Darshan Thoogudeepa: ಇನ್ನಷ್ಟು ದಿನ ನಟ ದರ್ಶನ್​ಗೆ ಜೈಲೂಟವೇ ಗತಿ: ಕೋರ್ಟ್ ಹೇಳಿದ್ದೇನು?

ಬೆಂಗಳೂರು, ಜುಲೈ 18: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರುವ ನಟ ದರ್ಶನ್ ಆ್ಯಂಡ್​ ಗ್ಯಾಂಗ್​ಗೆ ಇನ್ನಷ್ಟು ದಿನ ಜೈಲೂಟವೇ ಗತಿಯಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇಂದು (ಜು.18) ನ್ಯಾಯಾಂಗ ಬಂಧನ ಅಂತ್ಯಗೊಂಡ ಹಿನ್ನೆಲೆ ವಿಚಾರಣೆ ನಡೆಸಿದ ನ್ಯಾಯಾಲಯ ನಾಳೆಗೆ ವಿಚಾರಣೆ ಮುಂದೂಡಿದೆ.

ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಪೀಠದಲ್ಲಿ ವಿಚಾರಣೆ ನಡೆಯಿತು. ವಿಚಾರಣೆ ಆರಂಭವಾಗ್ತಿದ್ದಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಸೋಮವಾರಕ್ಕೆ ವಾದ ಮಾಡಲು ಅವಕಾಶ ಕೇಳಿದ್ರು. ಬಳಿಕ ಇಂದೇ ವಿಚಾರಣೆ ನಡೆಸುವಂತೆ ದರ್ಶನ್ ಪರ ವಕೀಲ ಫಣೀಂದ್ರ ಮನವಿ ಮಾಡಿದ್ರು. ಆದರೆ, ಸೋಮವಾರದವರೆಗೂ ಅವಕಾಶ ನೀಡದ ನ್ಯಾಯಾಧೀಶರು ನಾಳೆಗೆ (ಶುಕ್ರವಾರ) ವಿಚಾರಣೆಯನ್ನ ಮುಂದೂಡಲಾಗಿದೆ.

Darshan Thoogudeepa Writ Petition Adjourned To July 19

ಇನ್ನೂ ರೇಣುಕಾಸ್ವಾಮಿ ಕೊಲೆ ಆರೋಪದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ತಮಗೆ ಮನೆಯಿಂದ ಊಟ ಬೇಕು, ಮಲಗಲು ಹಾಸಿಗೆ, ಓದಲು ಕೆಲವು ಪುಸ್ತಕಗಳನ್ನು ಮನೆಯಿಂದ ತರಿಸಿಕೊಳ್ಳಲು ಅವಕಾಶ ಕೊಡಬೇಕೆಂದು ಹೈಕೋರ್ಟ್​ಗೆ ಜುಲೈ 19 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೈಲು ಅಧಿಕಾರಿಗಳು, ಸರ್ಕಾರಕ್ಕೆ ನೊಟೀಸ್ ನೀಡಿ, ವಿಚಾರಣೆಯನ್ನು ಇಂದು ಮುಂದೂಡಿತ್ತು. ಆದರೆ ಈಗ ರಿಟ್ ಅರ್ಜಿಯ ವಿಚಾರಣೆಯನ್ನು ಜುಲೈ 19 ಅಂದರೆ ನಾಳೆಗೆ (ಜುಲೈ 19) ಮುಂದೂಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್ ಜೈಲಿಗೆ ಹೋಗಿ ಬರೋಬ್ಬರಿ 25 ದಿನಗಳೇ ಕಳೆದಿವೆ. ಕಂಬಿ ಹಿಂದೆ ನಿತ್ಯ ದರ್ಶಣ್‌ ಅವರು ಕಣ್ಣೀರು ಹಾಕುತ್ತಿದರೇ, ದರ್ಶನ್‌ ಅವರ ಕುಟುಂಬದವರು ಕಾನೂನು ಹೋರಾಟವನ್ನ ನಡೆಸಿದ್ದಾರೆ. ಈ ನಡುವೆ ಪೊಲೀಸ್‌ ಇಲಾಕೆ ಹಲವು ಸಾಕ್ಷ್ಯಗಳನ್ನ ಸಂಗ್ರಹಿಸಿದ್ದು, ಕೊಲೆ ಆರೋಪಿಗಳಿಗೆ ದೊಡ್ಡ ಸಂಕಷ್ಟ ಎದುರಾಗಿದೆ.

ದರ್ಶನ್ ಮನೆ ಊಟದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿಯಲ್ಲಿ ಕಾನೂನಿನ ಅವಕಾಶಗಳ ಮೊದಲು‌ ನೋಡೋಣ. ಅದು ಅಪ್ಲೈ ಆಗುತ್ತಾ ಇಲ್ವಾ ನೋಡೋಣ ಎಂದಿದೆ. ಇದೇ ವೇಳೆ ಎರಡು ಕಡೆಯ ವರದಿ ಸ್ವೀಕಾರ ಮಾಡಲಾಗಿದ್ದು, ನಾಳೆ (ಶುಕ್ರವಾರ) ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ. ದರ್ಶನ್ ಪರ ವಕೀಲರು ಮತ್ತು ಸರ್ಕಾರದ ಆಕ್ಷೇಪವಿರುವ ಎರಡು ಕಡೆಯ ಲಿಖಿತ ಪ್ರಾವಿಷನ್ ವರದಿಯನ್ನು ಕೋರ್ಟ್ ಸ್ವೀಕಾರ ಮಾಡಿದೆ. ಈ ವರದಿಯನ್ನು ಅಧ್ಯಯನ ಮಾಡಿ ನಾಳೆ ತೀರ್ಮಾನ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+