ಬಿಜೆಪಿ ಟಿಕೆಟ್ ಆಕಾಂಕ್ಷಿ ವಿರುದ್ಧ ಕರಪತ್ರ ಹಂಚಿಕೆ

ಕಲಬುರಗಿ, ಜನವರಿ 24 : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಮಧ್ಯೆ ಕೆಸರೆರಚಾಟ ನಡೆದಿದೆ. ಆದರೆ ಬಿಜೆಪಿ ಅಭ್ಯರ್ಥಿಯೊಬ್ಬರು ಟಿಕೇಟ್ ಆಕಾಂಕ್ಷಿ ಎಂಬುದು ಗೊತ್ತಾಗುತ್ತಲೇ ಪಕ್ಷದಲ್ಲೇ ಇರುವ ವಿರೋಧಿಗಳು ಅವರ ಚಾರಿತ್ರ್ಯ ವದೆ ಮಾಡುವಂತಹ ಕರಪತ್ರವನ್ನು ಮುದ್ರಿಸಿ ಜನರಿಗೆ ಹಂಚಿದ್ದಾರೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಿ.ಪಂ. ಸದಸ್ಯ ಬಸವರಾಜ್ ಮತ್ತಿತರರ ವಿರುದ್ಧ ಈ ರೀತಿ ಚಾರಿತ್ರ್ಯ ವಧೆ ಮಾಡುವ ಭಿತ್ತಿ ಪತ್ರಗಳನ್ನು ಮುದ್ರಿಸಿ ಹಂಚಿರುವುದು ಬೆಳಕಿಗೆ ಬಂದಿದೆ. ಅದರ ಜತೆಗೆ ಈ ಹಿಂದೆ ಅವರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ದಾಖಲೆ ಪ್ರತಿಯನ್ನು ಕೂಡ ಹಂಚಲಾಗಿದೆ.

ಅವರ ಕೀಳು ವ್ಯಕ್ತಿತ್ವ ಹಾಗೂ ಅವರ ವಿರುದ್ಧ ಎಷ್ಟೆಷ್ಟು ಪ್ರಕರಣಗಳು ದಾಖಲಾಗಿವೆ ಓದಿ ಎಂದು ಅದರಲ್ಲಿ ಉಲ್ಲೀಖಿಸಲಾಗಿದೆ. ಗ್ರಾಮೀಣ ಕ್ಷೇತ್ರದ ಮಠಾಧೀಶರು ಮತ್ತು ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯ್ತಿ ಗಳಿಗೆ ಅಂಚೆ ಮೂಲಕ ರವಾನಿಸಲಾಗಿದೆ. ಪತ್ರದಲ್ಲಿ ಮುಚ್ಚಳಿಕೆಯಲ್ಲಿ ಜಿಲ್ಲಾ ಕಚೇರಿಯ ವಿಳಾಸ ನಮೂದಿಸಲಾಗಿದೆ.

Defaming handbills distributed in Sedam

ಪಕ್ಷದ ಕಚೇರಿ ವಿಳಾಸ ನಮೂದಿಸಿದ್ದನ್ನು ಖಂಡಿಸಿದ ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಕೀಳು ರಾಜಕೀಯ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಈ ಬಗ್ಗೆ ರಾಜ್ಯ ನಾಯಕರಿಗೆ ದೂರು ನೀಡಲು ಜಿಲ್ಲಾ ಮುಖಂಡರು ತೀರ್ಮಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+