Dasara Holidays: ಕರ್ನಾಟಕದ ಸರ್ಕಾರಿ ಶಾಲೆಗಳ ದಸರಾ ರಜೆ ವೇಳಾಪಟ್ಟಿ

ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕದ ದಸರಾ ಹಬ್ಬದ ಆಚರಣೆಗೆ ತಯಾರಾಗಿದೆ. ಸಾಂಸ್ಕೃತಿ ನಗರಿ ಮೈಸೂರಿನಲ್ಲಿ 2024ರ ದಸರಾ ಮಹೋತ್ಸವಕ್ಕೆ ಅಕ್ಟೋಬರ್ 3ರಂದು ಚಾಲನೆ ದೊರೆಯಲಿದೆ. ಅಕ್ಟೋಬರ್ 12ರ ಶನಿವಾರ ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದ್ದು, ಅಂದು ದಸರಾಗೆ ತೆರೆ ಬೀಳಲಿದೆ. ರಾಜ್ಯದ ಸರ್ಕಾರಿ ಶಾಲೆಗಳ ದಸರಾ ರಜೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅಕ್ಟೋಬರ್ 3ರಿಂದ ಅಕ್ಟೋಬರ್ 20ರ ತನಕ ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆಗಳು ಇರುತ್ತದೆ. ಅಕ್ಟೋಬರ್ 21ರಿಂದಲೇ ತರಗತಿಗಳು ಪುನಃ ಆರಂಭವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಆಚರಣೆ ಬಳಿಕ ದಸರಾ ರಜೆಗಳು ಆರಂಭವಾಗಲಿದೆ. ದಸರಾ ರಜೆಯಲ್ಲಿ ಪ್ರವಾಸ ಹೋಗುವ ಯೋಜನೆ ರೂಪಿಸಿರುವವರು ಈಗಲೇ ತಯಾರಿ ಆರಂಭಿಸುವುದು ಉತ್ತಮ.

Dasara 2024 Holidays Schedule For Karnataka Government School

ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಿಗೆ ದಸರಾ ರಜೆ ಇರುತ್ತದೆ. ಅಕ್ಟೋಬರ್ 20ರ ತನಕ ದಸರಾ ರಜೆ ಇರಲಿದ್ದು, ಅಕ್ಟೋಬರ್ 21ರ ಸೋಮವಾರ ರಜೆ ಮುಗಿದು, ತರಗತಿಗಳು ಆರಂಭವಾಗುತ್ತದೆ.

ಶಿಕ್ಷಣ ಇಲಾಖೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಶಾಲೆಗಳ ದಸರಾ ರಜೆ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಆಗಲೇ ಎಷ್ಟು ದಿನ ದಸರಾ ರಜೆ ಇರುತ್ತದೆ ಎಂದು ಮಾಹಿತಿ ನೀಡಲಾಗುತ್ತದೆ. ಈಗ ದಸರಾ ಹತ್ತಿರವಾಗಿರುವುದರಿಂದ ಮತ್ತೊಮ್ಮೆ ದಸರಾ ರಜೆ ಕುರಿತು ಪೋಷಕರಿಗೆ, ಶಾಲೆಗಳಿಗೆ ಮಾಹಿತಿಯನ್ನು ನೀಡಲಾಗಿದೆ.

ದಸರಾ ರಜೆ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುತ್ತಾರೆ. ಆದ್ದರಿಂದ ವಿವಿಧ ದಸರಾ ಪ್ಯಾಕೇಜ್‌ಗಳನ್ನು ಸಹ ಘೋಷಣೆ ಮಾಡಲಾಗುತ್ತದೆ. ಆದ್ದರಿಂದ ದಸರಾ ರಜೆಯ ದಿನಾಂಕ ತಿಳಿದುಕೊಳ್ಳಲು ಪೋಷಕರು, ವಿದ್ಯಾರ್ಥಿಗಳು ಕಾದು ಕುಳಿತಿರುತ್ತಾರೆ. ದಸರಾ ರಜೆಗಳು ಮುಗಿಯುತ್ತಿದ್ದಂತೆಯೇ ಅರ್ಧ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ.

2024ನೇ ಸಾಲಿನ ಮೈಸೂರು ದಸರಾವನ್ನು ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಟೋಬರ್ 3ರ ಗುರುವಾರ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡುವ ಮೂಲಕ ಈ ಬಾರಿಯ ಮೈಸೂರು ದಸರಾಗೆ ಚಾಲನೆ ನೀಡಲಾಗುತ್ತದೆ.

ಕೆಲವು ವರ್ಷ ಮೊದಲು ಘೋಷಣೆ ಮಾಡಿದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ದಸರಾ ರಜೆಯನ್ನು ಕಡಿತ ಮಾಡಿರುವುದು ಸಹ ಇದೆ. ಆದರೆ ಈ ಬಾರಿ ಯಾವುದೇ ಬದಲಾವಣೆ ಇಲ್ಲ. ಮೊದಲು ನಿಗದಿ ಮಾಡಿದಂತೆ ದಸರಾ ರಜೆಗಳು ಇರಲಿವೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಸಂತಸಗೊಂಡಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಡ್ಯಾಂಗಳು ಬಹುತೇಕ ಭರ್ತಿಯಾಗಿವೆ. ಆದ್ದರಿಂದ ಅದ್ದೂರಿಯಾಗಿ ಮೈಸೂರು ದಸರಾವನ್ನು ಆಚರಣೆ ಮಾಡಲಾಗುತ್ತದೆ ಎಂದು ಈಗಾಗಲೇ ಕರ್ನಾಟಕ ಸರ್ಕಾರ ಹೇಳಿದೆ. ಅಲ್ಲದೇ 'ಶಕ್ತಿ' ಯೋಜನೆಯಡಿ ಉಚಿತ ಬಸ್ ವ್ಯವಸ್ಥೆ ಇರುವ ಕಾರಣ ಹೆಚ್ಚಿನ ಜನರು ಮೈಸೂರು ದಸರಾವನ್ನು ನೋಡಲು ಆಗಮಿಸುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+