಳಿದ್ದೇನು?
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇನ್ನೂ 100 ದಿನ ಕಳೆದಿದೆ ಅಷ್ಟೇ, ಅಷ್ಟರಲ್ಲೇ ಆ ಪಕ್ಷದ ಒಳಗೆ ಡಿಸಿಎಂ ಆಯ್ಕೆ ವಿಚಾರದಲ್ಲಿ ಕಿರಿಕಿರಿ ಶುರುವಾಗಿದೆ. ಒಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಣ ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಬಣವಿದೆ ಎಂದು BJP ನಾಯಕರು ಪದೇ ಪದೆ ಆರೋಪ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಒಳಗೆ ಕಿಚ್ಚು ಹೊತ್ತಿದ್ದು, ಡಿಸಿಎಂ ಸ್ಥಾನ ಹೆಚ್ಚಿಸಬೇಕು ಅಂತಾ ಸ್ವತಃ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಇದೀಗ ಅದನ್ನೇ ಅಸ್ತ್ರ ಮಾಡಿಕೊಂಡ ಬಿಜೆಪಿ, ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದೆ.

ಕರ್ನಾಟಕ ಬಿಜೆಪಿ ಹೇಳಿದ್ದೇನು?
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದೆ. ಕಾಂಗ್ರೆಸ್ ಒಳಜಗಳ ಪ್ರಸ್ತಾಪಿಸಿ, ಸರ್ಕಾರದಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ ಎಂಬುದನ್ನು ಪತ್ರ ಬರೆದು ಸಿದ್ದರಾಮಯ್ಯ ಅವರ ವಿರುದ್ಧ ಸಮರ ಸಾರಿದ್ದ ರಾಯರೆಡ್ಡಿ ಅವರು ಈಗ ಗಂಭೀರ ಅಸಮಾಧಾನಿತರ ವರ್ಗ ಸೇರಿದ್ದಾರೆ. ತಮಗೂ ಒಂದು ಸ್ಥಾನ ಸೇರಿಸಿ 6 ಮಂದಿ ಡಿಸಿಎಂ ಮಾಡಲು ಈಗ ಒತ್ತಡ ಹೇರುತ್ತಿದ್ದಾರೆ. ಆಡಳಿತವೇ ನಿಸ್ತೇಜವಾಗಿರುವ
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ನಿತ್ಯವೂ ಅಧಿಕಾರದ ಲಾಬಿಯಲ್ಲೇ ಮುಳುಗಿದೆ. ಎಂದು ಬಿಜೆಪಿ ಆರೋಪ ಮಾಡಿದೆ.
ಸರ್ಕಾರದಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ ಎಂಬುದನ್ನು ಪತ್ರ ಬರೆದು @siddaramaiah ರವರ ವಿರುದ್ಧ ಸಮರ ಸಾರಿದ್ದ ರಾಯರೆಡ್ಡಿಯವರು ಈಗ ಗಂಭೀರ ಅಸಮಾಧಾನಿತರ ವರ್ಗ ಸೇರಿದ್ದಾರೆ.
— BJP Karnataka (@BJP4Karnataka) September 23, 2023
ತಮಗೂ ಒಂದು ಸ್ಥಾನ ಸೇರಿಸಿ ಆರು ಮಂದಿ ಡಿಸಿಎಂ ಮಾಡಲು ಈಗ ಒತ್ತಡ ಹೇರುತ್ತಿದ್ದಾರೆ. ಆಡಳಿತವೇ ನಿಸ್ತೇಜವಾಗಿರುವ @INCKarnataka ಸರ್ಕಾರವು ನಿತ್ಯವೂ ಅಧಿಕಾರದ… https://t.co/xVZyvOVmef
33 ಮಂದಿಯನ್ನೂ ಡಿಸಿಎಂ ಮಾಡಿ!
ಅಲ್ಲದೆ ಡಿಸಿಎಂ ವಿಚಾರಕ್ಕೆ ಎದುರಾದ ಕಿತ್ತಾಟವನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಇರುವ 33 ಮಂದಿಯನ್ನೂ ಡಿಸಿಎಂ ಮಾಡಿ ಮುರಿಯಲಾರದ ಇತಿಹಾಸ ಸೃಷ್ಟಿಸಿ, ಅದರ ನಂತರವಾದರೂ ಚೂರೂಪಾರು ಕೆಲಸಗಳಾದರೂ ನಡೆಯಲು ಶುರುವಾಗಬಹುದೇನೋ ಎಂಬುದನ್ನೂ ಕಾದು ನೋಡಬೇಕು. ಎನ್ನುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದೆ. ಈ ಮೂಲಕ ಡಿಸಿಎಂ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಹೊತ್ತಿರುವ ಕಿಡಿಯನ್ನ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡಿದೆ.
ಒಟ್ನಲ್ಲಿ ಬಿಜೆಪಿ & ಜೆಡಿಎಸ್ ಮೈತ್ರಿಯ ಬೆನ್ನಲ್ಲೇ ಕಮಲ ಪಾಳಯಕ್ಕೂ ಹೊಸ ಹುರುಪು ಬರುತ್ತಿದೆ. ಈ ನಡುವೆ ಕಾಂಗ್ರೆಸ್ ಒಳಗೆ ಹೊತ್ತಿರುವ ಅಸಮಾಧಾನದ ಬೆಂಕಿ ಅಸ್ತ್ರವನ್ನು ಬಿಜೆಪಿ ಮತ್ತು ಜೆಡಿಎಸ್ ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಆದರೆ ಇದನ್ನೆಲ್ಲಾ ಕಾಂಗ್ರೆಸ್ ನಾಯಕರು ಹಾಗೂ ದೆಹಲಿಯ ಹೈಕಮಾಂಡ್ ಹೇಗೆ ನಿಭಾಯಿಸಲಿದೆ? ಅಂತಾ ಕಾದು ನೋಡಬೇಕು ಅಷ್ಟೇ.












Click it and Unblock the Notifications