ಸಿಟಿ ರವಿ ಪ್ರಕರಣ: "ರಾಜಿ ಸಂಧಾನ"ಕ್ಕೆ ಪ್ಲಾನ್: ಯಾರ ಪ್ರಯತ್ನ, ವಿಫಲವಾಗಿದ್ದೇಕೆ ?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಾಚ್ಯ ಶಬ್ದ ಬಳಸಿದ ಆರೋಪವನ್ನು ಎಂಎಲ್‌ಲಿ ಸಿಟಿ ರವಿ ಅವರು ಎದುರಿಸುತ್ತಿದ್ದಾರೆ. ಸಿಟಿ ರವಿ ಅವರು ಅವಾಚ್ಯ ಶಬ್ದ ಬಳಸಿದ್ದಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲಾಗಿದ್ದು ತನಿಖೆ ನಡೆದಿದೆ. ಆದರೆ, ಈ ನಡುವೆ ಸಚಿವೆ ಲಕ್ಷಿ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ನಡುವೆ ರಾಜಿ ಸಂಧಾನಕ್ಕೆ ಪ್ಲಾನ್ ನಡೆದಿದ್ದ ವಿಚಾರ ಇದೀಗ ಬಹಿರಂಗವಾಗಿದೆ. ಹೌದು ಈ ಪ್ರಕರಣವನ್ನು ದೊಡ್ಡ ಹಂತಕ್ಕೆ ಬೆಳೆಯಲು ಬಿಡದಂಗೆ ಮೂಲದಲ್ಲೇ ಮುಗಿಸಲು ಪ್ಲಾನ್ ನಡೆದಿತ್ತು. ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಲು ಮುಂದಾಗಿದ್ದು ಯಾರು, ಯಾಕೆ ರಾಜಿ ಸಂಧಾನ ಸಕ್ಸಸ್ ಆಗಲಿಲ್ಲ. ಈಗ ಈ ವಿಷಯವನ್ನು ಹೇಳಿದ್ದು ಯಾರು ಎನ್ನೋದು ನೋಡೋಣ...
ಸಿಟಿ ರವಿ ಅವರು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಅವಾಚ್ಯ ಶಬ್ದ ಬಳಸಿದ್ದಾರೆ ಎನ್ನುವುದು ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಜಿದ್ದಾಜಿದ್ದಿ ಮುಂದುವರಿದೆ. ಆದರೆ ಈ ಕೇಸ್ ಈ ಹಂತದ ವರೆಗೆ ಹೋಗದೆ ಅಧಿವೇಶನದಲ್ಲೇ ರಾಜಿ ಸಂಧಾನ ಮಾಡಿಸುವ ಪ್ರಯತ್ನ ನಡೆದಿತಂತೆ. ಹೌದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ದೂರು ನೀಡದಂತೆ ಅಥವಾ ಅಲ್ಲಿಗೆ ಇದನ್ನು ಬಿಡುವ ವಿಚಾರದಲ್ಲಿ ಇವರಿಬ್ಬರ ನಡುವೆ ರಾಜಿ ಸಂಧಾನ ಮಾಡಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ.

ಈ ವಿಚಾರವನ್ನು ಖುದ್ದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೇ ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಪ್ರಕರಣವನ್ನ ರಾಜಿ ಸಂಧಾನ ಮೂಲಕ ಮುಗಿಸಬೇಕು ಎಂದು ಕೇಳಿದ್ದೆ. ಅದಕ್ಕೆ ಪ್ರಯತ್ನವನ್ನೂ ಮಾಡಿದ್ದೆ ಎಂದು ಅವರು ಈಗ ಹೇಳಿದ್ದಾರೆ.
ನಾನು ವಿಧಾನ ಪರಿಷತ್ ಚೇರ್ಮನ್ ಆಗಿರುವುದರಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಪರಿಷತ್ ಸದಸ್ಯ ಸಿಟಿ ರವಿ ಬಳಸಿದರೆನ್ನಲಾಗಿರುವ ಅವಾಚ್ಯ ಪದದ ಪ್ರಕರಣವನ್ನು ನಾನು ಅಲ್ಲಿಗೇ ಮುಗಿಸಿ. ಮುಂದಕ್ಕೆ ಸಾಗಬೇಕೆಂದು ಬಯಸಿದ್ದೆ. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆಯೂ ಮಾಡಿದ್ದೆ. ಆದರೆ ಎಲ್ಲರೂ ಅವರವರ ನಿಲುವುಗಳಿಗೆ ಬದ್ಧರಾಗಿದ್ದರು. ಹೀಗಾಗಿ ನಾನೇನು ಮಾಡಲಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ. ಈ ಪ್ರಕರಣ ಈಗ ರಾಜಕೀಯವಾಗಿ ಮಾರ್ಪಟ್ಟಿರುವುದರಿಂದ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾರ ಪಕ್ಷವನ್ನೂ ವಹಿಸಲಾರೆ. ಆ ಪೀಠದ ಮೇಲೆ ಆಸೀನನಾದಾಗ ನನಗೆ ಎಲ್ಲಾ ಸದಸ್ಯರು ಒಂದೇ ಅಂತ ಹೊರಟ್ಟಿ ಅವರು ಹೇಳಿದ್ದಾರೆ.
ಈ ಪ್ರಕರಣದ ವಿಚಾರವಾಗಿ ಸಿಟಿ ರವಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆಯೂ ವಿವರಿಸಿ ಹೇಳಿದ್ದಾರೆ. ಈ ನಡುವೆ ತನಿಖೆಯನ್ನು ಚುರುಕುಗೊಳಿಸಿರುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.












Click it and Unblock the Notifications