Darshan: ತೆರೆ ಮೇಲೆ ಬರಲಿದೆ ದರ್ಶನ್ & ಗ್ಯಾಂಗ್ ಅರೆಸ್ಟ್ ಸಿನಿಮಾ?
ಬೆಂಗಳೂರು, ಜೂನ್ 14: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಎಂದೂ ನಡೆಯದ ಘಟನೆಯೊಂದು ನಡೆದು ಹೋಗಿದೆ. ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್ ಈಗ ಅಕ್ಷರಶಃ ವಿಲವಿಲ ಎನ್ನುವತ್ತಿದ್ದು, ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೇ ಹೊರ ರಾಜ್ಯದಲ್ಲೂ ಸಾಕಷ್ಟು ಚರ್ಚೆಯಾಗುತ್ತಿದೆ.
ನಟ ದರ್ಶನ್ ಹಾಗೂ ಗ್ಯಾಂಗ್ ಬಂಧನದ ವಿಚಾರ ರಾಜ್ಯ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಡಿ.ಗ್ಯಾಂಗ್ ನಡೆಸಿದ ಘೋರ ಕೃತ್ಯದ ಬಗ್ಗೆ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ಇದರ ನಡುವೆ ನಟ ದರ್ಶನ್ ಬಂಧನದ ಕುರಿತು ಸಿನಿಮಾ ಮಾಡುವ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಟ್ವಿಟ್ ಮೂಲಕ ಸುಳಿವು ನೀಡಿದ್ದಾರೆ.

ತೆಲುಗು, ಹಿಂದಿ ಸಿನಿಮಾ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ದರ್ಶನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಸ್ಟಾರ್ ವೈಯಕ್ತಿಕ ಜೀವನದಲ್ಲಿ ತಲೆ ಹಾಕಿದ ಡೈ ಹಾರ್ಟ್ ಫ್ಯಾನ್, ಅಭಿಮಾನಿಯನ್ನ ಕೊಲ್ಲಲು ಮತ್ತೊಬ್ಬ ಡೈ ಹಾರ್ಟ್ ಸ್ಕ್ಯಾನ್ ಬಳಕೆ. ಇದು ಸ್ಟಾರ್ ಆರಾಧನೆ ಸಿಂಡೋಮ್ ವಿಚಿತ್ರಕ್ಕೆ ಉದಾಹರಣೆ ಎಂದ ಆರ್ ಜಿ ವಿ ಒಬ್ಬ ಫಿಲ್ಡ್ ಮೇಕರ್ ಸ್ಕಿನ್ ಪ್ಲೇ ಪಕ್ಕಾ ಆದ ಮೇಲೆ ಚಿತ್ರ ಶೂಟ್ ಮಾಡಬೇಕು. ಆದರೆ ದರ್ಶನ್ ಅರೆಸ್ಟ್ ಆದ್ಮಲೆ ಸ್ಟೀನ್ ಪ್ಲೇ ಬರೀತಿದ್ದಾರೆಂದು ಆರ್ ಜಿ ವಿ ಸುಳಿವು ನೀಡಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಸೇರಿದಂತೆ ಹಲವು ರಿಯಲ್ ಸ್ಟೋರಿಗಳ ಬಗ್ಗೆ ಹಲವು ಸಿನಿಮಾ ಮಾಡಿರುವ ವರ್ಮಾ ದರ್ಶನ್ ರಿಯಲ್ ಕಥೆ ಇಟ್ಟುಕೊಂಡು ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
Thrilled to announce the 11 short listed directors of YOUR FILM from 391 submissions ..Hey Abhijith Sai Reddy,Akilan Jagadeesan, Ashwin Nair,Guru Prasad Manari, Murali Krishna, Niranjan NagaRaja, Shekar Rajappa,Sudheer Akkaladevi, Suryanarayana Raju,Venkatesh yadav and…
— Ram Gopal Varma (@RGVzoomin) June 11, 2024
"ಚಿತ್ರ ನಿರ್ಮಾಪಕರು ಚಿತ್ರಕಥೆಯನ್ನು ಅಂತಿಮಗೊಳಿಸಿದ ನಂತರವೇ ಚಿತ್ರೀಕರಣವನ್ನು ಪ್ರಾರಂಭಿಸಬೇಕು ಆದರೆ ಚಿತ್ರೀಕರಣ ನಡೆಯುತ್ತಿರುವಾಗ ನಿರ್ಮಾಪಕರು ಇನ್ನೂ ಸಾಕಷ್ಟು ಬಾರಿ ಬರೆಯುತ್ತಿದ್ದಾರೆ ಆದರೆ ದರ್ಶನ್ ಅವರ ಪ್ರಕರಣದಲ್ಲಿ ಚಿತ್ರ ಈಗಾಗಲೇ ಬಿಡುಗಡೆಯಾದ ನಂತರ ಚಿತ್ರಕಥೆ ಬರೆಯಲು ಪ್ರಾರಂಭಿಸಿತು ಎಂದಿದ್ದಾರೆ












Click it and Unblock the Notifications