ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹಮದ್ ಖಾನ್ ವಿರುದ್ಧ ಸ್ಫೋಟಕ ಹೇಳಿಕೆ ಕೊಟ್ಟ ಪ್ರಮೋದ್ ಮುತಾಲಿಕ್
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಹೇಯ ಕೃತ್ಯ. ಸಚಿವ ಜಮೀರ್ ಅಹ್ಮದ್ ನಾಟಕ ಆಡುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಪ್ರಕರಣದಲ್ಲಿ ಬಿಹಾರಿ ಮುಸ್ಲಿಂ ಬಲಿ ಕೊಟ್ಟಿದ್ದಾರೆ. ಈ ವ್ಯಕ್ತಿಗೂ ಪ್ರಕರಣದಕ್ಕೂ ಸಂಬಂಧವೇ ಇಲ್ಲ. ದೊಡ್ಡ ಗುಂಪು ರಕ್ಷಣೆ ಮಾಡೋ ತಂತ್ರಗಾರಿಕೆ ಇದರ ಹಿಂದೆ ಇದೆ. ನಿನ್ನ ಬಿಡಿಸ್ತೀವಿ, ಕುಡಿದ ಮತ್ತಿನಲ್ಲಿ ಮಾಡಿದ್ದೀನಿ ಎಂದು ಹೇಳಿಕೆ ಕೊಡಿಸಿದ್ದಾರೆ. ಈ ನಾಟಕ ರಚನೆ ಮಾಡಿರೋದು ಜನರಿಗೆ ಗೊತ್ತಾಗಿದೆ. ಜಮೀರ್ ನಿಮ್ಮ ನಾಟಕ ನಿಲ್ಲಿಸಿ. ನಿಜವಾಗಿ ಕೃತ್ಯ ಮಾಡಿದವರ ಎನ್‌ಕೌಂಟರ್ ಮಾಡಬೇಕು. ಇದು ಇಸ್ಲಾಂ ಮಾನಸಿಕತೆ. ಕತ್ತರಿಸೋ ಮಾನಸಿಕತೆ ಇಸ್ಲಾಂ ಮನಸ್ಥಿತಿ. ಹೀಗಾಗಿ ಎನ್‌ಕೌಂಟರ್ ಮಾಡಬೇಕು. ಸಿಸಿಟಿವಿ ಇಲ್ಲ ಅನ್ನೋದು ನಾಟಕ ರಚನೆ ಆಗಿದೆ ಎಂದ ಮುತಾಲಿಕ್ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ನಡೆಯುತ್ತಿದೆ. ರಾಕ್ಷಸ ಕೃತ್ಯಕ್ಕೆ ಇದು ಉದಾಹರಣೆಯಾಗಿದೆ. ಜಮೀರ್ ಅಹ್ಮದ್ ಇದು ನಿಮ್ಮ ಕ್ಷೇತ್ರದಲ್ಲಿ ನಡೆದಿರುವ ಘಟನೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೆ ಶ್ರೀರಾಮ ಸೇನೆಯಿಂದ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ ಎಂದೂ ಅವರ ಭಾನುವಾರ ಎಚ್ಚರಿಕೆ ಕೊಟ್ಟಿದ್ದರು. ಇದೀಗ ಸೋಮವಾರ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ್ದ ಪ್ರಮೋದ್ ಮುತಾಲಿಕ್ ಅವರು ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿ. ಹಸು ಎನ್ನುವುದು ಕೇವಲ ಪ್ರಾಣಿ ಮಾತ್ರವಲ್ಲ. ಹಸುವಿನ ಕೆಚ್ಚಲು ಕೊಯ್ದಿರುವ ನೀಚರನ್ನು ಒದ್ದು ಒಳಗಡೆ ಹಾಕಬೇಕು. ಒಂದೊಮ್ಮೆ ಈ ಕೆಲಸ ಮಾಡದೆ ಇದ್ದರೆ ಶ್ರೀರಾಮ ಸೇನೆಯಿಂದ ಜಮೀರ್ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ. ಇದು ಎಚ್ಚರಿಕೆ ಎಂದು ವಾಗ್ದಾಳಿ ನಡೆಸಿದ್ದರು. ಇನ್ನು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದೆ. ಕಾನೂನು ಇದ್ದರೂ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ಹಿನ್ನೆಲೆಯಲ್ಲಿ ನಿರಂತರ ಗೋಹತ್ಯೆ ಆಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಟಾಚಾರಕ್ಕೆ ಆರೋಪಿಯನ್ನು ಬಂಧಿಸಲಾಗಿದೆ
ಇನ್ನು ದನದ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಪೊಲೀಸರು ಕಾಟಾಚಾರಕ್ಕೆ ಆರೋಪಿಯನ್ನು ಬಂಧಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಆರೋಪಿಸಿದ್ದಾರೆ. ಈ ವಿಚಾರವಾಗಿ ಆರ್ ಅಶೋಕ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿಲ್ಲ. ಅಲ್ಲದೆ ಈ ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಹಿಂದೂಗಳ ಗಣೇಶ ಹಬ್ಬ, ಹನುಮ ಜಯಂತಿ ಈಗ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಿಂದೂಗಳ ಭಾವನಗೆ ಧಕ್ಕೆ ತರುವ ಕೆಲಸಗಳಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ಅತಿಯಾದ ಓಲೈಕೆ ಮಾಡುವುದನ್ನು ಬಿಡುವವರೆಗೆ ಈ ರಾಜ್ಯದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲಸಲು ಸಾಧ್ಯವಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.












Click it and Unblock the Notifications