ಏನ್ರೀ ಮೀಡಿಯಾ ಅನ್ನೋಂಗಿಲ್ಲ ದರ್ಶನ್!
ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಆದರೆ, ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿಯೇ ನಟ ದರ್ಶನ್ ಗೆ ಇದೀಗ ಮಧ್ಯಂತರ ಜಾಮೀನು ಮಂಜೂರು ಮಾಡ್ತಿದೆ. ಇನ್ನು ಇದಕ್ಕೂ ಮೊದಲು ದರ್ಶನ್ ಅವರು "ಏನ್ರೀ ಮೀಡಿಯಾ" ಅಂತ ಹೇಳಿದಂಗೆ ಈಗ ಹೇಳೋಕೆ ಆಗಲ್ಲ ಅಂತ ಹೇಳಲಾಗ್ತಿದೆ.! ಹೌದು ಈ ಹಿಂದೆ ದರ್ಶನ್ ಜೈಲಿಗೆ ಹೋಗುವುದಕ್ಕಿಂತ ಮುಂಚೆ ಕೆಲವು ಮೀಡಿಯಾಗಳನ್ನು ಉದ್ದೇಶಿಸಿ ಏನ್ರೀ ಮೀಡಿಯಾ ಎಂದಿದ್ದರು. ಇದೀಗ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಗ್ತಿದೆ. ಆರು ವಾರಗಳ ಕಾಲ ಅವರು ಜಾಮೀನಿನ ಮೇಲೆ ಹೊರಗೆ ಬರ್ತಿದ್ದಾರೆ. ಆದರೆ...
ನಟ ದರ್ಶನ್ ತೂಗುದೀಪ್ ಅವರಿಗೆ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿದೆ. ಆದರೆ, ಇದು ಪೂರ್ಣ ಪ್ರಮಾಣದ ರಿಲೀಫ್ ಅಲ್ಲ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರ ಆರೋಗ್ಯ ದೃಷ್ಟಿಯಿಂದ ಹಾಗೂ ಅವರಿಗೆ ಚಿಕಿತ್ಸೆ ಪಡೆದುಕೊಳ್ಳಲು ಕೋರ್ಟ್ ಅನುಮತಿ ನೀಡಿದೆ.

ನಟ ದರ್ಶನ್‌ಗೆ ಜಾಮೀನು ಮಂಜೂರು ಮಾಡುವ ಸಮಯದಲ್ಲಿ 8 ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಜಾಮೀನು ದುರುಪಯೋಗಪಡಿಸಿಕೊಳ್ಳಬಾರದು ಎಂದೂ ಸೂಚನೆ ನೀಡಲಾಗಿದೆ. ಇದರೊಂದಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳನ್ನೂ ನೀಡಿದೆ ಎಂದು ವರದಿಯಾಗಿದೆ. ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಹೊರಗೆ ಬಂದು ಮಾತನಾಡುವಂತಿಲ್ಲ ಎನ್ನುವ ಸೂಚನೆ ಇರಲಿದೆ ಎನ್ನಲಾಗಿದೆ.
ಹೀಗಾಗಿ, ಅವರು ಮೀಡಿಯಾಗಳ ಮುಂದೆ ಇನ್ಮುಂದೆ ಏನ್ರೀ ಮೀಡಿಯಾ ಅಂತ ಹೇಳೋಂಗಿಲ್ಲ ಅಂತ ಹೇಳಲಾಗ್ತಿದೆ. ಅಲ್ಲದೇ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುವಂತಿಲ್ಲ ಎನ್ನುವ ನಿರ್ಬಂಧವೂ ಇರಲಿದೆ ಎಂದು ಹೇಳಲಾಗುತ್ತಿದೆ.
ಏನ್ರೀ ಮೀಡಿಯಾ ಎಂದು ವಿವಾದ: ಈ ಹಿಂದೆ ನಟ ದರ್ಶನ್ ಏನ್ರೀ ಮೀಡಿಯಾ ಅಂತ ಹೇಳಿ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ಕೇವಲ ಏನ್ರೀ ಮೀಡಿಯಾ ಎಂದಿದ್ದರೆ ವಿವಾದವಾಗುತ್ತಿರಲಿಲ್ಲ. ಕೇವಲ ಈ ಹೇಳಿಕೆಗೆ ಮಾತ್ರ ವಿವಾದ ಆಗುತ್ತಲೂ ಇರಲಿಲ್ಲ. ಆದರೆ, ವಿವಾದವಾಗಿದ್ದೆಲ್ಲ ದರ್ಶನ್ ಏನ್ರೀ ಮೀಡಿಯಾ ಎಂದು ಹೇಳಿದ ನಂತರ ಬಳಸಿದ್ದ ಕೆಲವು ಕೆಟ್ಟ ಬೈಗುಳಗಳು. ಈ ಬೈಗುಳ ಮಾಧ್ಯಮದವರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೇ ಕಾರಣಕ್ಕಾಗಿ ಕೆಲವು ಮಾಧ್ಯಮಗಳು ಅದರಲ್ಲೂ ಪ್ರಮುಖ ದೃಶ್ಯ ಮಾಧ್ಯಮಗಳು ದರ್ಶನ್ ಅವರ ಸುದ್ದಿಗಳನ್ನು ಪ್ರಕಟಿಸದೆ ತಟಸ್ಥವಾಗಿದ್ದವು. ಇದಾದ ನಂತರ ಮಾಧ್ಯಮಗಳಿಗೆ ದರ್ಶನ್ ಅವರು ಸ್ನೇಹಪೂರ್ವಕವಾಗಿ (ಕ್ಷಮೆ ಕೇಳಿದ್ದಾರೆ ಎನ್ನಲಾದ) ಪತ್ರವೊಂದನ್ನು ಬರೆದಿದ್ದರು ಎನ್ನುವುದು ಸಹ ಸುದ್ದಿಯಾಗಿತ್ತು.
ಇದೀಗ ದರ್ಶನ್ ಅವರಿಗೆ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿದ್ದು, ಯಾವುದೇ ಕಾರಣಕ್ಕೂ ಇದನ್ನು ದುರುಪಯೋಗ ಪಡೆಸಿಕೊಳ್ಳಬಾರದು ಎನ್ನುವ ಸೂಚನೆಯನ್ನು ನೀಡಲಾಗಿದೆ.
ಅಭಿಮಾನಿಗಳ ಸಂಭ್ರಮಾಚರಣೆ: ದರ್ಶನ್‌ಗೆ ಮಧ್ಯಂತರ ಜಾಮೀನು ಪ್ರಕಟವಾಗುತ್ತಿದ್ದಂತೆಯೇ ಬುಧವಾರ ದರ್ಶನ್ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ದರ್ಶನ್ ಅಭಿಮಾನಿಗಳ ಪಾಲಿಗೆ ಈಗಾಗಲೇ ದೀಪಾವಳಿ ಹಬ್ಬ ಶುರುವಾಗಿದೆ ಎಂದೇ ಹೇಳಬಹುದು. ಆ ಮಟ್ಟಿಗೆ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ದರ್ಶನ್ ಅವರ ಅಭಿಮಾನಿಗಳು ಡಿ ಬಾಸ್ .. ಡಿಬಾಸ್ ಅಂತ ಸಂಭ್ರಮಾಚರಣೆ ಮಾಡ್ತಾ ಇದ್ದಾರೆ.












Click it and Unblock the Notifications