ಸರ್ಕಾರದಿಂದ ಪೊಲೀಸರಿಗೆ ದೀಪಾವಳಿಯ ಭರ್ಜರಿ ಉಡುಗೊರೆ

Recommended Video

      Yeddyurappa government give good news for Karnataka Police

      ಬೆಂಗಳೂರು, ಅಕ್ಟೋಬರ್ 19: ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ವೇತನ ಶ್ರೇಣಿಯನ್ನು ರಾಘವೇಂದ್ರ ಔರಾದ್ಕರ್ ವರದಿಯಂತೆ ಸರ್ಕಾರವು ಜಾರಿ ಮಾಡಿದೆ.

      ಪೊಲೀಸ್ ಹುತಾತ್ಮ ದಿನದ ಮುನ್ನಾ ದಿನ ಸರ್ಕಾರ ತಕ್ಷಣ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಜೊತೆಗೆ ಕಷ್ಟ ಪರಿಹಾರ ಭತ್ಯೆಯನ್ನು ಕೂಡ ಹೆಚ್ಚಿಸಲಾಗಿದೆ.

      2016ರ ಜೂನ್ 21ರಂದು ರಾಘವೇಂದ್ರ ಔರಾದ್ಕರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದ್ದು 2019ರ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ವೇತನವನ್ನು ಉನ್ನತೀಕರಗೊಳಿಸಲಾಗಿದೆ.

      Deepawali Gift From The Government To The Police

      ಸರ್ಕಾರ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲಿನ ಕಳಕಳಿಯಿಂದ ಈಗಾಗಲೇ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿಗೆ ಈಗಿರುವ ಕಷ್ಟ ಪರಿಹಾರ ಭತ್ಯೆಯ ಜೊತೆಗೆ ಹೆಚ್ಚುವರಿಯಾಗಿ 1 ಸಾವಿರ ರೂ. ಅನ್ನು ಮಂಜೂರು ಮಾಡಲಾಗಿದೆ.

      ಈ ಕಷ್ಟಪರಿಹಾರ ಭತ್ಯೆ ಹೆಚಚ್ಳದಿಂದ ಮಾಸಿಕವಾಗಿ 10.70 ಕೋಟಿ ಹಾಗೂ ವಾರ್ಷಿಕ 128.38 ಕೋಟಿ ಹೆಚ್ಚುವರಿಯಾಗಿ ಸರ್ಕಾರ ಖರ್ಚು ಭರಿಸಬೇಕಾಗುತ್ತದೆ.

      Deepawali Gift From The Government To The Police

      ಈ ವರದಿ ಜಾರಿಯಿಂದ ಹೊಸದಾಗಿ ಸೇರುವ ಪೊಲೀಸ್ ಪೇದೆಗಳಿಗೆ ಇರುವ ಮಾಸಿಕ ವೇತನ 30,427 ಸಾವಿರ ರೂ ಬದಲಿಗೆ 34,267 ರೂಪಾಯಿಗಳಾಗಿರುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+