OLA Electric: ಕನ್ನಡಿಗರೇ.. ಓಲಾ ಒಂದು ಡಬ್ಬಾ ಗಾಡಿ ತಗೊಬೇಡಿ ಪ್ಲೀಸ್! ನೊಂದ ಗ್ರಾಹಕರ ಮನವಿ
ಓಲಾ ಎಲೆಕ್ಟ್ರಿಕ್, ಸದ್ಯ ಭಾರತದಲ್ಲಿ ಪ್ರತಿ ವರ್ಷ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್ ಎನ್ನುವ ಹೆಗ್ಗಳಿಕೆ ಇರುವ ಕಂಪನಿ. ಹೆಚ್ಚು ಸ್ಕೂಟರ್ ಮಾರಾಟವಾದರೂ ಗ್ರಾಹಕ ಸೇವೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದಲ್ಲ ಎರಡಲ್ಲ ಈ ರೀತಿಯ ಹಲವಾರು ಘಟನೆಗಳು ನಡೆಯುತ್ತಿದ್ದು, ಓಲಾ ಎಲೆಕ್ಟ್ರಿಕ್ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಓಲಾ ಸಂಸ್ಥೆಯ ಕೆಟ್ಟ ಗ್ರಾಹಕ ಸೇವೆಯಿಂದ ಬೇಸತ್ತು, ಓಲಾ ವಿರುದ್ಧ ಗ್ರಾಹಕರೊಬ್ಬರು ವಿನೂತನವಾಗಿ ಹೋರಾಟ ಶುರು ಮಾಡಿದ್ದಾರೆ.
ನಿಶಾ ಗೌರಿ ನಿಶಾ ಗೌರಿ (@Nisha_gowru) ಎನ್ನುವ ಹೆಸರಿನ ಎಕ್ಸ್ ಬಳಕೆದಾರರು ಇದೀಗ ಓಲಾ ಸ್ಕೂಟರ್ ಖರೀದಿ ಮಾಡದಂತೆ ಕನ್ನಡಿಗರಿಗೆ ಮನವಿ ಮಾಡುತ್ತಿದ್ದಾರೆ. ಓಲಾ ಒಂದು ಡಬ್ಬಾ ಗಾಡಿ ನೀವು ಖರೀದಿ ಮಾಡಿದರೆ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ ಎಂದು ಕೇಳಿಕೊಂಡಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು, ಓಲಾ ವಿರುದ್ಧ ಜಾಗೃತಿಯನ್ನು ಮೂಡಿಸುತ್ತಿದ್ದೇನೆ. ಈ ಐಡಿಯಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್" ಎಂದು ತಮ್ಮ ಸ್ನೇಹಿತರ ಹೆಸರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೆ ತಮ್ಮ ಓಲಾ ಗಾಡಿ ಮೇಲೆ "ಪ್ರಿಯ ಕನ್ನಡಿಗರೆ, ಓಲಾ ಒಂದು ಡಬ್ಬಾ ಗಾಡಿ, ದಯವಿಟ್ಟು ತಗೋಬೇಡಿ, ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು. Please Don't Buy Ola Electric" ಎಂದು ಬರೆದಿರುವ ಕಾಗದವನ್ನು ಅಂಟಿಸಿದ್ದಾರೆ.
ದೂರಿಗೆ ಸ್ಪಂದಿಸದ ಕಂಪನಿ
ನಿಶಾ ಗೌರಿ ಅವರು ಏಕಾಏಕಿ ಓಲಾ ವಿರುದ್ಧ ಪ್ರಚಾರ ಮಾಡಲು ನಿರ್ಧಾರ ಮಾಡಿದ್ದಲ್ಲ. ಹಲವು ತಿಂಗಳುಗಳಿಂದ ಓಲಾ ಬಳಸುತ್ತಿರುವ ಅವರು, ಸ್ಕೂಟರ್ ಕಳಪೆ ಗುಣಮಟ್ಟ ಮತ್ತು ಸರಿಯಾಗಿ ಸ್ಪಂದಿಸದ ಗ್ರಾಹಕ ಸೇವೆಯಿಂದ ಜಿಗುಪ್ಸೆಗೊಂಡ ಬಳಿಕ ಕೊನೆಯದಾಗಿ ಈ ನಿರ್ಧಾರ ಮಾಡಿದ್ದಾರೆ.
“Ola ತಗೊಂಡ್ರೆ ನಿಮ್ಮ ಜೀವನ ಗೋಳು “
— ನಿಶಾ ಗೌರಿ 💛❤ (@Nisha_gowru) September 12, 2024
I will Be Spreading Awareness Against Ola Electric 😁🤌🏻
Thanks For The Idea @UppinaKai Sir 🫡 #DontBuyOla#OlaElectric pic.twitter.com/bcVQ3i6P3K
ನಿಶಾ ಗೌರಿ ಅವರು ಈ ಮೊದಲು ಕೂಡ ಹಲವು ಬಾರಿ ತಾವು ಓಲಾ ಸ್ಕೂಟರ್ ನಿಂದ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸ್ಕೂಟರ್ ಗುಣಮಟ್ಟ ಚನ್ನಾಗಿಲ್ಲ ಎಂದು ದೂರಿದ್ದು ಇದನ್ನು ಖರೀದಿ ಮಾಡಿ ಕಷ್ಟಪಟ್ಟು ದುಡಿದ ಹಣ ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದರು. ಕಂಪನಿ ತಮಗೆ ಸರಿಯಾಗಿ ಸ್ಪಂದಿಸದ ಕಾರಣ ಕಾನೂನು ಹೋರಾಟ ಕೂಡ ಆರಂಭಿಸಿದ್ದಾರೆ.
ಕಲಬುರಗಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ಓಲಾ ಖರೀದಿ ಮಾಡಿದ್ದ ಗ್ರಾಹಕನೊಬ್ಬ ಸರಿಯಾಗಿ ಸ್ಕೂಟರ್ ರಿಪೇರಿ ಮಾಡಿಕೊಡಲಿಲ್ಲ ಎಂದು ಸಿಟ್ಟಿಗೆದ್ದು ಶೋ ರೂಮ್‌ಗೆ ಬೆಂಕಿ ಹಂಚಿದ್ದ, ಘಟನೆಯಲ್ಲಿ 6 ಬೈಕ್‌ಗಳು ಸುಟ್ಟುಹೋಗಿದ್ದವು. ಇದಲ್ಲದೆ ಇನ್ನೂ ಅನೇಕ ಗ್ರಾಹಕರು ಆಗಾಗ್ಗೆ ಓಲಾ ಸ್ಕೂಟರ್ ಸಮಸ್ಯೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ನೋಡಬಹುದು.











Click it and Unblock the Notifications