Darshan Thoogudeepa: ದರ್ಶನ್ ಅವರಿಗೆ ಬೆನ್ನು ನೋವು ಇರೋದು ನಿಜವೇ?
ಬಳ್ಳಾರಿ, ಅಕ್ಟೋಬರ್ 15: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜಾಮೀನು ಅರ್ಜಿ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು. ದರ್ಶನ್ ಗೆ ಜಾಮೀನು ಕೊಡಿಸುವುದಕ್ಕೆ ಹಿರಿಯ ವಕೀಲರಾದ ಸಿ ವಿ ನಾಗೇಶ್ ಸಾಕಜಷ್ಟು ಪ್ರಯತ್ನ ನಡೆಸಿದ್ರು. ಇತ್ತ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಗೆ ಬಿಗ್ ಶಾಕ್ ಎದುರಾಗಿದ್ದು, ಬೆನ್ನು ನೋವಿನಿಂದ ನರಳುತ್ತಿದ್ದಾರೆ ಎನ್ನಲಾಗಿದೆ.
ಬೆನ್ನು ನೋವಿನಿಂದ ಬಳಲಿ ಬೆಂಡಾಗಿರುವ ನಟ ದರ್ಶನ್ಗೆ ಬೇಲ್ ಅರ್ಜಿ ವಜಾಗೊಂಡ ವಿಚಾರ ಮತ್ತಷ್ಟು ಶಾಕ್ ನೀಡಿದೆ. ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾಗೊಂಡ ವಿಚಾರ ತಿಳಿದು ನಿನ್ನೆ ನಟ ದರ್ಶನ್ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ.

ತೀವ್ರ ಬೆನ್ನು ನೋವಿನ ಕಾರಣ ದರ್ಶನ್ ಅವರು ಹಲವು ಬಾರೀ ಜೈಲಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜಾಮೀನು ಪಡೆಯಲು ಈ ರೀತಿ ಬೆನ್ನು ನೋವಿನ ಕಾರಣ ಹೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಆ ವರದಿಯನ್ನು ಜೈಲಧಿಕಾರಿಗಳಿಗೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರಿಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿಲ್ಲ. ಇದು ಅವರನ್ನು ಮತ್ತಷ್ಟು ಕಂಗೆಡಿಸಿದೆ. ದರ್ಶನ್ ಅವರು ಜಾಮೀನಿಗಾಗಿ ಸಾಕಷ್ಟು ಚಡಪಡಿಸಿದ್ದರು. ಅಲ್ಲದೇ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಹ ಕಾನೂನು ಹೋರಾಟವನ್ನ ನಡೆಸಿದ್ದಾರೆ.
ಜಾಮೀನು ಸಿಗದ ಹಿನ್ನೆಲೆ ನಟ ದರ್ಶನ್ ಅವರು ರು ಮತ್ತಷ್ಟು ದಿನ ಜೈಲಿನಲ್ಲೇ ಕಳೆಯಬೇಕಿದೆ. ಈ ಮಧ್ಯೆ ದರ್ಶನ್ಗೆ ಬೆನ್ನುನೋವು ಕಾಣಿಸಿಕೊಂಡಿದೆ. ಬೆನ್ನು ನೋವಿನಿಂದ ನಿದ್ದೆ ಬರ್ತಿಲ್ಲ. ಸರಿಯಾಗಿ ಕೂರಲೂ ಸಾಧ್ಯವಾಗುತ್ತಿಲ್ಲ ಎನ್ನಲಾಗಿದ್ದು, ಅವರಿಗೆ ನಿಜಕ್ಕೂ ಬೆನ್ನು ನೋವು ಇದೆ ಎಂದು ವೈದ್ಯರ ವರದಿ ಮೂಲಕ ತಿಳಿದು ಬಂದಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್ ಅವರು ಜಾಮೀನು ಪಡೆಯಲು ಈ ರೀತಿ ಬೆನ್ನು ನೋವಿನ ಕಾರಣವನ್ನ ನೀಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಕಾರಣದಿಂದಾಗಿ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದು, ಬೆನ್ನುನೋವು ನಿಯಂತ್ರಣಕ್ಕೆ ಫಿಜಿಯೋ ಥೆರಪಿಯ ಸಲಹೆ ನೀಡಲಾಗಿದೆ. ಎರಡು ಸ್ಕ್ಯಾನಿಂಗ್‌ಗೆ ಸಲಹೆ ನೀಡಲಾಗಿದೆ. ಕೆಲವು ಮಾತ್ರೆ, ಮೂಲಾಮುಗಳನ್ನು ಬರೆದುಕೊಡಲಾಗಿದೆ.
ಇಂದಿನಿಂದಲೇ ಜೈಲಿನಲ್ಲಿ ದರ್ಶನ್ಗೆ ಫಿಜಿಯೋ ಥೆರಪಿ ನೀಡಲು ಜೈಲಾಧಿಕಾರಿಗಳು ನಿರ್ಧರಿಸಿದ್ದಾರೆ. ವಿಮ್ಸ್ ವೈದ್ಯರಿಂದ ಫಿಜಿಯೋ ಥೆರಪಿ ನಡೆಯಲಿದೆ. ಮೆಡಿಕಲ್ ಬೆಡ್, ಚೇರ್ ನೀಡುವಂತೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೇ ನರಗಳಿಂದಲೇ ದರ್ಶನ್ಗೆ ಬೆನ್ನುನೋವು ಬಂದಿದೆ ಎಂದು ನರರೋಗ ತಜ್ಞ ಡಾ. ವಿಶ್ವನಾಥ್ ವರದಿಯಲ್ಲಿ ಹೇಳಿದ್ದಾರೆ. ಮೆಡಿಕಲ್ ಬೆಡ್, ಚೇರ್, ವೈದ್ಯಕೀಯ ಸಲಕರಣೆ ಹಾಗೂ ಕೆಲವು ಮಾತ್ರೆಗಳ ನೀಡುವಂತೆ ಕೋರಲಾಗಿದ್ದು, ಚಿಕಿತ್ಸೆ ಕುರಿತು ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ದರ್ಶನ್ಗೆ ನೀಡುವ ಸಾಧ್ಯತೆ ಇದೆ.












Click it and Unblock the Notifications