BMW ಕಾರು, MLA ಟಿಕೆಟ್, ಸರ್ಕಾರಿ ನೌಕರಿ, ಫಂಡ್‌ಗೆ ರೇಣುಕಾಸ್ವಾಮಿ ಫ್ಯಾನ್ ಮನವಿ...Video Viral
ಬೆಂಗಳೂರು, ಸೆಪ್ಟಂಬರ್ 06: ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆಯಾಗಿ ಒಂದೂವರೆ ವರ್ಷ ಸಮೀಪಿಸುತ್ತಿದೆ. ಇದನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತವರ ಗ್ಯಾಂಗ್ ಮಾಡಿದೆ ಎಂಬ ಆರೋಪ ಇದೆ. ತನಿಖೆ ನಡೆಯುತ್ತಿದೆ. ಇದೀಗ ದಾಣಣಗೆರೆಯ ರೇಣುಕಾಸ್ವಾಮಿ ಅಭಿಮಾನಿಗಳ ಸಂಘದ ಹೆಸರಿನಲ್ಲಿ ಯುವಕನೊಬ್ಬ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಮುಂದೆ ಒಂದಷ್ಟು ಬೇಡಿಕೆಗಳನ್ನು ಇಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಮಾತನಾಡಿರುವ ಯುವಕ ಐಶಾರಾಮಿ ಕಾರು, ಶಾಸಕ ಸ್ಥಾನದ ಟಿಕೆಟ್ ಸೇರಿದಂತೆ ಕೆಲವು ಬೇಡಿಕೆ ಇಟ್ಟಿದ್ದಾರೆ. ಈ ವಿಡಿಯೋ ವೈರಲ್ ಜೊತೆಗೆ ಸಖತ್ ಟ್ರೋಲ್ ಸಹ ಆಗುತ್ತಿದೆ. ದಾವಣಗೆರೆ ಜಿಲ್ಲಾ ರೇಣುಕಾಸ್ವಾಮಿ ಅಭಿಮಾನಿ ಸಂಘದಿಂದ ಅಂತಲೂ ಆತ ಹೇಳಿಕೊಂಡಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಮತ್ತವರ ಗ್ಯಾಂಗ್ ನ ಕೆಲವರು ಪಡೆದಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಇದೀಗ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ಜೈಲಿನಲ್ಲಿದ್ದಾರೆ. ಇದರ ಬೆನ್ನಲ್ಲೆ ರೇಣುಕಾಸ್ವಾಮಿ ಕುಟುಂಬಸ್ಥರು ಸತ್ಯಕ್ಕೆ ನ್ಯಾಯ ಸಿಕ್ಕಿದೆ. ತನಿಖೆ ಸೂಕ್ತವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಪ್ರಕಟವಾಗಲಿ ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಯುವಕ ತಾನು ರೇಣುಕಾಸ್ವಾಮಿ ಅಭಿಯಾನಿ ಸಂಘದವನು ಎಂದು ಹೇಳಿಕೊಂಡು 4 ಪ್ರಮುಖ ಬೇಡಿಕೆ ಸರ್ಕಾರದ ಮುಂದೆ ಇಟ್ಟಿದ್ದಾನೆ. ಇದನ್ನು unique_editzz_18 ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
BMW ಕಾರ್, MLA ಟಿಕೆಟ್, ನೌಕರಿ, ಫಂಡ್ ಕೊಡಿ
ದರ್ಶನ್ ತೂಗುದೀಪ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇತ್ತ ದಾವಣಗೆರೆ ಜಿಲ್ಲಾ ರೇಣುಕಾಸ್ವಾಮಿ ಅಭಿಮಾನಿ ಸಂಘ ಎಂದು ಹೇಳಿಕೊಂಡ ಯುವಕ ಸರ್ಕಾರಕ್ಕೆ ಕೋರಿದ್ದಾರೆ. ''ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ತಂದೆಗೆ BMW ಕಾರ್ ಕೊಡಬೇಕು. ಆತನ ಪತ್ನಿಗೆ ಎ ಗ್ರೇಡ್ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಕಾಂಗ್ರೆಸ್ ಸರ್ಕಾರ ಮೃತ ರೇಣುಕಾಸ್ವಾಮಿ ತಾಯಿಗೆ ಚಿತ್ರದುರ್ಗದಿಂದ MLA ಟಿಕೆಟ್ ನೀಡಬೇಕು. ಇಂದಿನ ಕಾಂಗ್ರೆಸ್ ಸರ್ಕಾರ ರೇಣುಕಾಸ್ವಾಮಿ ಹೆಸರಿನಲ್ಲಿ ಹೆಣ್ಮಕ್ಕಳ ರಕ್ಷಣೆಗೆ ಫಂಡ್ ನೀಡುವಂತೆ'' ಮನವಿಯ ವಿಡಿಯೋ ಮಾಡಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ಬಗೆಯ, ತಮಾಷೆ ಕಾಮೆಂಟ್ ಮಾಡಿದ್ದಾರೆ. 'ಯಾರ ಮಕ್ಕಳಪ್ಪ ನೀವೆಲ್ಲ' ಎಂದು ಒಬ್ಬರು, ಹಾಗೇ ''ರೇಣುಕಾಸ್ವಾಮಿ ಜಯಂತಿ ಮಾಡಿ, ಗವರ್ನಮೆಂಟ್ ರಜೆನೂ ಘೋಷಣೆ ಮಾಡಿಬಿಡಿ'' ಎಂದು ಮತ್ತೊಬ್ಬರು ಹೇಳಿದ್ದಾರೆ. ''ಆ ಕೊಲೆಗಾರನ ಅಭಿಮಾನಿ ಕಾಣ್ಸತ್ತೆ ಇವನು, ಅದಕ್ಕೆ ರೇಣುಕಾ ಸ್ವಾಮಿ ತಂದೆ ತಾಯಿಯನ್ನು ಮತ್ತು ಅವನ ಹೆಂಡತಿ ಅವ್ರಿಗೆ ಅಪಹಾಸ್ಯ ಮಾಡ್ತಿದ್ದಾನೆ.' ಜೈಲಲ್ಲಿ ಇರೋ ಕುಖ್ಯಾತಿ ದರ್ಶನ್ ಅಭಿಮಾನಿ ಇವನು ಎಂದು ಕಟು ಶಬ್ದಗಳಲ್ಲಿ ಕೆಲವರು ಬೈದಿದ್ದಾರೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಹತ್ಯೆ ಮಾಡಿರುವುದು ಸರಿಯಲ್ಲ. ಅದಕ್ಕೆ ಬೇರೆ ಶಿಕ್ಷೆ ಕೊಡಬಹುದು. ಈ ಪ್ರಕರಣದಲ್ಲಿ ಕಾನೂನು ಕೈಗೆತ್ತಿಕೊಳ್ಳಲಾಗಿದೆ. ಹೀಗೆ ಮಾಡಿದ್ದಾದರು ಯಾರು ಎಂಬ ತನಿಕೆ, ದರ್ಶನ್ ವಿಚಾರಣೆ ನಡೆಯುತ್ತಿದೆ. ರೇಣುಕಾಸ್ವಾಮಿ ಮಹಿಳೆಗೆ ಸಂದೇಶ ಕಳುಹಿಸಿರುವುದು, ಕೆಟ್ಟದಾಗಿ ಮೆಸೆಜ್ ಕಳುಹಿಸಿದ್ದು ಒಪ್ಪುವಂಥದ್ದಲ್ಲ.












Click it and Unblock the Notifications