ಕೈ ಪಾಳಯದಲ್ಲಿ ಅಸಮಾಧಾನ ಸ್ಟೋಟ; ನಿಗಮ ಮಂಡಳಿ ವಿಳಂಬ; ಡಿ ಕೆ ಶಿವಕುಮಾರ್‌ ಹೇಳಿದ್ದೇನು?

ರಾಮನಗರ, ಸೆಪ್ಟೆಂಬರ್‌ 05: ಕಾಂಗ್ರೆಸ್‌ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ 100 ದಿನ ಪೂರೈಸಿದರು ನಿಗಮ ಮಂಡಳಿ ನೇಮಕವಾಗದ ಕುರಿತು ಕಾಂಗ್ರೆಸ್‌ ಶಾಸಕರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಕನಕಪುರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್‌ ಮಾತನಾಡಿ, ನಾನು ಮಾತ್ರ ಮಂತ್ರಿಯಾಗಿ, ಶಾಸಕರುಗಳು ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೆ ಸಿಗುತ್ತದೆ. ನಿಗಮ ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

dcm-dk-shivakumar

ನಿಗಮ ಮಂಡಳಿ ಕುರಿತು ಎಲ್ಲಾ ಶಾಸಕರು ಕೇಳುತ್ತಿಲ್ಲ 20- 25 ಜನರು ಕೇಳುತ್ತಿದ್ದಾರೆ. ಅದರಲ್ಲಿ 15 ಜನರಿಗೆ ಅವಕಾಶ ನೀಡುತ್ತೇವೆ, ಮಿಕ್ಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಿದ್ದು ಅವರಿಗೆ ಎರಡುವರೆ ವರ್ಷ ಅವಕಾಶ ನೀಡುತ್ತೇವೆ. ನಮ್ಮ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಾಗೂ ಅವಕಾಶ ಕೊಡುತ್ತೇವೆ, ಮಾಧ್ಯಮಗಳಿಗೆ ಅವಸರ ಏಕೆ? ಶಾಸಕರುಗಳು ನಮ್ಮ ನಾಯಕರುಗಳಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕನಕಪುರದಲ್ಲಿ ಶಿಕ್ಷಕರ ಕೊರತೆ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಶಿಕ್ಷಕರ ಕೊರತೆ ಇರುವುದು ನಿಜ. ನನ್ನ ಕ್ಷೇತ್ರ ಅಲ್ಲ ಜಿಲ್ಲೆ, ರಾಜ್ಯದಲ್ಲೂ ಶಿಕ್ಷಕರ ಕೊರತೆ ಇದೆ, ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ನೇಮಕ ಆಗಬೇಕು. ಅದನ್ನ ಕೂತು ಚರ್ಚೆ ಮಾಡುತ್ತೇವೆ.ಶಿಕ್ಷಣ ವ್ಯವಸ್ಥೆಗೆ ನಮ್ಮದೇ ಆದ ಆಲೋಚನೆಗಳಿವೆ. ಅದನ್ನ ಜಾರಿ ಮಾಡಲು ಪರಿಶೀಲನೆ ಮಾಡುತ್ತಿದ್ದೇವೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಸಿಗಬೇಕು. ಸಣ್ಣಸಣ್ಣ ಶಾಲೆಗಳನ್ನ ಒಗ್ಗೂಡಿಸಿ ಪಬ್ಲಿಕ್ ಶಾಲೆ ಮಾದರಿ ಶಾಲೆಗಳ ನಿರ್ಮಾಣ ಆಗಬೇಕು. ಇದಕ್ಕೆ ಸಿಎಸ್ ಆರ್ ಫಂಡ್ ಹಾಗೂ ಸಂಘ ಸಂಸ್ಥೆಗಳ ಜೊತೆ ಗೂಡಿ ಯೋಜನೆ ಮಾಡ್ತೇವೆ.

ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರವಾಗಿ ಮಾತನಾಡಿ, ಕನಕಪುರಕ್ಕೆ ಮೊದಲೇ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ ನಲ್ಲಿ ಘೋಷಣೆ ಮಾಡಿದ್ದರು. ಎಸ್ಟಿಮೇಟ್, ಟೆಂಡರ್ ಆಗಿ ಎಲ್ಲಾ ಕೆಲಸ ಮುಗಿದಿತ್ತು. ಈಗ ಎರಡೂ ಕಡೆಗೂ ಮೆಡಿಕಲ್ ಕಾಲೇಜು ಅವಶ್ಯಕತೆ ಇದೆ. ಕನಕಪುರದಲ್ಲಿ ನಿರ್ಮಾಣ ಆಗ್ತಿರೊ ಕಾಲೇಜು ರಾಮನಗರಕ್ಕೆ ಸಮೀಪವೇ ಇದೆ. ಅಲ್ಲೂ ಕಾಲೇಜು ಮಾಡಬೇಕು, ಇಲ್ಲೂ ಕಾಲೇಜು ಮಾಡಬೇಕು.

ರಾಮನಗರದಲ್ಲಿ ಯೂರ್ನಿವರ್ಸಿಟಿ ಆಗುತ್ತೆ. ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಅಂತ ಇದೆ. ಅದನ್ನ ಕನಕಪುರದಲ್ಲಾದ್ರೂ ಮಾಡ್ತೀವಿ, ರಾಮನಗರದಲ್ಲಾದ್ರೂ ಮಾಡ್ತೀವಿ. ಮೆಡಿಕಲ್ ಕಾಲೇಜಿಗೆ ರಾಮನಗರದಲ್ಲೂ ಟೆಂಡರ್ ಆಗಿದೆ, ಕನಕಪುರದಲ್ಲೂ ಟೆಂಡರ್ ಆಗಿದೆ. ನನ್ನ ಆದ್ಯತೆ ಮೊದಲು ರಾಮನಗರಕ್ಕೆ, ಕನಕಪುರಕ್ಕೆ ನಂತರ ಆಗುತ್ತದೆ ಎಂದು ಹೇಳಿದರು. ರಾಮನಗರದಲ್ಲಿ ಈಗಾಗಲೇ ದೊಡ್ಡ ಆಸ್ಪತ್ರೆ ಇದೆ. ರಾಮನಗರ, ಕನಕಪುರ ಎರಡೂ ಕಡೆ ರಾಜೀವ್ ಗಾಂಧಿ ವಿವಿಯ ಕಟ್ಟಡ ಇರಲಿದೆ. ಅವರಿಗೆ ಸಿಗಬೇಕಾದುದ್ದು ಅವರಿಗೆ ಸಿಗುತ್ತೆ, ನಮಗೆ ಸಿಗಬೇಕಾದುದ್ದು ನಮಗೆ ಸಿಗುತ್ತೆ ಎಂದರು.

ಭಾರತ್ ಜೋಡೊ ಯಾತ್ರೆ ಒಂದು ವರ್ಷ ಪೂರೈಸಿದ ವಿಚಾರವಾಗಿ ಮಾತನಾಡಿದ ಅವರು, ಭಾರತ್ ಜೋಡೊ ನೆನಪಿಗಾಗಿ ರಾಮನಗರದಲ್ಲಿ ಕಾಲ್ನಡಿಗೆ ಮಾಡಲಿದ್ದೇವೆ. ಸಿಎಂ ಸಿದ್ದರಾಮಯ್ಯ, ನಾನು ಹಾಗೂ ಕೆಲ ಸಚಿವರು ಒಂದು ಗಂಟೆಗಳ ಕಾಲ ನಡೆಯುತ್ತೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಹಿನ್ನೆಲೆ ರಾಮನಗರದಲ್ಲಿ ಕಾಲ್ನಡಿಗೆ ಮಾಡುತ್ತೇವೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಕಾಲ್ನಡಿಗೆ ಮಾಡಬೇಕು. ಸೆಪ್ಟೆಂಬರ್ 7 ರಂದು ಇಲ್ಲಿ ಭಾಗವಹಿಸುವವರು ಭಾಹವಹಿಸಿ, 8 ನೇ ತಾರೀಖು ಅವರವರ ಜಿಲ್ಲೆಯಲ್ಲಿ ಮಾಡಲಿ. ರಾಮನಗರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿ ಮಾಡಿ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+