Darshan Thoogudeepa: ಚಾರ್ಜ್‌ಶೀಟ್‌ನಲ್ಲಿ ಏನಿದೆ ಎಂದು ಇವರಿಗೆ ಕರೆ ಮಾಡಿ ಕೇಳಿದ ದರ್ಶನ್ !
Darshan Thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಚ್‌ಶೀಟ್‌ನಲ್ಲಿ ಯಾವೆಲ್ಲ ಅಂಶ ಇದೆ ಎಂದು ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿ ವಿಚಾರಿಸಿದ್ದಾರೆ. ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3,991 ಪುಟಗಳ ಚಾರ್ಚ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಕೊಲೆ ನಡೆದ ವಿಧಾನ ಹಾಗೂ ಕೊಲೆಯ ಬಗ್ಗೆ ಹಲವು ಆಘಾತಕಾರಿ ಅಂಶಗಳನ್ನು ಸೇರಿಸಲಾಗಿದೆ. ಈ ಎಲ್ಲಾ ಅಂಶಗಳು ಸಹ ನಟ ದರ್ಶನ್ ಆಯಂಡ್ ಗ್ಯಾಂಗ್‌ಗೆ ಕಂಟಕವಾಗುವ ಸಾಧ್ಯತೆ ಇದೆ.
ಯಾರಿಗೆ ಕರೆ ಮಾಡಿ ವಿಚಾರಿಸಿದರು ನಟ ದರ್ಶನ್ ?
ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿಯ ಕಾರಾಗೃಹಕ್ಕೆ ಈಚೆಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಅದರಲ್ಲಿ ಇರುವ ಅಂಶಗಳ ಬಗ್ಗೆ ಕರೆ ಮಾಡಿ ನಟ ದರ್ಶನ್ ಮಾಹಿತಿ ಪಡೆದುಕೊಂಡಿದ್ದಾರೆ. ಈಚೆಗಷ್ಟೇ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದರು. ಸೋಮವಾರ ಚಾರ್ಜ್‌ಶೀಟ್ ಸಲ್ಲಿಕೆಯ ಬೆನ್ನಲ್ಲೇ ನಟ ದರ್ಶನ್ ಅವರು ಅವರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಕರೆ ಮಾಡಿ ಚಾರ್ಚ್‌ಶೀಟ್‌ನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಚಾರ್ಚ್‌ಶೀಟ್‌ನಲ್ಲಿ ಇರುವ ಪ್ರಮುಖ ಅಂಶಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿರುವವರಿಗೆ ದೂರುವಾಣಿ ಮೂಲಕ ಮಾತನಾಡಲು ಅವಕಾಶ ಇದೆ. ವಿಚಾರಣಾಧೀನ ಕೈದಿಗಳಿಗೆ ವಾರದಲ್ಲಿ ಎರಡು ಸಲ ಕರೆ ಮಾಡಿ ಮಾತನಾಡುವುದಕ್ಕೆ ಅವಕಾಶ ನೀಡಲಾಗಿದೆ. ದೂರವಾಣಿಯ ಮೂಲಕ ಎರಡು ಬಾರಿ ಕರೆ ಮಾಡಿ ವಿಚಾರಣಾಧೀನ ಕೈದಿಗಳು ಮಾತನಾಡಬಹುದು. ಅದೇ ರೀತಿ ಎರಡು ಬಾರಿ ವಿಡಿಯೋ ಕಾಲ್ ಮಾಡಿ ಮಾತನಾಡುವುದಕ್ಕೂ ನಿಯಮದಲ್ಲಿ ಅವಕಾಶ ಇದೆ. ಈ ಅವಕಾಶವನ್ನು ಬಳಸಿಕೊಂಡಿರುವ ನಟ ದರ್ಶನ್ ಚಾರ್ಜ್ ಶೀಟ್ ಕುರಿತಾದ ಮಾಹಿತಿಯನ್ನು ಪತ್ನಿ ವಿಜಯಲಕ್ಷ್ಮೀ ಅವರಿಂದ ಕೇಳಿ ತಿಳಿದುಕೊಂಡಿದ್ದಾರೆ.
ದರ್ಶನ್‌ಗೆ ಹೊಸ ಟಿವಿ ಸಿಗುವುದು ಅನುಮಾನ
ಇನ್ನು ನಟ ದರ್ಶನ್ ಅವರು ಈಚೆಗೆ ಟಿವಿ ನೀಡುವಂತೆ ಕೇಳಿದ್ದರು. ಆದರೆ, ಅವರಿಗೆ ಕಾರಾಗೃಹದಲ್ಲಿ ಹೊಸ ಟಿವಿ ಸಿಗುವುದು ಅನುಮಾನ ಎಂದು ಹೇಳಲಾಗಿದೆ. ಈಗಾಗಲೇ ಕಾರಾಗೃಹದಲ್ಲಿ ಕೆಲವು ಹಳೆಯ ಟಿವಿಗಳು ಇವೆ. ಹೊಸ ಟಿವಿ ಇಲ್ಲ. ಇರುವ ಹಳೆಯ ಟಿವಿಗಳಲ್ಲಿ ಒಂದನ್ನು ದರ್ಶನ್‌ಗೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಪಾತ್ರವೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವೇನು ಎನ್ನುವ ಬಗ್ಗೆ ಚಾರ್ಚ್‌ಶೀಟ್‌ನಲ್ಲಿ ವಿವರಿಸಲಾಗಿದೆ. ಈ ಹಿಂದೆಯೇ ಬಹಿರಂಗವಾದ ಅಂಶಗಳೊಂದಿಗೆ ಕೆಲವು ಗಂಭೀರವಾದ ಮಾಹಿತಿಗಳು ಸಹ ಇದರಲ್ಲಿ ಇದೆ. ಮುಖ್ಯವಾಗಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಬೆಂಗಳೂರಿಗೆ ಕರೆತರುವಂತೆ ಸೂಚನೆ ನೀಡಿರುವುದು. ಹಲ್ಲೆ ಮಾಡುವಂತೆ ಸೂಚನೆ ನೀಡಿರುವುದು ಮತ್ತು ದರ್ಶನ್ ಸಹ ಹಲ್ಲೆ ಮಾಡಿರುವುದು. ರೇಣುಕಾಸ್ವಾಮಿಯ ಕೊಲೆಯ ನಂತರದಲ್ಲಿ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು ಎನ್ನುವ ಆರೋಪಗಳು ಕೇಳಿಬಂದಿವೆ.












Click it and Unblock the Notifications