Covid 19 Rise: ಕರ್ನಾಟಕದಲ್ಲಿ 2,000 ಸಕ್ರಿಯ ಕೇಸ್, ಬೆಂಗಳೂರಿನದ್ದೇ ಬಹುಪಾಲು

ಬೆಂಗಳೂರು, ಏಪ್ರಿಲ್ 17: ಕರ್ನಾಟಕಕ್ಕೆ ಮತ್ತೆ ಕೊರೊನಾ ಗಂಡಾಂತರ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ದಿನೇ ದಿನೆ ವ್ಯಾಪಿಸುತ್ತಿರುವ ಕೊರೊನಾ ಸೋಂಕು ಹಾಗೂ ದಾಖಲಾಗುತ್ತಿರುವ ಪಾಸಿಟಿವ್ ಪ್ರಕರಣಗಳು ಪುಷ್ಟಿ ನೀಡುತ್ತಿದೆ.

ಸದ್ಯ ಕರ್ನಾಟಕದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೊಬ್ಬರಿ 2,000 ದಾಟಿದೆ. ಭಾನುವಾರ ಒಂದೇ ದಿನ ಕರ್ನಾಟಕದಲ್ಲಿ ಹೊಸದಾಗಿ 235 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,076 ಕ್ಕೆ ಏರಿಕೆ ಆಗಿದೆ.

Covid Rise: Over 2000 Active Cases In Karnataka, In Bengaluru Have 1259 Active Cases

ಈ ಹಿಂದಿನಿಂದ ರಾಜ್ಯದಲ್ಲಿ ನಿತ್ಯ ದಾಖಲಾಗುವ ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರು ಸದಾ ಪ್ರಮುಖ ಸ್ಥಾನವನ್ನೇ ಕಾಯ್ದುಕೊಳ್ಳುತ್ತದೆ. ಭಾನುವಾರ ರಾಜ್ಯದ ಒಟ್ಟು ಹೊಸ ಪ್ರಕರಣಗಳ ಪೈಕಿ ಬಹುತೇಕ ಪಾಸಿಟಿವ್ 117 ಪಾಸಿಟಿವ್ ಪ್ರಕರಣ ಬೆಂಗಳೂರಿನಲ್ಲೇ ದಾಖಲಾಗಿವೆ.

ದಿನನಿತ್ಯ ಹೆಚ್ಚು ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದು ಆರೋಗ್ಯ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸುತ್ತಿದೆ. ಎಲ್ಲೆಡೆ ಎಲೆಕ್ಷೆನ್ ಕ್ಯಾಂಪೇನ್ ಗಳು ನಡೆಯುತ್ತಿವೆ. ಜನರು ಗುಂಪುಗೂಡುತ್ತಿದ್ದಾರೆ. ವೈರಸ್ ಇನ್ನಷ್ಟು ವ್ಯಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಲವು ಜಿಲ್ಲೆಗಳಲ್ಲೂ ಹೊಸ ಪ್ರಕರಣಗಳು ಎರಡಂಕಿ ತಲುಪಿವೆ.

Covid Rise: Over 2000 Active Cases In Karnataka, In Bengaluru Have 1259 Active Cases

ಜಿಲ್ಲೆಗಳಲ್ಲೂ ಹೆಚ್ಚಾದ ಕೊರೊನಾ ಕೇಸ್

ರಾಜ್ಯದಲ್ಲಿ ಬೆಂಗಳೂರಲ್ಲಿ ಶೇಕಡಾ 50ರಷ್ಟು ಕೋವಿಡ್ ಪ್ರಕರಣಗಳು ವರದಿಯಾಗುತ್ತವೆ. ಭಾನುವಾರ ಎರಡಂಕಿಯಲ್ಲಿ ದಾಖಲಾದ ಜಿಲ್ಲೆಗಳನ್ನು ನೋಡುವುದಾದರೆ, ಶಿವಮೊಗ್ಗ (27), ವಿಜಯನಗರ (13), ಚಾಮರಾಜನಗರ (12), ಮೈಸೂರು (11) ಮತ್ತು ಬೆಂಗಳೂರು ಗ್ರಾಮಾಂತರ (10) ದಲ್ಲಿ ಕೋವಿಡ್ ಹಾವಳಿ ಹೆಚ್ಚುತ್ತಿರುವುದು ಇದರಿಂದ ತಿಳಿದು ಬರುತ್ತದೆ.

ಕೋವಿಡ್ ವೈರಸ್‌ಗೆ ತುತ್ತಾಗುತ್ತಿರುವವರ ರೋಗಲಕ್ಷಣಗಳ ಕುರಿತು ಬೆಂಗಳೂರಿನ ಅಪೊಲೊ ಆಸ್ಪತ್ರೆಗಳ ಶ್ವಾಸಕೋಶಶಾಸ್ತ್ರದ ಮುಖ್ಯಸ್ಥ ಡಾ ರವೀಂದ್ರ ಮೆಹ್ತಾ ಒಂದಷ್ಟು ಮಾಹಿತಿ ನೀಡಿದ್ದಾರೆ. ಉಸಿರಾಟದ ತೊಂದರೆ ಇರುವವರು ಸೋಂಕಿಗೆ ಒಳಗಾಗಿದ್ದರೆ ಅಂತಹ ರೋಗಿಯು ಉಸಿರಾಟದ ತೊಂದರೆ ಮತ್ತು ಡಿಸ್ಯಾಚುರೇಶನ್‌ನಂತಹ ಹೆಚ್ಚಿನ ರೋಗ ಲಕ್ಷಣಗಳನ್ನು ಹೊಂದಿರುತ್ತಾರೆ. ಅವರು ಅಗತ್ಯವಾಗಿ ಆಸ್ಪತ್ರೆಯಲ್ಲೇ ಅಗತ್ಯ ಚಿಕಿತ್ಸೆ ಪಡೆಯಬೇಕಿರುತ್ತದೆ ಎಂದು ಅವರು ಸಲಹೆ ನೀಡಿದರು.

ಹೆಚ್ಚುತ್ತಿರುವ ಪ್ರಕರಣಗಳ ನಡುವೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಮೂಲಸೌಕರ್ಯ ಮತ್ತು ಇನ್ನಿತರ ಚಿಕಿತ್ಸಾ ವೆಚ್ಚಗಳನ್ನು ಹೆಚ್ಚಿಸುತ್ತಿವೆ. ಕೋವಿಡ್ ಕುರಿತು ಆಸ್ಪತ್ರೆಗಳು ಮತ್ತೆ ಅಗತ್ಯ ಎಚ್ಚರಿಕೆ ವಹಿಸುತ್ತಿವೆ. ಅಲರ್ಟ್ ಮೋಡ್‌ ನಲ್ಲಿವೆ. ವೈದ್ಯರು ಮತ್ತು ರೋಗಿಗಳಿಗೆ, ಸಾರ್ವಜನಿಕರಿಗೆ ಅಗತ್ಯ ಸಲಹೆ ನೀಡುತ್ತಿದ್ದಾರೆ. ರೋಗಿ ಕುಟುಂಬದವರಿಗೆ ಎಚ್ಚರಿಕೆ ಸೂಚಿಸಿದ್ದಾರೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನೆ ಸಂಸ್ಥೆ (BMCRI) ಹಾಗೂ ಸಂಬಂಧಿತ ಆಸ್ಪತ್ರೆಗಳ ನೋಡಲ್ ಅಧಿಕಾರಿ ಡಾ ಸ್ಮಿತಾ ಸೇಗು ಹೇಳಿದರು.

ಮೂರನೇ ಡೋಸ್‌ ಪಡೆಯಲು ಲಸಿಕೆ ಇಲ್ಲ

ಇನ್ನೂ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವ ಸೃಷ್ಟಿಯಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಲ್ಲಿ ಕೋವಿಡ್ ವ್ಯಾಕ್ಸಿನ್ ಇಲ್ಲದಾಗಿದೆ. ಇತ್ತ ಕರ್ನಾಟಕ ರಾಜ್ಯದಲ್ಲಿ ಇನ್ನೂ 3.96 ಕೋಟಿ ಜನರು ಬೂಸ್ಟರ್‌ ಡೋಸ್ ಲಸಿಕೆಯನ್ನೇ (3ನೇ ಡೋಸ್) ಮುನ್ನೆಚ್ಚರಿಕೆಯ ಡೋಸ್ ಲಸಿಕೆಯನ್ನೇ ಪಡೆದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಈದುವರೆಗೆ ಶೇಕಡಾ 23ರಷ್ಟು ಮಂದಿ ಮಾತ್ರವೇ ಮುನ್ನೆಚ್ಚರಿಕೆ ಡೋಸ್ ಪಡೆದುಕೊಂಡಿದ್ದಾರೆ. ಉಳಿದವರು ಮೂರನೇ ಡೋಸ್ ಪಡೆಯುವುದು ಬಾಕಿ ಇದೆ. ಅವರೆಲ್ಲರು ಕೋವಿಡ್ ಹೆಚ್ಚಾಗುತ್ತಿದೆ ಎಂದು ಪಡೆಯಲು ಇಚ್ಛಿಸಿದರೂ ಸದ್ಯಕ್ಕೆ ಲಸಿಕೆ ಲಭ್ಯವಿಲ್ಲ ಎಂದು ತಿಳಿದು ಬಂದಿದೆ. ಹೊಸದಾಗಿ ಲಸಿಕೆ ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಮೊದಲು ಚುನಾವಣೆ ಆಯೋಗದಿಂದ ಒಪ್ಪಿಗೆ ಪಡೆದು ನಂತರ ಕೇಂದ್ರದೊಂದಿಗೆ ಮಾತುಕತೆ ನಡೆಸಿ ನಂತರ ಆರೋಗ್ಯ ಇಲಾಖೆ ಲಸಿಕೆ ಪಡೆಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+