ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಸಾದಿಕ್ ಸೆರೆ
ಬೆಂಗಳೂರು, ಆಗಸ್ಟ್ 17 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದಿಕ್ ಎಂಬುವವರನ್ನು ಎಸ್‌ಐಟಿ ಬಂಧಿಸಿದೆ. ಸಾಧಿಕ್ ಆರೋಪಿಗಳಿಗೆ ಸಿಮ್ ಕಾರ್ಡ್ ಪೂರೈಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್, ಅಶೋಕ್ ಕುಮಾರ್, ಶ್ರೀನಿವಾಸಗೌಡ ಹಾಗೂ ಶಂಕರೇಗೌಡ, ಸೈಯದ್ ರಿಯಾಜ್, ವಿ.ಭಾಸ್ಕರ್ ಅವರನ್ನು ಈಗಾಗಲೇ ಎಸ್‌ಐಟಿ ಬಂಧಿಸಿದೆ. [ಅಶ್ವಿನ್ ರಾವ್ ಜಾಮೀನು ಅರ್ಜಿ ತಿರಸ್ಕಾರ]

ಲೋಕಾಯುಕ್ತದ ಮಾಜಿ ಜಂಟಿ ಆಯುಕ್ತ ಸೈಯದ್ ರಿಯಾಜ್ ಅವರ ಆಪ್ತರಾಗಿರುವ ಸಾದಿಕ್ ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಎಸ್‌ಐಟಿ ಬಂಧಿಸಿದೆ. ನಕಲಿ ವಿಳಾಸದ ಮೂಲಕ ಆರೋಪಿಗಳಿಗೆ ಸಾದಿಕ್ ಸಿಮ್ ಕಾರ್ಡ್ ಪೂರೈಕೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. [ಸಯ್ಯದ್ ರಿಯಾಜ್ ಬಂಧನ]
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ಜಂಟಿ ಆಯುಕ್ತರಾಗಿದ್ದ ಸಯ್ಯದ್ ರಿಯಾಜ್ ಅವರನ್ನು ಜುಲೈ 26ರಂದು ವಿಶೇಷ ತನಿಖಾ ದಳ (ಎಸ್ಐಟಿ) ಬಂಧಿಸಿತ್ತು. ಈಗ ರಿಯಾಜ್ ಮತ್ತು ಇತರ ಆರೋಪಿಗಳಿಗೆ ನಕಲಿ ದಾಖಲೆ ನೀಡಿ ಸಿಮ್ ಕಾರ್ಡ್ ಪೂರೈಕೆ ಮಾಡಿದ ಆರೋಪದ ಮೇಲೆ ಸಾದಿಕ್‌ನನ್ನು ಬಂಧಿಸಲಾಗಿದೆ.












Click it and Unblock the Notifications