ಬೆಂಗಳೂರು ಕಣ್ಣು ಆಸ್ಪತ್ರೆಗಳ ದೂರವಾಣಿ ಸಂಖ್ಯೆಗಳು
ಬೆಂಗಳೂರು, ನ 2: ನಾಡೆನೆಲ್ಲಡೆ ದೀಪಾವಳಿ ಹಬ್ಬದ ಸಂಭ್ರಮ. ಈ ಬೆಳಕಿನ ಹಬ್ಬ ಬದುಕಿನ ಕತ್ತಲನನ್ನು ಕಳೆದು ಹೊಸ ಬೆಳಕು ನೀಡುವಂತಾಗಲಿ. ಆದರೆ ಪಟಾಕಿ ಸಿಡಿಸುವ ಈ ಹಬ್ಬ ಬಾಳನ್ನು ಅಂಧತ್ವಕ್ಕೆ ಮತ್ತು ಕಿವುಡಿಗೆ ತಳ್ಳದಿರಲಿ.
ಪಟಾಕಿ ಕೊಳ್ಳಬೇಡಿ ಎನ್ನಲಾಗುವುದಿಲ್ಲ. ಹಬ್ಬದ ಸಂಭ್ರಮಕ್ಕೆ ಪಟಾಕಿ ಎರವಾಗದಿರಲಿ. ಸಂಜೆಯ ಮಬ್ಬುಗತ್ತಲಲ್ಲಿ ಅಥವಾ ರಾತ್ರಿಯ ಕಡುಕತ್ತಲಲ್ಲಿ ಪಟಾಕಿ ಹಚ್ಚುವಾಗ ಪ್ರಮುಖವಾಗಿ ಮಕ್ಕಳೇ ಎಚ್ಚರ.
ಪ್ರತಿವರ್ಷ ಪಟಾಕಿ ತಂದೊಡ್ಡುವ ಆವಾಂತರವನ್ನು ಕೇಳಿದ್ದೇವೆ, ನೋಡಿದ್ದೇವೆ. ಹೀಗಾಗಿ ಪಟಾಕಿ ಸಿಡಿಸುವಾಗ ಮಕ್ಕಳು ಜೊತೆಗೆ ದೊಡ್ಡವರೂ ಎಚ್ಚರದಿಂದಿರಿ ಎಂಬುದು ನಮ್ಮ ಆಶಯ.

ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಮೆರೆಯದಿರಿ
> ಪಾದರಕ್ಷೆ ತೊಟ್ಟು, ಕನ್ನಡಕ ಧರಿಸಿ ಪಟಾಕಿ ಹಚ್ಚಿ. ಜೊತೆಗೆ ಒಂದು ಬಕೆಟ್ ನೀರು ಜೊತೆಗಿರಲಿ.
> ಪಟಾಕಿ ಹಚ್ಚುವಾಗ ನೈಲಾನ್, ಪಾಲಿಸ್ಟರ್, ಸಿಲ್ಕ್ ಬಟ್ಟೆಗಳಿಂದ ದೂರವಿರಿ. ಪಟಾಕಿ ಹಚ್ಚಲು ಗಾಜಿನ ವಸ್ತುಗಳನ್ನು ಬಳಸದಿರಿ.
> ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚಿ, ಅನಾಹುತಕ್ಕೆ ದಾರಿ ಮಾಡಿಕೊಡಬೇಡಿ.
> ಪಟಾಕಿ ಹೊಡೆದ ಕೈಯಲ್ಲಿ ಕಣ್ಣನ್ನು ಒರೆಸಿ ಕೊಳ್ಳಬೇಡಿ. ಪಟಾಕಿ ಕಿಡಿ ಕಣ್ಣಿಗೆ ತಗುಲಿದರೆ ನೀರಿನಿಂದ ಕೂಡಲೇ ಕಣ್ಣನ್ನು ಶುಭ್ರಗೊಳಿಸಿ.
> ಮಕ್ಕಳು ಪಟಾಕಿ ಸಿಡಿಸಿದಾಗ, ಜೊತೆಗೆ ಪೋಷಕರು ಅಥವಾ ದೊಡ್ಡವರು ಇರಲಿ.
> ಅಸ್ತಮ, ಅಲರ್ಜಿ ಇರುವವರು ಪಟಾಕಿಯಿಂದ ದೂರವಿರಿ. ಪ್ರಮುಖವಾಗಿ ಹೆಚ್ಚು ಹೊಗೆ ಬರುವ ಪಟಾಕಿಗಳಿಂದ ದೂರವಿದ್ದರೆ ಕ್ಷೇಮ.
ಪಟಾಕಿಯಿಂದ ಅನಾಹುತವಾದರೆ ಸಂಪರ್ಕಿಸಬಹುದಾದ ಬೆಂಗಳೂರಿನ ಸಹಾಯವಾಣಿ ಮತ್ತು ಆಸ್ಪತ್ರೆಗಳು
> ಮಿಂಟೋ ಆಸ್ಪತೆ (ಕಲಾಸಿಪಾಳ್ಯ) -080-26707176 ( ನವೆಂಬರ್ ಎರಡರಿಂದ ನಾಲ್ಕರವರೆಗೆ ಮೂರು ದಿನವೂ 24X7 ಸೇವೆ ಸಲ್ಲಿಸುತ್ತದೆ)
> ನಾರಾಯಣ ನೇತ್ರಾಲಯ - 080-66974003 (Richmond Rd), 9902546046 (Rajaji Nagar), 9902821128 ( Hosur Rd)
> ಮೋದಿ ಆಸ್ಪತ್ರೆ (ರಾಜಾಜಿನಗರ) - 080-23492333
> ಪ್ರಭಾ ಐ ಕ್ಲಿನಿಕ್ (ಜಯನಗರ) - 080-66537024
> ಕಾರ್ತಿಕ್ ನೇತ್ರಾಲಯ (ಬನಶಂಕರಿ) - 080-66367413
> ಅಗರವಾಲ್ ಕಣ್ಣಿನ ಆಸ್ಪತ್ರೆ (ಬಸವನಗುಡಿ) - 080-26606688
> ವಾಸನ್ ಕಣ್ಣಿನ ಆಸ್ಪತ್ರೆ (ಕೋರಮಂಗಲ) - 080-39890000
> ಶಂಕರ ಕಣ್ಣಿನ ಆಸ್ಪತ್ರೆ (ಮಾರತಹಳ್ಳಿ) - 080-66367596
> ಬೆಳಕು ಕಣ್ಣಿನ ಆಸ್ಪತ್ರೆ (ದಾಸರಹಳ್ಳಿ) - 080-28399545
> ಶೇಖರ್ ನೇತ್ರಾಲಯ (ಜಯನಗರ)- 26594505
> ನೇತ್ರಾ ಕಣ್ಣಿನ ಆಸ್ಪತ್ರೆ (ಸಂಜಯನಗರ) - 080-66499960












Click it and Unblock the Notifications