CT Ravi Case: ಸಿಟಿ ರವಿ ಬಂಧನ: ಖಾನಾಪುರ ಸಿಪಿಐ ಮಂಜುನಾಥ್ ನಾಯಕ್ ಅಮಾನತು

ಬೆಳಗಾವಿ,ಡಿಸೆಂಬರ್‌ 25: ಬಿಜೆಪಿ ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ.ರವಿ ಅವರ ಬಂಧನ ಪ್ರಕರಣ ಹಾಗೂ ಆ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಬಿಜೆಪಿ ನಾಯಕ ಸಿ. ಟಿ.ರವಿ ಪರ ಬಿಜೆಪಿ ನಾಯಕರನ್ನು ಠಾಣೆಯ ಒಳಗಡೆ ಬರಲು ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಿ ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಆದೇಶ ಹೊರಡಿಸಿದ್ದಾರೆ. ಸಿ.‌ಟಿ.‌ರವಿ ಅವರನ್ನು ಹಿರೇಬಾಗೆವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆ ತಂದಾಗ ಹಲವು ರಾಜಕೀಯ ನಾಯಕರು ಇನ್ಸಪೆಕ್ಟರ್ ಕೊಠಡಿವರೆಗೆ ಪ್ರವೇಶಿಸಿ ಕುಳಿತು ಚರ್ಚೆ ನಡೆಸಿದ್ದರು.

CT Ravi Case Khanapur Police Inspector Suspended After Controversy

ಸಿಪಿಐ ಮಂಜುನಾಥ್ ನಾಯಕ್ ​ಅಮಾನತಿಗೆ ಐಜಿಪಿ ವಿಕಾಸ್ ಕುಮಾರ್ ಕಾರಣ ನೀಡಿದ್ದಾರೆ. ಡಿಸೆಂಬರ್​ 19ರಂದು ಸಿ.ಟಿ.ರವಿಯವರನ್ನು ಹಿರೇಬಾಗೇವಾಡಿ ಠಾಣೆಯಿಂದ ಖಾನಾಪುರ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಠಾಣೆಯ ಸಿಬ್ಬಂದಿಯನ್ನಿಟ್ಟುಕೊಂಡು ಸೂಕ್ತ ಭದ್ರತೆ ನೀಡುವಂತೆ ಸೂಚಿಸಲಾಗಿತ್ತು. ಸಿಟಿ ರವಿ ಅವರನ್ನ ಹೊರತುಪಡಿಸಿ ಯಾರನ್ನೂ ಒಳಬೀಡದಂತೆ ಆದೇಶಿಸಲಾಗಿತ್ತು. ಆದರೆ, ಸಿಪಿಐ ಮಂಜುನಾಥ್ ನಾಯಕ್ ಸೂಕ್ತ ಬಂದೋಬಸ್ತ್ ಮಾಡಿರಲ್ಲ.

ಪೊಲೀಸ್‌ ಠಾಣೆ ಒಳಗೆ ರಾಜಕೀಯ ಮುಖಂಡರು ಖಾನಾಪುರ ಠಾಣೆ ಒಳಗೆ ನುಗ್ಗಿ ಬಂದಿದ್ದರು. ಇದರಿಂದ ಠಾಣೆಯೊಳಗೆ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ರಾಜಕೀಯ ಮುಖಂಡರನ್ನು ತಡೆಯುವಲ್ಲಿ ವಿಫಲರಾಗಿದ್ದರು. ಮೇಲಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಕರ್ತವ್ಯ ಲೋಪ, ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿಟ್ಟು ಆದೇಶ ಹೊರಡಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿಟಿ ರವಿ ಅವರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅವರನ್ನು ಅಮಾನತು ಮಾಡಲಾಗಿದ್ದು, ಬಿಜೆಪಿ ಮತ್ತು ಇತರ ಸಂಘಟನೆಗಳು ಈ ಅಮಾನತು ಖಂಡಿಸಿ ಖಾನಾಪುರ ಬಂದ್‌ಗೆ ಕರೆ ನೀಡಿವೆ.

ಸಿಪಿಐ ಮಂಜುನಾಥ್ ನಾಯಕ್ ಅಮಾನತು ವಿರೋಧಿಸಿ ನಾಳೆ(ಡಿಸೆಂಬರ್‌ 26) ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಖಾನಾಪುರ ಪಟ್ಟಣ ಬಂದ್ ಗೆ ಕರೆ ಕೊಟ್ಟಿವೆ. ಬಿಜೆಪಿ, ಜೆಡಿಎಸ್ ಮತ್ತು ದಲಿತ ಪರ, ಕನ್ನಡ ಪರ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಿದ್ದು, ಅಮಾನತು ವಾಪಾಸ್ ಪಡೆಯುವಂತೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ.

ಸಿ.ಟಿ.ರವಿ ಕೇಸ್ ಸಿಐಡಿ ವರ್ಗಾವಣೆ ಸರ್ಕಾರಕ್ಕೆ ಬಿಟ್ಟ ವಿಚಾರ

ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಅವಾಚ್ಯ ಶಬ್ದ ಬಳಕೆ ವಿಚಾರದಲ್ಲಿ ಸಿಐಡಿ ಗೆ ಕೇಸ್ ವರ್ಗಾವಣೆ ವಿಚಾರ ಸರ್ಕಾರಕ್ಕೆ ಇರುವಂತದ್ದು, ಅವಾಗ ಸರ್ಕಾರ ತನ್ನದೇ ಆದ ಕೆಲಸವನ್ನು ಮಾಡುತ್ತದೆ. ಅವರ ಬಗ್ಗೆ ನಾವು ಕಾಮೆಂಟ್ ಮಾಡುವಂತದ್ದು, ಬರೋದೇ ಇಲ್ಲ. ಯಾಕಂದ್ರೆ ಅಡ್ಮಿಸ್ಟೇಟ್ರೇಷನ್ ವಿಚಾರ ಅದು. ಸಿಓಡಿಗೆ ಕೂಡ ಕೊಟ್ಟಿದ್ದಾರೆ, ಆ ತೀರ್ಮಾನ ಸರ್ಕಾರ ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸಿಟಿ ರವಿ ಅವರು ಕೂಡ ಏಳು ಪುಟದ ಪತ್ರವನ್ನು ಬರೆದಿದ್ದಾರೆ. ನಾವು ಧರಣಿ ಮಾಡುವ ರೀತಿ ಆ ಕೂಡಲೇ ನಮ್ಮನ್ನ ಕರ್ಕೊಂಡು ಹೋಗಿ ರಾತ್ರಿ ಎಲ್ಲ ಸುತ್ತಾಡಿಸಿದ್ದಾರೆ. ಹೀಗಾಗಿ ಈ ರೀತಿ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಪತ್ರ ಬರೆದಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+