ನಿಗಮ ಮಂಡಳಿ ಪಟ್ಟಿ ಸೋರಿಕೆ: ಕೈ ಪಾಳಯದಲ್ಲಿ ಸಿಡಿದೆದ್ದ ಸಚಿವರು-ಇಲ್ಲಿದೆ ಫೈನಲ್‌ ಲಿಸ್ಟ್‌ ?

ಬೆಂಗಳೂರು, ಜನವರಿ 24: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸಿದೆ. ಸರ್ಕಾರ ಬಂದು ಎಂಟು ತಿಂಗಳು ಕಳೆದರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ಹುದ್ದೆಗಳನ್ನು ಕೊಟ್ಟಿಲ್ಲಎಂದು ಕಾಂಗ್ರೆಸ್‌ ಪಾಳಯದಲ್ಲಿ ಅಸಮಾಧಾನ ಭುಗಿಲೆದಿದ್ದು, ಕೈ ಪಾಳಯದಲ್ಲಿ ಸಚಿವರು ಸಿಡಿದೆದ್ದಿದ್ದಾರೆ.

ಹೌದು, ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಗೆ ಬರುವ ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಕ ಮಾಡುವ ಮುನ್ನ ತಮ್ಮ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಸಚಿವರು ಸಿಡಿದೆದ್ದಿದ್ದಾರೆ. ಈಗಾಗಲೇ ನಿಗಮ ಮಂಡಳಿ ನೇಮಕದ ಕುರಿತು ಸರಣೆ ಸಭೆಗಳು ನಡೆದಿದ್ದು, ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಅವರು ಫೈನಲ್‌ ಮಾಡಿ ಕಾಂಗ್ರೆಸ್‌ ಹೈಕಮಾಂಡ್‌ ಗೆ ಕಳುಹಿಸಿದ್ದರು. ಆದರೆ, ನಿಗಮ ಮಂಡಳಿ ವಿಚಾರದಲ್ಲಿ ಪಕ್ಷದ ವರಿಷ್ಠರು ಮತ್ತು ರಾಜ್ಯ ನಾಯಕರ ಮಧ್ಯೆ ಜಟಾಪಟಿ ಹೊಸ ಬಿಕ್ಕಟ್ಟು ಶುರುವಾಗಿದೆ.

Corporation Board Appointment List Leaked Ministers Express Displeasure

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್‌ ವಿವೇಚನೆಗೆ ಬಿಡಬೇಕಾದ ನೇಮಕಾತಿಯ ಹೊಣೆ ಯನ್ನು ಪ್ರಧಾನ ಕಾರ್ಯದರ್ಶಿ ವಹಿಸಿಕೊಂಡಿರುವುದಕ್ಕೆ ತಕರಾರು ತೆಗೆದಿರುವ ಕೆಲವು ಸಚಿವರು, ಕೆ.ಸಿ.ವೇಣುಗೋಪಾಲ್ ಹೆಸರು ಹೇಳದೆಯೇ ಅವರ ವಿರುದ್ಧ ಅತೃಪ್ತಿ ಹೊರಹಾಕಿದ್ದಾರೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಸಹ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನೂ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ ಸೋರಿಕೆಯಾಗಿರುವ ನೇಮಕ ಪಟ್ಟಿಯಲ್ಲಿರುವ ಹೆಸರುಗಳಿಗೆ ಸಂಬಂಧಿಸಿದಂತೆ ಸುಮಾರು 17 ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಹಿ ಹೊಂದಿದ್ದ 37 ಶಾಸಕರು ಮತ್ತು 39 ಕಾರ್ಯಕರ್ತರ ಹೆಸರು ಇದ್ದ ಪಟ್ಟಿ ಇನ್ನೇನು ಬಿಡುಗಡೆ ಆಗಬೇಕು ಎನ್ನುವ ಕ್ಷಣದಲ್ಲಿ ಸೋರಿಕೆಯಾಗಿತ್ತು.

ಈಗಾಗಲೇ ಲೋಕಸಭೆ ಚುನಾವಣೆಗೆ ಕಾರ್ಯ ತಂತ್ರ ರೂಪಿಸಲು ಕಾಂಗ್ರೆಸ್‌ ಪಾಳಯದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಸಮಿತಿ ಸಭೆಯ ಬಳಿಕ ಪಟ್ಟಿ ಪ್ರಕಟಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಪಟ್ಟಿ ಪ್ರಕಟಗೊಳ್ಳುವ ಮೊದಲೇ ಸೋರಿಕೆಯಾಗಿದ್ದು, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಅವರ ಸೂಚನೆಯಂತೆ ತಡೆಹಿಡಿಯಲಾಗಿದೆ ಎಂಬ ಸಂದೇಶ ರವಾನೆಯಾಗಿದೆ.

Corporation Board Appointment List Leaked Ministers Express Displeasure

ಇನ್ನೂ ಹೈಕಮಾಂಡ್‌ ನಾಯಕರು ನಿಗಮ ಮಂಡಳಿ ನೇಮಕ ಪಟ್ಟಿಯನ್ನ ಕಳುಹಿಸಿದ್ದರು. ಆದರೆ, ಈ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪಟ್ಟಿಗೆ ಬಹುತೇಕ ಸಿದ್ದರಾಮಯ್ಯ ಸಂಪುಟದ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಮ್ಮ ಖಾತೆಯ ಅಡಿಯಲ್ಲಿ ಬರುವ ನಿಗಮ ಮಂಡಳಿಯ ಕುರಿತು ನಮ್ಮ ಬಳಿ ಸೌಜನ್ಯಕ್ಕಾದರೂ ಚರ್ಚಿಸಬೇಕಿತ್ತು ಎಂದು ಸಚಿವರುಗಳು ಹೇಳಿದ್ದಾರೆ.

ನಿಗಮ ಮಂಡಳಿಯ ಸಂಭಾವ್ಯ ಪಟ್ಟಿ ಇಲ್ಲಿದೆ?

  • ಮಾಗಡಿ ಬಾಲಕೃಷ್ಣ
  • ಪಿ.ಎಂ ನರೇಂದ್ರ ಸ್ವಾಮಿ
  • ಅನಿಲ್ ಚಿಕ್ಕಮಾದು
  • ಪುಟ್ಟರಂಗ ಶೆಟ್ಟಿ
  • ಕೊತ್ತನೂರು ಮಂಜು
  • ನಂಜೇಗೌಡ
  • ಶರತ್‌ ಬಚ್ಚೇಗೌಢ
  • ಶಿವಲಿಂಗೇಗೌಡ
  • ಟಿ.ಡಿ ರಾಜೇಗೌಡ
  • ರಮೇಶ್ ಬಾಬು ಬಂಡಿಸಿದ್ದೇಗೌಡ
  • ಬಿ.ಕೆ ಸಂಗಮೇಶ್
  • ಬಂಗಾರಪೇಟೆ ನಾರಾಯಣಸ್ವಾಮಿ
  • ಗಣೇಶ್ ಹುಕ್ಕೇರಿ
  • ಮಹಾಂತೇಶ್ ಕೌಜಲಗಿ
  • ಯಶವಂತ್ ರಾಯ್ ಗೌಡ ಪಾಟೀಲ್
  • ಬಿ.ಜಿ ಗೋವಿಂದಪ್ಪ
  • ರಾಘವೇಂದ್ರ ಹಿಟ್ನಾಳ್
  • ರಘುಮೂರ್ತಿ
  • ಭೀಮಣ್ಣ ನಾಯ್ಕ್
  • ಸತೀಶ್ ಸೈಲ್
  • ಪ್ರಸಾದ್ ಅಬ್ಬಯ್ಯ
  • ಜಿ.ಟಿ ಪಾಟೀಲ್
  • ಡಿ.ಆರ್ ಪಾಟೀಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+