ಹುಷಾರ್.. ಹಿಂದೂ ವಿರೋಧಿ ಬರಹ ಬರದ್ರೆ ಬೆರಳು ಕಟ್

ದಾವಣಗೆರೆ, ಅಕ್ಟೋಬರ್. 23: ರಾಜ್ಯದಲ್ಲಿ ಮತ್ತೆ ಜಾತಿ ಸಂಘರ್ಷದ ಬೆಳವಣಿಗೆಗಳು ನಡೆಯಲಾರಂಭಿಸಿವೆ. ಹಿಂದೂ ವಿರೋಧಿ ಬರಹದ ಆರೋಪದ ಮೇಲೆ ದಾವಣಗೆರೆಯಲ್ಲಿ ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲಾಗಿದೆ.

ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಹುಚ್ಚಂಗಿ ಪ್ರಸಾದ್ (23) ಹಲ್ಲೆಗೊಳಗಾದ ವಿದ್ಯಾರ್ಥಿ. ಗುರುವಾರ ಹಲ್ಲೆ ಸಂಭವಿಸಿದ್ದು ಶುಕ್ರವಾರ ಬೆಳಕಿಗೆ ಬಂದಿದೆ. ಈ ಬಗ್ಗೆ ದಲಿತ ವಿದ್ಯಾರ್ಥಿ ಪೊಲೀಸ್ ದೂರು ದಾಖಲಿಸಿದ್ದಾರೆ.[ಇಬ್ಬರು ದಲಿತ ಮಕ್ಕಳ ಹತ್ಯೆಗೆ ಕಾರಣವಾಗಿದ್ದೊಂದು ಮೊಬೈಲ್!]

prasad

ಹಲ್ಲೆ ಮಾಡಿದ್ದು ಹೇಗೆ?
ನಾನು ಎಸ್ ಸಿ ಎಸ್ ಟಿ ಹಾಸ್ಟೇಲ್ ನಲ್ಲಿ ಇದ್ದ ವೇಳೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ನಿಮ್ಮ ತಾಯಿ ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದಾರೆ. ಕೂಡಲೇ ನನ್ನ ಜತೆ ಹೊರಟು ಬನ್ನಿ ಎಂದು ಹೇಳಿದ್ದಾರೆ.[ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]

ಮಧ್ಯದಾರಿಯಲ್ಲಿ ನನನ್ನು ಸುತ್ತುವರಿದ 8-10 ಜನರ ಗುಂಪು ಏಕಾಏಕಿ ಹಲ್ಲೆ ನಡೆಸಿದೆ. ನಂತರ ನನ್ನ ಮುಖದ ತುಂಬೆಲ್ಲಾ ಕುಂಕುಮ ಎರಚಿ ಹಿಂದೂ ವಿರೋಧಿ ಬರಹದ ಬಗ್ಗೆ ಯೋಚನೆ ಮಾಡಿದರೆ ಕೈ ಬೆರಳುಗಳನ್ನು ಕತ್ತರಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ.

ಅವರಿಂದ ತಪ್ಪಿಸಿಕೊಂಡ ನಾನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಕೆಲ ಹೊತ್ತು ಅಡಗಿ ಕುಳಿತೆ, ನಂತರ ಹಾಸ್ಟೇಲ್ ಗೆ ಆಗಮಿಸಿ ಪೊಲೀಸ್ ದೂರು ನೀಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+