ಡಿ.ಕೆ. ಸಹೋದರರ ಜಾಮೀನು ಅರ್ಜಿ ಭವಿಷ್ಯ 3 ಗಂಟೆಗೆ ನಿರ್ಧಾರ
Recommended Video

ಬೆಂಗಳೂರು, ಮಾರ್ಚ್ 22: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಇಂದು ನ್ಯಾಯಾಲಯದ ಕಟೆಕಟೆಗೆ ಏರಿದ್ದಾರೆ. ಐಟಿ ದಾಳಿಗೆ ಸಂಬಂಧಿಸಿದ ವಿಚಾರಣೆಗೆ ಸಹೋದರರು ಹಾಜರಾಗಿದ್ದಾರೆ.
ಆಗಸ್ಟ್ 2, 2017ರಂದು ಡಿ.ಕೆ. ಶಿವಕುಮಾರ್ ಗೆ ಸೇರಿದ ಮನೆ, ಕಚೇರಿ ಹಾಗೂ ಅವರು ಗುಜರಾತ್ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದ ಬೆಂಗಳೂರಿನ ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ದಾಖಲೆ ಪತ್ರವೊಂದನ್ನು ಡಿ.ಕೆ. ಶಿವಕುಮಾರ್ ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಾಕ್ಷ್ಯ ನಾಶದ ಆರೋಪವನ್ನು ಡಿ.ಕೆ. ಶಿವಕುಮಾರ್ ಹೊತ್ತುಕೊಂಡಿದ್ದು ಈ ಸಂಬಂಧ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ವಿಚಾರಣೆಗೆ ಶಿವಕುಮಾರ್ ಮತ್ತು ಸುರೇಶ್ ಹಾಜರಾಗಿದ್ದು ಅವರ ಪರ ವಕೀಲ ಶೇಷಾಚಲ ವಾದ ಮಂಡಿಸುತ್ತಿದ್ದಾರೆ. ಪ್ರಕರಣದಲ್ಲಿ ಜಾಮೀನು ಕೋರಿ ಸಹೋದರರು ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ಸಂಬಂಧಿಸಿದ ವಿಚಾರಣೆ ನಡೆಸಿರುವ ನ್ಯಾಯಾಲಯ ಆದೇಶವನ್ನು ಇಂದು ಮಧ್ಯಾಹ್ನ ಮೂರು ಗಂಟೆಗೆ ಕಾಯ್ದಿರಿಸಿದೆ.












Click it and Unblock the Notifications