ಕರ್ನಾಟಕಕ್ಕೆ ನಿರಾಸೆ ಬುತ್ತಿ ಕಟ್ಟಿ ಕೊಟ್ಟ ಅರುಣ್ ಜೇಟ್ಲಿ

Posted By:
Subscribe to Oneindia Kannada

ನವದಹೆಲಿ, ಫೆಬ್ರವರಿ 1: ಕೇಂದ್ರ ಸರ್ಕಾರ ಬುಧವಾರ ಮಂಡಿಸಿರುವ ವಿತ್ತೀಯ ಹಾಗೂ ರೈಲ್ವೇ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ಅನುದಾನ, ಯೋಜನೆಗಳು ಘೋಷಣೆಯಾಗದಿರುವುದು ನಿರಾಸೆ ಮೂಡಿಸಿದೆ.[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

ಸಾಮಾನ್ಯ ಬಜೆಟ್ ನಲ್ಲಿ ರಾಜ್ಯಕ್ಕೆ ಹೆದ್ದಾರಿ ಅಗಲೀಕರಣ, ನಗರ ಹಾಗೂ ಗ್ರಾಮೀಣ ಮೂಲ ಸೌಕರ್ಯ, ಸ್ಮಾರ್ಟ್ ಸಿಟಿ ಅಭಿವೃದ್ಧಿ ಮಂತಾದ ಯೋಜನೆಗಳಿಗೆ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಅನುಕೂಲ ಸಿಕ್ಕಿಲ್ಲ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

Disappointing Budget for Karnataka

ರೈಲ್ವೇಯಲ್ಲೂ ನಿರಾಸೆ: ಇನ್ನು, ರೈಲ್ವೇ ಬಜೆಟ್ ನಲ್ಲಿಯೂ ಕರ್ನಾಟಕಕ್ಕೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. ಈ ಹಿಂದಿನ ರೈಲ್ವೇ ಬಜೆಟ್ ಗಳಿಗೆ ಹೋಲಿಸಿ ನೋಡಿದರೆ, ಈ ಬಾರಿಯ ರೈಲ್ವೇ ಬಜೆಟ್ ರಾಜ್ಯದ ಪಾಲಿಗೆ ಅತ್ಯಂತ ನಿರಾಶಾದಾಯಕ ಬಜೆಟ್ ಎನ್ನಲಡ್ಡಿಯಿಲ್ಲ.[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

ರಾಜ್ಯವು, ಲೋಂಡಾ-ಮೀರಜ್‌, ಗದಗ-ಹೊಟಗಿ, ಅರಸೀಕೆರೆ- ತುಮಕೂರು, ಹುಬ್ಬಳ್ಳಿ-ಚಿಕ್ಕಜಾಜೂರು, ಯಲಹಂಕ-ಪೆನುಗೊಂಡ ಮಾರ್ಗದ ಕಾಮಗಾರಿ ತ್ವರಿತಗೊಳಿಸಲು ಹೆಚ್ಚಿನ ಆರ್ಥಿಕ ನೆರವು ಬೇಕಿತ್ತು. ಆದರೆ, ಅದಕ್ಕೆ ಯಾವುದೇ ಅನುದಾನ ನೀಡುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವಾಗಿಲ್ಲ.[ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ]

ಇನ್ನ, ದಶಕಗಳಿಂದ ಬೇಡಿಕೆಯಲ್ಲಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ, ತುಮಕೂರು-ರಾಯದುರ್ಗ, ಗದಗ-ವಾಡಿ, ಕುಡಚಿ-ಬಾಗಲಕೋಟೆ ಹೊಸ ಮಾರ್ಗಗಳ ಬಗ್ಗೆ ಯಾವುದೇ ಯೋಜನೆ, ಅನುದಾನಗಳ ಪ್ರಸ್ತಾವನೆಯನ್ನೇ ಮಾಡಿಲ್ಲದಿರುವುದು ನಿರಾಸೆ ತಂದಿದೆ.[ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು]

ಇದರ ಜತೆಯಲ್ಲೇ ಮೈಸೂರು ಪ್ರಾಂತ್ಯದಿಂದ ತಮಿಳುನಾಡಿನ ಗಡಿಭಾಗದ ಜಿಲ್ಲೆಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಲಿರುವ ಚಾಮರಾಜ ನಗರ- ಮೆಟ್ಟು ಪಾಳ್ಯಂ ರೈಲ್ವೇ ಮಾರ್ಗಕ್ಕೆ ಈ ಬಾರಿ ಹಸಿರು ನಿಶಾನೆ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಈ ಬಾರಿಯೂ ಹುಸಿಯಾಗಿದೆ.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No special schemes and grants for Karnataka in this year's union financial budget and also railway budget. This makes huge disappointment among Karnataka people.
Please Wait while comments are loading...