ಮಳೆ ಪೀಡಿತರಿಗೆ ನೆರವು ನೀಡುವಂತೆ ಸಿಎಂ ಮೇಲೆ ಕಾಂಗ್ರೆಸ್ ಒತ್ತಡ

ಬೆಂಗಳೂರು, ಆಗಸ್ಟ್ 16: ಮಳೆ ಪೀಡಿತರಿಗೆ ವಿಶೇಷ ಪ್ಯಾಕೆಜ್ ಮೂಲಕ ಅನುದಾನ ನೀಡುವಂತೆ ಕಾಂಗ್ರೆಸ್ ಪಕ್ಷವು ಸಿಎಂ ಕುಮಾರಸ್ವಾಮಿ ಅವರನ್ನು ಮನವಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗುಂಡೂರಾವ್ ಅವರು, ಭಾರಿ ಮಳೆಯು ಕೊಡಗು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ ಜನರ ಜೀವನವನ್ನು ಛಿಧ್ರ ಮಾಡಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವು ಸಿಎಂ ಮೇಲೆ ಒತ್ತಡ ಹೇರಲಿದೆ ಎಂದಿರುವ ಬೆನ್ನಲ್ಲೆ, ರಾಜ್ಯ ಬಿಜೆಪಿಯು ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರಿ ಮಳೆ ಪೀಡಿತರಿಗಾಗಿ ವೀಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನೆರವು ನೀಡುವುದಾಗಿ ಮೋದಿ ಹೇಳಿದ್ದರು

ನೆರವು ನೀಡುವುದಾಗಿ ಮೋದಿ ಹೇಳಿದ್ದರು

ನಿನ್ನೆಯಷ್ಟೆ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಮಾತನಾಡಿದ್ದ ಮೋದಿ, ಮಳೆಯಿಂದ ಹಾನಿಗೊಳಗಾದವರ ಸಹಾಯಕ್ಕೆ ಕೇಂದ್ರ ಬದ್ಧವಾಗಿದೆ ಎಂದಿದ್ದರು. ಅದರ ಬೆನ್ನಲ್ಲೇ ದಿನೇಶ್ ಗುಂಡೂರಾವ್ ಅವರು ಹೀಗೊಂದು ಮನವಿ ಮಾಡಿದ್ದಾರೆ.

ವಿಶೇಷ ನೆರವು ಘೋಷಣೆ ಸಾಧ್ಯತೆ

ವಿಶೇಷ ನೆರವು ಘೋಷಣೆ ಸಾಧ್ಯತೆ

ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಆದರೆ ಈ ವರೆಗೆ ವಿಶೇಷ ಆರ್ಥಿಕ ನೆರವನ್ನು ಸಿಎಂ ಘೋಷಿಸಿಲ್ಲ, ಕಾಂಗ್ರೆಸ್ ಪಕ್ಷವು ಮಳೆ ಪೀಡಿತರಿಗೆ ವಿಶೇಷ ನೆರವು ನೀಡುವಂತೆ ಒತ್ತಾಯ ಹೇರುತ್ತಿದ್ದು, ಸಿಎಂ ಕೆಲವೇ ದಿನಗಳಲ್ಲಿ ಈ ಬಗ್ಗೆ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಮಳೆ ಹೆಚ್ಚು

ಯಾವ ಜಿಲ್ಲೆಗಳಲ್ಲಿ ಮಳೆ ಹೆಚ್ಚು

ಚಿಕ್ಕಮಗಳೂರು, ಉಡುಪಿ, ಕೊಡಗು, ಮಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ತನ್ನ ರೌದ್ರಾವತಾರ ತೋರಿದ್ದು, ಹಲವು ರಸ್ತೆಗಳು, ಸೇತುವೆಗಳು ಮಳೆಯಿಂದಾಗಿ ಮುಳುಗಿ ಹೋಗಿವೆ. ಹಲವು ಕಡೆ ಭೂ ಕುಸಿತಗಳು, ರಸ್ತೆ ಕುಸಿತ, ಗುಡ್ಡ ಕುಸಿತಗಳು ಆಗಿವೆ.

ಮೈಮಾನಿಕ ಸಮೀಕ್ಷೆಗೆ ಸೂಚನೆ

ಮೈಮಾನಿಕ ಸಮೀಕ್ಷೆಗೆ ಸೂಚನೆ

ಪ್ರವಾಹ ಪೀಡಿತ ಜಿಲ್ಲೆಗಳ ಸಮೀಕ್ಷೆಗೆ ಮೈಮಾನಿಕ ಸಮೀಕ್ಷೆ ಮಾಡಲು ಸಿಎಂ ಸೂಚಿಸಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ಮಳೆಯಿಂದ ತೊಂದರೆಗೊಳಗಾದವರನ್ನು ಶೀಘ್ರವೇ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಹೇಳಿದ್ದಾರೆ. ಅಗತ್ಯತೆ ಇದ್ದಲ್ಲಿ ಗಂಜಿ ಕೇಂದ್ರ ತೆರೆಯುವಂತೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+