ನಂದೂ, ಸಿದ್ದರಾಮಯ್ಯದೂ ಫೋಟೋ ಜೊತೆಲೇ ಬರೋ ಹಾಗೆ ಮಾಡ್ರಯ್ಯ: ಡಿ ಕೆ ಶಿವಕುಮಾರ್‌ ತಾಕೀತು

ರಾಮನಗರ, ಜುಲೈ 22: ಗೃಹಲಕ್ಷ್ಮಿ ನೋಂದಣಿ ಪತ್ರದಲ್ಲಿ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಫೋಟೋವನ್ನು ಮೇಲೆ ಕೆಳಗೆ ಮಾಡದೇ, ಜೊತೆಯಲ್ಲೇ ಬರುವಂತೆ ಮಾಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕರ್ನಾಟಕ ಒನ್ ಸಿಬ್ಬಂದಿಗೆ ಸೂಚಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್ ಅವರು ರಾಮನಗರ ಜಿಲ್ಲೆ ಕನಕಪುರದ ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಕ್ಕೆ ದಿಢೀರ್ ಭೇಟಿ ಕೊಟ್ಟು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು.

dcm-dk-shivakumar

ಡಿಸಿಎಂ ಶಿವಕುಮಾರ್ ಅವರು ಕನಕಪುರದ ಎಸ್ ಎಲ್ ಎನ್ ರಸ್ತೆಯ ಕರ್ನಾಟಕ ಒನ್ ಕೇಂದ್ರಕ್ಕೆ ಶುಕ್ರವಾರ ಸಂಜೆ ಭೇಟಿ ಕೊಟ್ಟಾಗ ಅಲ್ಲಿನ ಸಿಬ್ಬಂದಿ ಒಂದು ಕ್ಷಣ ಭಯಗೊಂಡರು ಆಗ, ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯನ್ನು ಹೇಗೆ ಮಾಡಲಾಗುತ್ತಿದೆ? ಅಲ್ಲಿನ ಸಿಬ್ಬಂದಿ ಏನಾದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರಾ? ವಿಳಂಬ ಮಾಡುತ್ತಿದ್ದಾರಾ? ಕುಂಟು ನೆಪ ಹೇಳುತ್ತಿದ್ದಾರಾ? ಮನೆ ಯಜಮಾನಿಯರಿಗೆ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ? ನೋಂದಣಿ ಪ್ರಕ್ರಿಯೆ ಸರಳವಾಗಿದೆಯಾ ಎಂಬುದರ ಬಗ್ಗೆ ನೋಂದಣಿದಾರರಿಂದಲೇ ಖುದ್ದು ಡಿ ಕೆ ಶಿವಕುಮಾರ್‌ ಮಾಹಿತಿ ಪಡೆದರು.

ಅಗತ್ಯ ದಾಖಲೆ ಸಲ್ಲಿಸಲು ತನಗಿರುವ ವೈಯಕ್ತಿಕ ತಾಂತ್ರಿಕ ತೊಡಕು ಬಗ್ಗೆ ಮಹಿಳೆಯೊಬ್ಬರು ನೀವೇದಿಸಿಕೊಂಡಾಗ ಅದಕ್ಕೆ ಪರಿಹಾರವನ್ನು ಡಿಸಿಎಂ ಡಿ ಕೆ ಶಿವಕುಮಾರ್‌ ನೀಡಿದರು, ಸಿಬ್ಬಂದಿ ಜತೆ ಕಂಪ್ಯೂಟರ್ ಮುಂದೆ ಕುಳಿತು ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿದರು. ಇನ್ನೂ ಕೆಲವು ಮಹಿಳೆಯರಿಗೆ ನೋಂದಣಿ ಪತ್ರವನ್ನೂ ವಿತರಿಸಿದರು.

ಇನ್ನೂ ಈ ವೇಳೆ ಅರ್ಜಿ ಸಲ್ಲಿಸಲು ಬಂದಿದ್ದ ಮಹಿಳೆಯರಿಗೆ ಈತ ಲಂಚ ಕೇಳುತ್ತಿದ್ದಾನಾ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಪ್ರಶ್ನಿಸಿದರು. ಅದಲ್ಲದೇ ನೀವೆಲ್ಲಾ ಏನ್‌ ರಿಜಿಸ್ಟರ್‌ ಮಾಡಲು ಬಂದಿದ್ದೀರಾ? ನಿಮಗೆ ತಿಂಗಳಿಗೆ ಎಷ್ಟು‌ ದುಡ್ಡು ಬರುತ್ತದೆ? ಅರ್ಜಿ ಸಲ್ಲಿಸಲು ಅರ್ಜೆಂಟ್ ಏನು ಮಾಡಿಕೊಳ್ಳ ಬೇಡಿ, ಇನ್ನು ಒಂದು ತಿಂಗಳು ಟೈಮ್ ಇದೆ. ಈತ ನಿಮ್ಮಿಂದ ದುಡ್ಡು ತಗೋತಿದಾನಾ ಅಂತಾ ಚೆಕ್‌ ಮಾಡಲು ಬಂದೆ ಎಂದು ಡಿ ಕೆ ಶಿವಕುಮಾರ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+