ದೀಪಾವಳಿ; ಪಟಾಕಿ ಮಾರಾಟ ಮಾಡುವವರಿಗೆ ಖಡಕ್ ಸೂಚನೆ
ಬೆಂಗಳೂರು, ಅಕ್ಟೋಬರ್ 25 : ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಪಟಾಕಿ ಮಾರಾಟಗಾರರು ಹಾಗೂ ಜನರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಖಡಕ್ ಸೂಚನೆ ನೀಡಲಾಗಿದೆ.
ಪಟಾಕಿ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಪರವಾನಗಿಯನ್ನು ಸಾರ್ವಜನಿಕವಾಗಿ ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಬೇಕು ಎಂದು ಸೂಚನೆ ನೀಡಲಾಗಿದೆ. ಪರವಾನಗಿಯಲ್ಲಿ ಅನುಮತಿ ನೀಡಿರುವ ಪ್ರಮಾಣಕ್ಕಿಂತ ಹೆಚ್ಚಿನ ಪಟಾಕಿ ಹಾಗೂ ಚೈನೀಸ್ ಕ್ರಾಕರ್ಸ್‍ಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಲಾಗಿದೆ.
ಪಟಾಕಿಗಳನ್ನು ಬಳಸುವ ಸಂದರ್ಭದಲ್ಲಿ ಸುರಕ್ಷತಾ ದೃಷ್ಠಿಯಿಂದ ಸಾರ್ವಜನಿಕರು ಮಾಡಬೇಕಾದ ಹಾಗೂ ಮಾಡಬಾರದಂತಹ ಎಚ್ಚರಿಕೆ ಭಿತ್ತಿಪತ್ರಗಳನ್ನು ಕಡ್ಡಾಯವಾಗಿ ಅಂಗಡಿ ಮುಂಗಟ್ಟಗಳು ಹಾಗೂ ಪ್ರವೇಶ ದ್ವಾರ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಪಟಾಕಿ ಅಂಗಡಿಗಳನ್ನು ಜನವಸತಿ ಪ್ರದೇಶದಲ್ಲಿ ಇಡಬಾರದು. ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್, ವೆಲ್ಡಿಂಗ್ ಷಾಪ್ ಇತ್ಯಾದಿ ಕಡೆಗಳಿಂದ ಪಟಾಕಿ ಅಂಗಡಿ 15 ಮೀಟರ್ ದೂರವಿರಬೇಕು. ಸಮುದಾಯ ಭವನ, ಛತ್ರಗಳು ಇಂತಹ ಕಡೆಗಳಲ್ಲಿ ಮಾರಾಟ ಮಾಡಬಾರದು ಎಂದು ತಿಳಿಸಲಾಗಿದೆ.
ಪಟಾಕಿ ಮಳಿಗೆಗಳ ಪ್ರದೇಶದಲ್ಲಿ ಜನಸಂದಣಿಯಾಗದಂತೆ ಕ್ರಮ ಕೈಗೊಳ್ಳಬೇಕು. ಗುಪ್ತ ರೀತಿಯಲ್ಲಿ ವಿದೇಶಗಳಿಂದ ವಿವಿಧ ಬಗೆಯ ರೂಪುರೇಷಗಳಲ್ಲಿ ಆಟಿಕೆಗಳಂತೆ ಹಾಗೂ ವಿದ್ಯುನ್ಮಾನ ಉಪಕರಣಗಳೆಂದು ಕರೆಸಿಕೊಳ್ಳುವ ಸಿಡಿಮದ್ದುಗಳು ವಿಷಕಾರಕ ರಾಸಾಯನಿಕಗಳಿಂದ ಕೂಡಿದವುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ.
ವಿದೇಶಗಳಿಂದ ಆಮದಾಗುವ ಯಾವುದೇ ಪಟಾಕಿ ಅಥವಾ ಸಿಡಿಮದ್ದುಗಳಿಗೆ ಸ್ಪೋಟಕಗಳ ಕಾಯ್ದೆ 2008 ರಂತೆ ಯಾವುದೇ ಅನುಮತಿಯನ್ನು ನೀಡಲಾಗುವುದಿಲ್ಲ. ಪಿಇಎಸ್‍ಒ ಅಥವಾ ಜಿಲ್ಲಾ ಪ್ರಾಧಿಕಾರದಿಂದ ನೀಡಲಾಗುವ ಎಲ್-5 ಪರವಾನಗಿ ಹೊಂದಿದ ಸಗಟು ಮಾರಾಟಗಾರರಿಂದ ಮಾತ್ರ ತಾತ್ಕಾಲಿಕ ಪಟಾಕಿ ಮಾರಾಟಗಾರರು ಪಟಾಕಿ ಖರೀದಿಸಲು ಅವಕಾಶವಿದೆ.
ಪಟಾಕಿ ಮಾರಾಟ ಮಾಡುವ ಸ್ಥಳದಲ್ಲಿನ ಕೆಲಸಗಾರರು ಹಾಗೂ ಮಾರಾಟಗಾರರಿಗೆ ಸಿಡಿಮದ್ದುಗಳ ಬಗ್ಗೆ ಮುಂಜಾಗ್ರತೆ ಮತ್ತು ಅಪಾಯಗಳ ಬಗ್ಗೆ ಸೂಕ್ತ ತಿಳಿವಳಿಕೆ ಇರಬೇಕು.












Click it and Unblock the Notifications