Train: ಬೆಂಗಳೂರು-ದಾಂಡೇಲಿ ರೈಲು ಸೇವೆ ಆರಂಭದ ಅಪ್ಡೇಟ್ ಮಾಹಿತಿ
ಹುಬ್ಬಳ್ಳಿ, ಡಿಸೆಂಬರ್ 20: ಉತ್ತರ ಕನ್ನಡ ಜಿಲ್ಲೆಯ ಭಾಗದಿಂದ ದಕ್ಷಿಣ ಭಾಗದ ರಾಜ್ಯ ರಾಜಧಾನಿ ಬೆಂಗಳೂರಿಗೆ ರೈಲು ಸಂಪರ್ಕ ಸೇವೆ ಇತ್ತು. ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಲಕ್ಷಾಂತರ ಜನರಿಗೆ ಆಸರೆಯಾಗಿದ್ದ ದಾಂಡೇಲಿ ರೈಲು ಸಂಚಾರ ಸ್ಥಗಿತಗೊಂಡಿತು. ಇದೀಗ ಮತ್ತೆ ಈ ಮಾರ್ಗದ ರೈಲು ಸೇವೆ ಆರಂಭಿಸುವಂತೆ ಕೂಗು ಕೇಳಿ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ ಪೂರ್ವದಲ್ಲಿ ಜಿಲ್ಲೆಯಲ್ಲಿಯೇ ಮೊದಲು ರೈಲು ಸಂಪರ್ಕ ಪಡೆದುಕೊಂಡು ಜಿಲ್ಲೆಯಾಗಿದೆ. ಪ್ಯಾಸೆಂಜರ್ ರೈಲು ಸೇವೆ ಆರಂಭವಾಗಿತ್ತು. ಈ ರೈಲು ಸೇವೆ ನಿಂತರಿದೆ. ದಾಂಡೇಲಿಯ ವಿವಿಧ ಸಂಘಟನೆಗಳು ಅನೇಕ ಬಾರಿ ಈ ರೈಲು ಸೇವೆ ಪ್ರಾರಂಭಿಸುವಂತೆ ಒತ್ತಾಯ ಮಾಡಿದರೂ ಆಗಿರಲಿಲ್ಲ.

ದಿವಂಗತ ರೈಲ್ವೆ ಸಚಿವರಾದ ಸುರೇಶ್ ಅಂಗಡಿಯವರು ದಾಂಡೇಲಿಯಿಂದ ಪ್ಯಾಸೆಂಜರ್ ರೈಲು ಸೇವೆಗೆ ಗ್ರೀನ್ ಸಿಗ್ನಲ್ ಕೊಡಿಸಿದ್ದರು. ಆದರೆ ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಉದ್ಭವಿಸಿದ ಪರಿಣಾಮ ಎಲ್ಲ ಪ್ಯಾಸೆಂಜರ್ ರೈಲುಗಳ ಸಂಚಾರ ನಿಲ್ಲಿಸಲಾಗಿತ್ತು. ಆಗ ಬೆಂಗಳೂರು-ದಾಂಡೇಲಿ ರೈಲು ಸೇವೆ ಸಹ ನಿಂತಿತು. ಆದರೆ ಕೋವಿಡ್ ಬಳಿಕ ಪುನಃ ಆರಂಭವಾಗಲೇ ಇಲ್ಲ ಎಂದು ಇಲ್ಲಿನ ವಿವಿಧ ಸಂಘಟನೆಗಳ ಅಳಲು ತೋಡಿಕೊಂಡಿವೆ.
ಈಗಾಗಲೇ ವಿವಿಧ ರೀತಿಯಲ್ಲಿ ಅನೇಕ ಸಂಘಟನೆಗಳು ಹೋರಾಟ ನಡೆಸಿ ಮನವಿಯು ಸಹ ಸಲ್ಲಿ ಸಲಾಗಿತ್ತು ರೈಲ್ವೆ ಇಲಾಖೆಯು ವಿದ್ಯುದೀಕರಣ ಕಾಮಗಾರಿ ಆರಂಭಿಸಿತು. ರೈಲುಗಾಗಿ ಪ್ಲ್ಯಾಟ್ ಫಾರ್ಮ್ ಅವಶ್ಯವಿರುವ ಎಲ್ಲಾ ಕೆಲಸಗಳು ಮುಗಿಸಲಾಗಿದೆ.
ವಿ.ಸೋಮಣ್ಣ ನೇತೃತ್ವಲ್ಲಿ ಸೇವೆ ಪುನಾರಂಭ ಚರ್ಚೆ
ಇನ್ನೂ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯ ಸಭೆಯು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ರೈಲ್ವೆ ಇಲಾಖೆ ಸಂಬಂಧಪಟ್ಟ ವಿಷಯಗಳ ಬಗ್ಗೆ ದಾಂಡೇಲಿಯಿಂದ ಪ್ಯಾಸೆಂಜರ್ ರೈಲು ಸೇವೆ ನಡೆಸಲು ಚರ್ಚೆ ನಡೆಸಲಾಗಿದೆ.
ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಸ್ವಾಗತಿಸುತ್ತೇವೆ. ದಾಂಡೇಲಿಯಿಂದ ಪ್ರತಿದಿನ ಕನಿಷ್ಠ ಆರು ಖಾಸಗಿ ಬಸ್ಸುಗಳು 2 ಸಾರಿಗೆ ಸಂಸ್ಥೆಗಳು ಬಸ್ಸುಗಳು ಸಂಚರಿಸುತ್ತೇವೆ. ದಾಂಡೇಲಿ ಮತ್ತು ಜೋಯಿಡಾ ಈಗಾಗಲೇ ಪ್ರವಾಸಿಕೇಂದ್ರವಾಗಿ ಜನರನ್ನು ಆಕರ್ಷಿಸುತ್ತಿದೆ. ಇದೆಲ್ಲ ಕಾರಣಗಳಿಂದ ಬೆಂಗಳೂರಿಗೆ ಇಲ್ಲಿಂದ ನೇರವಾಗಿ ರೈಲು ಸಾರಿಗೆ ಸೇವೆಯ ಅಗತ್ಯವಿದೆ ಎಂದರು.
ಬೆಂಗಳೂರಿಗೆ ತೆರಳುವವರಿಗೆ ಅನುಕೂಲ
ಬೆಂಗಳೂರಿಂದ ಹುಬ್ಬಳ್ಳಿಗೆ ಬರುವ ರೈಲು ಹುಬ್ಬಳ್ಳಿಯಲ್ಲಿ ನಿಲ್ಲುತ್ತದೆ. ಅದೇ ರೈಲು ಮುಂದುವರಿಸಿ ದಾಂಡೇಲಿವರೆಗೆ ಸಂಚರಿಸಿದರೆ ಈ ಭಾಗದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ರೈಲು ವಿಸ್ತರಣೆಯಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ದಾಂಡೇಲಿ, ಜೋಯಿಡಾದಿಂದ ಅನೇಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುತ್ತಾರೆ.
ಕೇಂದ್ರ ರೈಲ್ವೆ ಸಚಿವರಾದ ವಿ. ಸೋಮಣ್ಣ. ಕೇಂದ್ರ ಸಚಿವರಾದ್ ಪ್ರಹ್ಲಾದ್ ಜೋಶಿ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರು ಮತ್ತು ರಾಜ್ಯ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ ದೇಶಪಾಂಡೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಈ ಕುರಿತು ಸರ್ಕಾರ, ರೈಲ್ವೆ ಇಲಾಖೆ ಶೀಘ್ರವೇ ಈ ಬಗ್ಗೆ ಸ್ಪಂದಿಸಿದರೆ, ಮುಂದಿನ ದಿನಗಳಲ್ಲಿ ದಾಂಡೇಲಿ-ಬೆಂಗಳೂರು ರೈಲು ಸೇವೆ ಪುನಾರಂಭಗೊಳ್ಳಬಹುದು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications