ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಪಿಪಿಇ ಕಿಟ್ ಖರೀದಿ ಅಕ್ರಮ ನ್ಯಾಯಾಂಗ ತನಿಖೆಗೆ ವಹಿಸಿ"

|
Google Oneindia Kannada News

ಬೆಂಗಳೂರು, ಮೇ 30: ಪಿಪಿಇ ಹಾಗೂ ಕೋವಿಡ್- 19 ರ ಟೆಸ್ಟಿಂಗ್ ಕಿಟ್ ಖರೀದಿಯಲ್ಲಿನ ಭ್ರಷ್ಟಾಚಾರವನ್ನು ಸ್ವತಂತ್ರ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಲು ಸಿಪಿಐ(ಎಂ) ಆಗ್ರಹಿಸಿದೆ.

ಕೋವಿಡ್- 19 ರ ಹೋರಾಟದಲ್ಲಿ ತೊಡಗಿದ ಆರೋಗ್ಯ ಸಿಬ್ಬಂದಿಗೆ ಕೊಡಲಾಗುವ ಸುರಕ್ಷಾ ಸಾಮಾಗ್ರಿಗಳಾದ ಪಿಪಿಇ ಕಿಟ್, ಕರೋನಾ ಟೆಸ್ಟಿಂಗ್ ಕಿಟ್, ಸ್ಯಾನಿಟೈಸರ್ ಗಳು ಕಳಪೆ ಗುಣಮಟ್ಟದ್ದಾಗಿದ್ದು ಮತ್ತು ಅಂತಹ ಕಳಪೆ ಸಾಮಗ್ರಿಗಳ ಖರೀದಿಸುವಲ್ಲಿಯೂ ದುಬಾರಿ ಬೆಲೆ ನೀಡಿ ಖರೀದಿಸಿ, ರಾಜ್ಯ ಸರಕಾರ ಅಕ್ರಮ ಎಸಗಿದೆಯೆಂಬ ಅಘಾತಕಾರಿ ಸುದ್ದಿ ಪತ್ರಿಕೆಗಳಲ್ಲಿ ಬಹಿರಂಗ ಗೊಂಡಿದೆ.

ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ

ಸದರಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ವಿಧಾನ ಮಂಡಲದ ಎಚ್ ಕೆ ಪಾಟೀಲರ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ಬಂದಿದೆಯೆಂದು ವರದಿಯಾಗಿದೆ. ಇನ್ನೊಂದೆಡೆ ಸದರಿ ತನಿಖೆಯನ್ನು ನಿರ್ಬಂಧಿಸುವ ಖಂಡನಾರ್ಹ ಪ್ರಯತ್ನವು ನಡೆದಿದೆ ಎನ್ನಲಾಗಿದೆ. ಈ ಭ್ರಷ್ಟಾಚಾರ ಮತ್ತು ಪಿಪಿಇ ಹಾಗೂ ಟೆಸ್ಟಿಂಗ್ ಕಿಟ್ ಗಳ ಕಳಪೆತನದ ಬಹಿರಂಗವು ಸಾರ್ವಜನಿಕರು ಹಾಗೂ ಕೋವಿಡ್ ಹೋರಾಟದಲ್ಲಿ ನೇರವಾಗಿ ತೊಡಗಿರುವ ಆರೋಗ್ಯ ಸಿಬ್ಬಂದಿಗಳನ್ನು ಬೆಚ್ಚಿ ಬೀಳಿಸಿದೆ.

CPI(M) demand Judicial probe PPE, Covid19 test kit corruption

ನೂರಾರು ಕೋಟಿ ರೂಗಳ ಈ ಅವ್ಯವಹಾರವು ಸಾರ್ವಜನಿಕರ ಆರೋಗ್ಯದ ಮತ್ತು ಪ್ರಾಣದ ಜೊತೆಗೆ ಆಟವಾಡಿದ ಗಂಭೀರ ವಿಚಾರವಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ ಮತ್ತು ಅದನ್ನು ಸಕ್ರಮವಾಗಿ ಹಾಗೂ ಜವಾಬ್ದಾರಿಯುತವಾಗಿ, ನಿಭಾಯಿಸುವಲ್ಲಿ ವಿಫಲವಾದ ಸಂಬಂಧಿಸಿದ ಮಂತ್ರಿಗಳ ರಾಜಿನಾಮೆಯನ್ನು ತಕ್ಷಣ ನೈತಿಕ ನೆಲೆಯಲ್ಲಿ ಪಡೆಯಲು ಕ್ರಮವಹಿಸುವಂತೆ ಸಿಪಿಐಎಂ ಒತ್ತಾಯಿಸುತ್ತದೆ.

ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಪಿಪಿಇ ಕಿಟ್ ಗೆ ಮನವಿದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಪಿಪಿಇ ಕಿಟ್ ಗೆ ಮನವಿ

ಈ ಸಂಬಂಧ ವ್ಯವಹರಿಸಿರುವ ಉನ್ನತ ಅಧಿಕಾರಿಗಳನ್ನು ತಕ್ಷಣವೇ ಅಮಾನತಿನಲ್ಲಿಡಬೇಕು ಹಾಗೂ ಸದರಿ ಭ್ರಷ್ಟಾಚಾರದ ಪ್ರಕರಣವನ್ನು ಸ್ವತಂತ್ರ ಉನ್ನತ ನ್ಯಾಯಾಂಗ ತನಿಖೆಗೊಳ ಪಡಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ವಾಸ್ತವವೆನೆಂಬುದನ್ನು ಬಹಿರಂಗ ಪಡಿಸಬೇಕು ಹಾಗೂ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.

English summary
CPI(M) Karnataka demand Judicial probe into alleged PPE, Covid19 test kit purchase corruption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X