Dengue: ರಾಜ್ಯದಲ್ಲಿ ಡೆಂಗಿ ಆರ್ಭಟ: ಒಂದೇ ದಿನ ದಾಖಲಾಯಿತು 437 ಪ್ರಕರಣ
ಕರ್ನಾಟಕದಲ್ಲಿ ಡೆಂಗಿ ಆರ್ಭಟ ನಡೆಸುತ್ತಿದೆ. ದಿನೇ ದಿನೇ ಈ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಒಂದೇ ದಿನದಲ್ಲಿ ಶುಕ್ರವಾರ ಒಂದೇ ದಿನ 2503 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಿದಾಗ 437 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದೆ. ಅಲ್ಲದೆ 91 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರದ ಅಂಕಿ ಅಂಶಗಳ ನಂತರ ರಾಜ್ಯದಲ್ಲಿ ಒಟ್ಟು ಸಕ್ರಿಯ ಡೆಂಗಿ ಕೇಸ್‌ಗಳ ಸಂಖ್ಯೆ 8659ಕ್ಕೇ ಏರಿಕೆ ಆಗಿವೆ.
ಕರ್ನಾಟಕದಲ್ಲಿ ಒಟ್ಟಾರೆ ಈ ವರೆಗೆ 63,741 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 8659 ಜನರಲ್ಲಿ ಡೆಂಗಿ ಪಾಸಿಟಿವ್ ವರದಿ ಬಂದಿದೆ. ಇನ್ನು 388 ಜನರು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಹಾಮಾರಿ ಈಗಾಗಲೇ 7 ಜನರನ್ನು ಬಲಿ ಪಡೆದಿದೆ.

ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣ
ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಿನ ಡೆಂಗಿ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 526 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 165 ಜನರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಡೆಂಗಿ ಪ್ರಕರಣಗಳ ಸಂಖ್ಯೆ 2628ಕ್ಕೆ ಏರಿಕೆ ಆಗಿದೆ. ಇನ್ನು 132 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಶುಕ್ರವಾರ 10, ಬೆಂಗಳೂರು ಗ್ರಾಮಂತರದಲ್ಲಿ 5 ಡೆಂಗಿ ಪ್ರಕರಣಗಳು ಪ್ರತ್ಯಕ್ಷವಾಗಿವೆ. ಈ ಮೂಲಕ ನಗರದಲ್ಲಿ 52 ಹಾಗೂ ಗ್ರಾಮಂತರದಲ್ಲಿ 37 ಪ್ರಕರಣ ಸಕ್ರೀಯವಾಗಿವೆ.

ಮಂಡ್ಯದಲ್ಲಿ ಒಂದೇ ದಿನ 47 ಪ್ರಕರಣ
ಮಂಡ್ಯದಲ್ಲಿ ಗುರುವಾರ ಕಡಿಮೆ ಕಾಣಿಸಿಕೊಂಡಿದ್ದ ಡೆಂಗಿ ಪ್ರಕರಣಗಳು ಶುಕ್ರವಾರ ಹೆಚ್ಚಾಗಿವೆ. ಜುಲೈ 12 ರಂದು ಜಿಲ್ಲೆಯಲ್ಲಿ 47 ಪ್ರಕರಣಗಳು ಕಾಣಿಸಿಕೊಂಡಿದ್ದು. 10 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 362ಕ್ಕೆ ಏರಿಕೆ ಆಗಿದೆ. ಇನ್ನು ದಾವಣಗೆರೆಯಲ್ಲೂ ಒಂದೇ ದಿನ 24 ಹಾಗೂ ಬೆಳಗಾವಿಯಲ್ಲಿ 32 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆವಾರು ಡೆಂಗಿ ಪ್ರಕರಣದ ಸಂಖ್ಯೆ
ರಾಮನಗರ 14, ಕೋಲಾರ 19, ಚಿಕ್ಕಬಳ್ಳಾಪುರ 7, ತುಮಕೂರು 5, ಚಿತ್ರದುರ್ಗ 3, ಗದಗ 15, ಉತ್ತರ ಕನ್ನಡ 1, ಕಲಬುರ್ಗಿ 20, ಬೀದರ್ 10, ಬಳ್ಳಾರಿ 4, ವಿಜಯನಗರ್ 1, ಕೊಪ್ಪಳ 3, ಮೈಸೂರು 17, ಹಾಸನ 6, ಉಡುಪಿ ಹಾಗೂ ಚಿಕ್ಕಮಗಳೂರು 10 ಹಾಗೂ ಕೊಡಗಿನಲ್ಲಿ 9 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications