ರಾಜ್ಯದಲ್ಲಿ ಹೆಚ್ಚಾಯ್ತು ಡೆಂಗ್ಯೂ ಪ್ರಕರಣ: ಡೆಂಗ್ಯೂ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿದೆ ನೋಡಿ
ಬೆಂಗಳೂರು, ಜುಲೈ 08: ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಡೆಂಗ್ಯೂ ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣದ ಜೊತೆಗೆ 6 ಜನರು ಬಲಿಯಾಗಿದ್ದು, ಇತ್ತ ಡೆಂಗ್ಯೂ ಪ್ರಕರಣದಿಂದಾಗಿ ಏಕಾಏಕಿ ರಾಜ್ಯದಲ್ಲಿ ಆತಂಕವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ವರ್ಷ ದಾಖಲಾದ ಪ್ರಕರಣಗಳ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 7,000 ಗಡಿಯನ್ನು ಮೀರಿದೆ. ಕರ್ನಾಟಕದಲ್ಲಿ 7,006 ಜನರಿಗೆ ವೈರಲ್ ಸೋಂಕು ಇರುವುದು ಪತ್ತೆಯಾಗಿದೆ. ಇನ್ನೂ ಡೆಂಗ್ಯೂ ಪ್ರಕರಣ ರಾಜ್ಯದಲ್ಲಿ ತಾಂಡವವಾಡುತ್ತಿದ್ದು, ಮಾರಕ ಜ್ವರಕ್ಕೆ ಮೃತಪಡುವವರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಡೆಂಗ್ಯೂ ಜ್ವರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಡೆಂಗ್ಯೂ ಜ್ವರದ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಡೆಂಗ್ಯೂ ಜ್ವರದ ಲಕ್ಷಣಗಳು
* ಇದ್ದಕ್ಕಿದ್ದಂತೆ ತೀವ್ರ ಜ್ವರ
* ಮೂಲವ್ಯಾಧಿ ಸಮಸ್ಯೆ ಮದ್ದು
* ಕಣ್ಣುಗಳ ಹಿಂಭಾಗದಿಂದ ನೋವು
* ವಾಂತಿ, ವಾಕರಿಕೆ
*ದೇಹ ಮತ್ತು ಕೀಲು ನೋವುಗಳು ರಕ್ತದಲ್ಲಿ ಹೆಚ್ಚಿದ ಹೆಮಟೋಕ್ರಿಟ್ (ಹಿಮೋಗ್ಲೋಬಿನ್).
* ಅದೇ ಸಮಯದಲ್ಲಿ ಪ್ಲೇಟೈಟ್ಗಳು ವೇಗವಾಗಿ ಕುಸಿಯುತ್ತವೆ.
* ಹೊಟ್ಟೆ ನೋವು, ಆಯಾಸ
* ಹೊಟ್ಟೆ ಅಥವಾ ಎದೆಯಲ್ಲಿ ನೀರಿನ ಶೇಖರಣೆ ಹಾಗೂ ನಿಲ್ಲದೆ ವಾಂತಿ
* ಒಸಡುಗಳಂತಹ ಭಾಗಗಳಿಂದ ರಕ್ತಸ್ರಾವ ಚರ್ಮದ ಮೇಲೆ ಕೆಂಪು ಚುಕ್ಕೆಗಳ ಕಲೆಗಳು ರಕ್ತದೊತ್ತಡದಲ್ಲಿ ಇಳಿಕೆ, ಮೂರ್ಛೆ
ಡೆಂಗ್ಯೂ ಬರದಂತೆ ತಡೆಗಟ್ಟುವ ಕ್ರಮಗಳು
1.ಡೆಂಗ್ಯೂ ಬಂದ ನಂತರ ಬಳಲುವುದಕ್ಕಿಂತ ಸೋಂಕಿಗೆ ಒಳಗಾಗುವುದನ್ನು ತಪ್ಪಿಸುವುದು ಉತ್ತಮ.
2. ಡೆಂಗ್ಯೂವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಸಂಗ್ರಹಿಸಿದ ನೀರಿನಲ್ಲಿ ಡೆಂಗ್ಯೂ ಸೊಳ್ಳೆಗಳು ಬೆಳೆಯುತ್ತವೆ. ಆದ್ದರಿಂದ ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
3. ಹಳೆಯ ಟೈರ್ ಗಳು ಮತ್ತು ಕ್ಯಾನ್ ಗಳನ್ನು ತಕ್ಷಣ ತೆಗೆದುಹಾಕಬೇಕು.
4. ವಾರಕ್ಕೊಮ್ಮೆ ನಿಮ್ಮ ಮನೆಯ ಸುತ್ತ ಕೀಟನಾಶಕಗಳನ್ನು ಸಿಂಪಡಿಸಿ
5. ಡೆಂಗ್ಯೂ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಸಕ್ರಿಯವಾಗಿರುತ್ತವೆ. ಆದ್ದರಿಂದ, ಹಗಲಿನಲ್ಲಿ ಮಲಗುವಾಗ ಹಾಸಿಗೆಗೆ ಸೊಳ್ಳೆ ಪರದೆಗಳನ್ನು ಬಳಸಬೇಕು.
6. ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ಜಾಲರಿಯನ್ನು ಬಿಗಿಗೊಳಿಸಬೇಕು.
7. ಮಹಾಮಾರಿ ಡೆಂಗ್ಯೂ ರೋಗವನ್ನು ನಿಯಂತ್ರಿಸಲು ಸಾರ್ವಜನಿಕರು ತಮ್ಮ ಮನೆಯ ಒಳಾಂಗಣ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ನೀರು ಸಂಗ್ರಹಣೆಯಾಗದಂತೆ ನೋಡಿಕೊಳ್ಳಬೇಕು.
8. ಈಡೀಸ್ ಈಜಿಪ್ಟ್ ಸೊಳ್ಳೆ ಕಡಿತದಿಂದ ಡೆಂಗಿ ಜ್ವರ ಹರಡಲಿದ್ದು, ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಅವು ಕಚ್ಚುತ್ತವೆ. ಜನ ಸಾಮಾನ್ಯರು 5-6 ದಿನಗಳಿಗೊಮ್ಮೆ ಶೇಖರಣೆ ಮಾಡಿಕೊಂಡ ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್ ಇತರೆ ನೀರಿನ ಸಂಗ್ರಹಾರಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
9. ಮನೆಯ ಮುಂಭಾಗ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಈಡೀಸ್ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು.












Click it and Unblock the Notifications