ಚಿಕ್ಕಮಗಳೂರು: ಕಿಚ್ಚ ಸುದೀಪ್ ವಿರುದ್ಧ ಕಾಫಿ ಎಸ್ಟೇಟ್ ಮಾಲೀಕರಿಂದ ದೂರು

Recommended Video

      ಸುದೀಪ್ ವಿರುದ್ದ ದೂರು ದಾಖಲು | Sudeep faceing a case..! | Filmibeat Kannada

      ಚಿಕ್ಕಮಗಳೂರು, ಆಗಸ್ಟ್ 01: ನಟ ಕಿಚ್ಚ ಸುದೀಪ್ ಮೇಲೆ ಹಣ ವಂಚನೆ ಆರೋಪ ಕೇಳಿಬರುತ್ತಿದ್ದು, ಕಾಫಿ ಎಸ್ಟೇಟ್ ಮಾಲೀಕ ಚಿಕ್ಕಮಗಳೂರು ಮೂಲದ ದೀಪಕ್ ಮಯೂರ್ ಫಿಲ್ಮ್ ಚೇಂಬರ್ ಗೆ ಸುದೀಪ್ ವಿರುದ್ಧ ದೂರು ನೀಡಿದ್ದಾರೆ.

      ಕೆಲವು ತಿಂಗಳುಗಳ ಹಿಂದೆ ತಾಲೂಕಿನ ಆವತಿ ಗ್ರಾಮದಲ್ಲಿ ಸುದೀಪ್ ನಿರ್ಮಾಣದ 'ವಾರಸ್ದಾರ' ಧಾರವಾಹಿ ಶೂಟಿಂಗ್ ಗೆ ದೀಪಕ್ ಮಯೂರ್ ತೋಟದ ಜಾಗವನ್ನು ಪಡೆಯಲಾಗಿತ್ತು. ಈ ವೇಳೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ದೀಪಕ್ ಮಯೂರ್ ಆರೋಪಿಸಿದ್ದಾರೆ.

      Deepak Mayur filed a complaint against Kannada Actor Kichcha Sudeep

      ಶೂಟಿಂಗ್ ವೇಳೆ ಕಾಫಿ, ಮೆಣಸು ಸೇರಿದಂತೆ ಇನ್ನಿತರ ಜಾಗದಲ್ಲಿ ಹಾನಿ‌ ಮಾಡಿ, ಪರಿಹಾರ ನೀಡದೇ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೂ ಸುದೀಪ್ ವಿರುದ್ಧ ದೀಪಕ್ ಮಯೂರ್ ದೂರು ನೀಡಿದ್ದಾರೆ. ಇನ್ನು ಈ ವಿಷಯ ಸುದೀಪ್ ಅವರ ಗಮನಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ.

      Deepak Mayur filed a complaint against Kannada Actor Kichcha Sudeep

      'ವಾರಸ್ದಾರ' ಧಾರವಾಹಿ ಕನ್ನಡದ ಮನರಂಜನೆ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿತ್ತು. ಅದನ್ನು ನಟ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ ನಿರ್ಮಾಣ ಮಾಡಿತ್ತು. ಕೆಲ ಸಮಯಗಳವರೆಗೆ ಪ್ರಸಾರವಾದ ಈ ಧಾರವಾಹಿ ಬಹುಬೇಗ ಮುಗಿಯಿತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+