Get Updates
Get notified of breaking news, exclusive insights, and must-see stories!

HAL ಘಟಕ ಬೆಂಗಳೂರಿನಿಂದ ಆಂಧ್ರಕ್ಕೆ ಶಿಫ್ಟ್‌ ಆಗುತ್ತಾ? ಕ್ಲಾರಿಟಿ ಕೊಟ್ಟ ಡಿಸಿಎಂ

ಕರ್ನಾಟಕದ ಹೆಮ್ಮೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮೇಲೆ ಪಕ್ಕ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ಕಣ್ಣುಬಿದ್ದಿದೆ. ಬೆಂಗಳೂರಿನಲ್ಲಿರುವ ಎಚ್‌ಎಎಲ್ ಉತ್ಪಾದನಾ ಘಟಕವನ್ನು ಆಂಧ್ರಪ್ರದೇಶಕ್ಕೆ ಶಿಫ್ಟ್‌ ಮಾಡುವಂತೆ ನಾಯ್ಡು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವಾಗಿ ಎಲ್ಲೆಡೆ ಭಾರಿ ವಿರೋಧ ವ್ಯಕ್ತವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಈ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಾಯ್ಡು ಅವರ ಬೇಡಿಕೆಯಂತೆ ಎಚ್‌ಎಎಲ್‌ ಆಂಧ್ರಪ್ರದೇಶಕ್ಕೆ ಶಿಫ್ಟ್‌ ಆಗುತ್ತಾ? ಇಲ್ವಾ? ಎಂಬ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಇಂದು ಈ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್‌ ಅವರು ಎಚ್‌ಎಎಲ್‌ ಉತ್ಪಾದನಾ ಘಟಕದ ಕುರಿತು ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಏನೇ ಬೇಡಿಕೆ ಇಟ್ಟರೂ ಅದರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಈ ಬಗ್ಗೆ ನಮ್ಮ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರು ಪ್ರತಿಕ್ರಿಯೆ ಕೊಡಬೇಕು. ಆದರೆ ರಾಜ್ಯ ಸರ್ಕಾರವಾಗಿ ನಾವು ಏನನ್ನೂ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಖಡಕ್‌ ತಿರುಗೇಟು ನೀಡಿದ್ದಾರೆ.

DCM DK Shivakumar Opposes Shifting Of HAL Unit From Bengaluru To Andhra Pradesh

ಒಂದು ವೇಳೆ ಎಚ್‌ಎಎಲ್‌ನವರು ಇದನ್ನು ವಿಸ್ತರಿಸಲು ಬಯಸಿದರೆ ನಾವು ಭೂಮಿ ನೀಡುತ್ತೇವೆ. ನಾಯ್ಡು ಅವರು ಬಯಸಿದರೆ ಬೇರೆ ಏನಾದರೂ ಹೊಸದನ್ನು ಪಡೆಯಬಹುದು. ನಾವು ಅವರ ದಾರಿಗೆ ಅಡ್ಡ ಬರುವುದಿಲ್ಲ. ಆದರೆ ಕರ್ನಾಟಕದ ಮಟ್ಟಿಗೆ ಎಚ್‌ಎಎಲ್ ನಮ್ಮ ಹೆಮ್ಮೆ, ನೆಹರೂ ಜೀ ಅವರು ಇದನ್ನು ನಮಗೆ ನೀಡಿದರು ಎಂದು ತಿರುಗೇಟು ನೀಡಿದ್ದಾರೆ. ಎಚ್‌ಎಎಲ್‌ನ ಬೆಳವಣಿಗೆಗೆ ಎಲ್ಲ ಅವಕಾಶ ನೀಡಲು ರಾಜ್ಯ ಸಿದ್ಧವಿದೆ. ನಮ್ಮ ಬಳಿಯೇ ಅವರಿಗೆ ಬೇಕಾದ ಎಲ್ಲ ಭೂಮಿಗಳಿವೆ. ನಾವು ಎಚ್‌ಎಎಲ್‌ಗಾಗಿ ತುಮಕೂರಿನಲ್ಲಿ ಭೂಮಿಯನ್ನು ನೀಡಿದ್ದೇವೆ. ಹೆಲಿಕಾಪ್ಟರ್ ವಿಭಾಗಕ್ಕಾಗಿ ನಾವು ನೀಡಿದ್ದೇವೆ. ಎಚ್‌ಎಎಲ್‌ನವರು ಇನ್ನೂ ಹೆಚ್ಚಿನದನ್ನು ಬಯಸಿದರೆ, ಅದನ್ನೂ ನಾವು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಎಚ್‌ಎಎಲ್‌ನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಮತ್ತು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ಘಟಕಗಳಿಗೆ ಪ್ರಸ್ತಾವಿತ ಸ್ಥಳವಾಗಿ, ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕೇವಲ ಒಂದು ಗಂಟೆ ದೂರದಲ್ಲಿರುವ ಆಂಧ್ರಪ್ರದೇಶದ ಲೇಪಾಕ್ಷಿ-ಮಡಕಶಿರ ಪ್ರದೇಶದಲ್ಲಿ 10,000 ಎಕರೆ ಭೂಮಿಯನ್ನು ನಾಯ್ಡು ನೀಡಿರುವುದಾಗಿ ವರದಿಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗಿನ ಸಭೆಯಲ್ಲಿ ಆಂಧ್ರದಲ್ಲಿ ಬಹು ರಕ್ಷಣಾ ಮತ್ತು ಏರೋಸ್ಪೇಸ್ ಅಭಿವೃದ್ಧಿ ಕೇಂದ್ರಗಳನ್ನು ಪ್ರಸ್ತಾಪಿಸುವ ಬಗ್ಗೆ ನಾಯ್ಡು ಮಾತನಾಡಿದ್ದಾರೆ.

Take a Poll

ಇದಕ್ಕೆ ಈಗಾಗಲೇ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಚಿವ ಎಂಬಿ ಪಾಟೀಲ್‌ ಕೂಡ ಪ್ರತಿಕ್ರಿಯಿಸಿದ್ದು, ಚಂದ್ರಬಾಬು ನಾಯ್ಡು ಅವರು ಒಂದು ಸ್ಥಾವರವನ್ನು ಸ್ಥಾಪಿಸಲು ಸೂಚಿಸಬಹುದು. ಆದರೆ ಎಚ್‌ಎಎಲ್‌ ಅನ್ನು ಬೆಂಗಳೂರಿನಿಂದ ಬದಲಾಯಿಸಲು ಅವರು ಹೇಳಲು ಸಾಧ್ಯವಿಲ್ಲ. ಕರ್ನಾಟಕವು ಭಾರತದ ರಕ್ಷಣಾ ಉತ್ಪಾದನೆಯಲ್ಲಿ ಶೇ 65ರಷ್ಟನ್ನು ಹೊಂದಿದೆ. ಅರ್ಹತೆಯ ಆಧಾರದ ಮೇಲೆ ರಕ್ಷಣಾ ಕಾರಿಡಾರ್ ಅನ್ನು ಪಡೆಯಬೇಕಾಗಿತ್ತು ಎಂದಿದ್ದಾರೆ. ಆಂಧ್ರಪ್ರದೇಶ ಸರ್ಕಾರ ಬೇಕಾದೆ ಹೊಸ ಘಟಕವನ್ನು ನಿರ್ಮಿಸಲಿ. ಆದರೆ ಮುಖ್ಯಮಂತ್ರಿಯಾಗಿ, ಅವರು ಬೆಂಗಳೂರಿನಿಂದ ಎಚ್‌ಎಎಲ್‌ ಘಟಕವನ್ನು ಆಂಧ್ರಕ್ಕೆ ಸ್ಥಳಾಂತರಗೊಳ್ಳಲು ಕೇಳಬಾರದು. ನಾವು ಅದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+