ಬ್ರಾಂಡ್ ಬೆಂಗಳೂರು ಬಿಟ್ಟು ಬಾಂಬ್ ಬೆಂಗಳೂರು ಆಗಿದೆ: ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ವ್ಯಂಗ್ಯ
ಬೆಂಗಳೂರು, ಏಪ್ರಿಲ್ 01: ಬೆಂಗಳೂರು ಕೇಂದ್ರದಲ್ಲಿ ಪಿ.ಸಿಮೋಹನ್ ಸಂಸದರಾಗಿ ನಾಲ್ಕನೇ ಬಾರಿ ಗೆಲ್ಲಿಸಲು ಬಂದಿದ್ದೀರಿ. ಈ ಚುನಾವಣೆ ರಾಷ್ಟ್ರ ಹಿತದ ಚುನಾವಣೆ. ಒಂದು ಕಡೆ ದೇಶ ಭಕ್ತರನ್ನು ಬಲಿಸುವ ಬಿಜೆಪಿ. ಇನ್ನೊಂದು ಕಡೆ ಕಾಂಗ್ರೆಸ್, ಪಾಕಿಸ್ತಾನ್ ಜಿಂದಾಬಾದ್ ಅಂತ ದೇಶ ವಿರೋಧಿ ಘೋಷಣೆ ಕೂಗೋರ ಕಡೆ ಎಂದು ಮಾಜಿ ಸಚಿವ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಾಂಗ್ರೆಸ್ ಜಿಂದಾಬಾದ್ ಅಂತ ಕೂಗಿದರು. ಜೊತೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅಂತಲೂ ಕೂಗಿದರು. ವಿಧಾನಸೌಧದಲ್ಲಿ ನಾಸಿರ್ ಹುಸೇನ್ ಜಯವನ್ನು ಭಾರತ್ ಮಾತಾಕಿ ಅಂತ ಸಂಭ್ರಮಿಸಲಿಲ್ಲ. ಪಾಕಿಸ್ತಾನ್ ಜಿಂದಾಬಾದ್ ಅಂತ ಕೂಗಿದರು ಎಂದರು.

ನಾಸಿರ್ ಸಾಬ್ ಅಂತ ಕೂಗಿದರು ಅಂತ ಹೇಳಿದರು. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಪರಮೇಶ್ವರ್, ಜಮೀರ್ ಎಲ್ಲರೂ ಚಂಡು ಹೂ ಇಟ್ಟುಕೊಂಡಿದ್ದು ನೋಡಿದ್ದೋ. ಆದರೆ ರಾಜ್ಯದ ಜನತೆ ಕಿವಿಗೆ ಹೂ ಮುಡಿಸಲು ಹೊರಟಿದ್ದಾರೆ. ಮಾಧ್ಯಮದಲ್ಲಿ ಬಿತ್ತರಿಸಿದ ಮೇಲೆ ಸುಮೋಟೋ ಕೇಸ್ ದಾಖಲಿಸಿಕೊಂಡರು. ನಿಮ್ಮನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತ ಕರೆಯಬೇಕೋ, ಬೇರೆ ಅಂತ ಕರೆಯಬೇಕೋ ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ ಆದಾಗ, ಡಿಕೆಶಿ ಹೇಳಿದ್ರು ದೇ ಆಲ್ ಮೈ ಬ್ರದರ್ಸ್ ಅಂತ. ಡಿ.ಜೆ ಹಳ್ಳಿ ಕೇಸ್‌ನಲ್ಲಿ ದಲಿತ ಶಾಸಕನ ಮನೆ ಸುಟ್ಟರು. ಇವರನ್ನು ಸಮಾಜಘಾತಕ, ಕ್ರಮಿನಲ್, ಮತಾಂದರು ಅಂತ ಕರೆಯಬೇಕಿತ್ತು. ಕಾಂಗ್ರೆಸ್ ಅವರನ್ನು ಕ್ರಿಮಿನಲ್ ಅನ್ನಲಿಲ್ಲ. ಅಮಾಯಕರು ಅಂತ ಕರೆದರು. ಅದಕ್ಕೆ ರಾಮೇಶ್ವರ ಕೆಫೆಗೆ ಬಂದು ಬಾಂಬ್ ಬ್ಲಾಸ್ಟ್ ಮಾಡಿದರು. ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಅಂದರು, ಆದರೆ ಈಗ ಬಾಂಬ್ ಬೆಂಗಳೂರು ಆಗಿದೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದಲ್ಲಿ ಒಂದು ಟ್ಯಾಂಕರ್ ನೀರಿಗೆ ಎರಡು ಸಾವಿರ, ಇಲ್ಲಿ ಆರು ಸಾವಿರ. ರಾಜಸ್ತಾನಕ್ಕಿಂತ ಹೆಚ್ಚಿನ ಬೆಲೆ ಇಲ್ಲಿ ಟ್ಯಾಂಕರ್‌ಗೆ ಕೊಡಬೇಕಿದೆ. ಇಲ್ಲಿ ಕುಡಿಯೋಕೂ ಸಹ ನೀರಿಲ್ಲ. ತಮಿಳುನಾಡಿಗೆ ನೀರನ್ನು ಹರಿಬಿಟ್ಟರು. ಇವರು ತಮಿಳುನಾಡಿನ ಮೈತ್ರಿ ಉಳಿಸಿಕೊಳ್ಳಲು, ಮಂಡ್ಯ, ಬೆಂಗಳೂರು ಜನತೆಗೆ ಮೋಸ ಮಾಡಿದರು ಎಂದರು,
ಬೆಂಗಳೂರು ಐಟಿ ಸಿಟಿಯಾಗಿ ಉಳಿಯಬೇಕು, ಕೆಂಪೇಗೌಡರ ನಾಡಾಗಿ ಉಳಿಯಬೇಕು. ನಮ್ಮದು ಬಾಂಬ್ ಸಿಟಿಯಿಂದ ಉಳಿಯಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕು. ಅದಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಆಗ ಯಾರೂ ಬಾಲ ಬಿಚ್ಚಲ್ಲ. ಜಗತ್ತಿನಲ್ಲಿ ಭಾರತದ ಬಗ್ಗೆ ಗೌರವ ಹೆಚ್ಚಾಗಿದೆ. ಎಲ್ಲಾ ಕಡೆ ಮೋದಿ ಮೋದಿ ಅಂತ ಘೋಷಣೆ ಕೂಗುತ್ತಾರೆ. ಆಸ್ಟ್ರೇಲಿಯಾ ಅಧ್ಯಕ್ಷ ಹೇಳಿದ್ರು, ಮೋದಿ ಇಸ್ ಬಾಸ್ ಅಂತ. ಅಮೇರಿಕಾ ಅಧ್ಯಕ್ಷರು ಮೋದಿ ಪರ ಇದ್ದಾರೆ. ಆದರೆ ಇವರಿಗೆ ಮಾತ್ರ ಮೋದಿ ಕಂಡ್ರೆ ಆಗಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು.












Click it and Unblock the Notifications