ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲಿ

ಚಾಮರಾಜನರ, ಮಾ. 16 : ಬಿಳಿಗಿರಿರಂಗನಬೆಟ್ಟ ರಕ್ಷಿತಾರಣ್ಯದ ಕೆ.ಗುಡಿ ಆನೆ ಶಿಬಿರದಲ್ಲಿರುವ ದಸರಾ ಆನೆ ಗಜೇಂದ್ರನಿಗೆ ಮದವೇರಿದ್ದು, ಆನೆಯ ಪುಂಡಾಟದಿಂದ ಕಾವಾಡಿ ಗಣಪತಿ ಮತ್ತು ಶ್ರೀರಾಮ ಆನೆ ಮೃತಪಟ್ಟಿವೆ. ಗಜೇಂದ್ರನಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಭಾನುವಾರ ಸಂಜೆ ಗಜೇಂದ್ರ ಮತ್ತು ಶ್ರೀರಾಮ ಆನೆಗಳು ಮದ ವೇರಿದಂತೆ ವರ್ತಿಸುತ್ತಿದ್ದವು. ಎರಡೂ ಆನೆಗಳ ನಡುವೆ ಕಾಳಗ ಆರಂಭವಾಗಿತ್ತು. ಸ್ವಲ್ಪ ಸಮಯದ ಬಳಿಕ ಗಜೇಂದ್ರನಿಗೆ ಆಹಾರ ನೀಡಲು ಹೋಗಿದ್ದ ಕಾವಾಡಿ ಗಣಪತಿ (50)ಗೆ ಸೊಂಡಲಿ ನಿಂದ ಹೊಡೆದು ಗಜೇಂದ್ರ ಗಾಯಗೊಳಿಸಿದ್ದ. [ಗಜಪಡೆಗಳ ಕಾಳಗಕ್ಕೆ ಸಾಕ್ಷಿಯಾದ ಪಿರಿಯಾಪಟ್ಟಣ]

Gajendra

ಆನೆ ದಾಳಿಯಿಂದ ಗಾಯಗೊಂಡಿದ್ದ ಗಣಪತಿ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. [ಮೈಸೂರು ದಸರಾ ಆನೆಗಳ ಬಯೋಡೇಟಾ]

ಶ್ರೀರಾಮ ಸಾವು : ಗಜೇಂದ್ರನ ಜೊತೆ ಕಾಳಗಕ್ಕೆ ಇಳಿದಿದ್ದ ಶ್ರೀರಾಮ ಆನೆಯೂ ಕಾಳಗದಲ್ಲಿ ಗಾಯಗೊಂಡಿತ್ತು. 61 ವರ್ಷದ ಶ್ರೀರಾಮ ಶಿಬಿರದಲ್ಲಿ ಭಾನುವಾರ ತಡರಾತ್ರಿ ಮೃತಪಟ್ಟಿದೆ. ಗಜೇಂದ್ರ ದಂತದಿಂದ ಶ್ರೀರಾಮ ಆನೆಗೆ ಬಲವಾಗಿ ತಿವಿದಿದ್ದರಿಂದ ಅದು ಗಂಭೀರವಾಗಿ ಗಾಯಗೊಂಡಿತ್ತು.

ಅರವಳಿಗೆ ಮದ್ದು ನೀಡಲ ನಿರ್ಧಾರ : ಸೋಮವಾರ ಮುಂಜಾನೆಯೂ ಗಜೇಂದ್ರನ ಪುಂಡಾಟ ಮುಂದುವರೆದಿದ್ದು, ಆತನಿಗೆ ಅರವಳಿಕೆ ಚುಚ್ಚುಮದ್ದು ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿ ಕೆ.ಗುಡಿ ಶಿಬಿರಕ್ಕೆ ಆಗಮಿಸಿದ್ದಾರೆ.

ಗಜೇಂದ್ರ ಯಾರು : ಸುಮಾರು 60 ವರ್ಷದ ಗಜೇಂದ್ರ 17 ವರ್ಷಗಳಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಈ ಆನೆ ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿಯನ್ನು ಹೊರುತ್ತದೆ. 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿತ್ತು. ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಗಜೇಂದ್ರ ಎತ್ತಿದ ಕೈ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+