ಕೊರೊನಾ ಎಫೆಕ್ಟ್; ರಾಜ್ಯದಲ್ಲಿ ಬಾರ್ ಬಂದ್ ಮಾಡಲು ಸಿಎಂ ಆದೇಶ!
ಬೆಂಗಳೂರು ಮಾರ್ಚ್ 20: ಕರ್ನಾಟಕದಲ್ಲೂ ತೀವ್ರ ಆತಂಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಹತ್ತಿಕ್ಕಲು ರಾಜ್ಯ ಸರ್ಕಾರ ಪರದಾಡುತ್ತಿದೆ. ಈಗಾಗಲೇ ಪಬ್ ಮಾಲ್ ಚಿತ್ರಮಂದಿರಗಳನ್ನು ಮುಚ್ಚಲು ಆದೇಶ ಮಾಡಿದ್ದ ಸರ್ಕಾರ ಈಗ ಕುಡುಕರಿಗೆ ಬಹುದೊಡ್ಡ ಶಾಕ್ ಕೊಟ್ಟಿದೆ.
ಕೊರೊನಾ ವೈರಸ್ ಸೋಂಕು ಹತ್ತಿಕ್ಕಲು ಮಾರ್ಚ್ 31 ರವೆರೆಗೆ ರಾಜ್ಯದಲ್ಲಿ ಎಲ್ಲ ಬಾರ್ ಮತ್ತು ರೆಸ್ಟೊರೆಂಟ್‌ಗಳನ್ನು ಮುಚ್ಚಲು ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ ಆದೇಶ ಮಾಡಿದ್ದಾರೆ.
ಇದರಿಂದ ಮದ್ಯಪ್ರಿಯರಿಗೆ ಆಘಾತವುಂಟಾಗಿದ್ದು, ಕೊರೊನಾ ವೈರಸ್ ಬಗ್ಗೆ ಕುಡುಕರು ಹಿಡಿಶಾಪ ಹಾಕುತ್ತಿದ್ದಾರೆ... ಮುಂದೆ ಓದಿ

ಎಂ ಆರ್ ಪಿ ವೈನ್ ಸ್ಟೋರ್ ಇರುತ್ತೆ
ಮಾರ್ಚ್ 31ರ ವರೆಗೆ ಬಾರ್, ಪಬ್‌ಗಳು ಇರುವುದಿಲ್ಲವಾದ್ರೂ ಎಂ ಆರ್ ಪಿ ವೈನ್ ಸ್ಟೋರ್‌ಗಳನ್ನು ತೆರೆಯುವ ವಿಚಾರದಲ್ಲಿ ಆದೇಶದಲ್ಲಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಯ ಜನತಾ ಕರ್ಫ್ಯೂ ಆಚರಿಸಲು ಕರೆ ನೀಡಿದ್ದಾರೆ. ಈ ಒಂದೇ ದಿನ ಮಾತ್ರ ವೈನ್ ಸ್ಟೋರ್‌ಗಳೂ ಬಂದ್ ಆಗುವ ಸಾಧ್ಯತೆ ಇದೆ.

ರಾಜ್ಯದ ತುಂಬ ನಿಯಮ ಅನ್ವಯ
ಇದೇ ಮಾರ್ಚ್ 21 ರಿಂದ ಮಾರ್ಚ್ 31ರವರೆಗೆ ಇಡೀ ರಾಜ್ಯದಲ್ಲಿ ಯಾವುದೇ ಬಾರ್ ಹಾಗೂ ಪಬ್‌ಗಳನ್ನು ತೆರೆಯಬಾರದು ಎಂದು ರಾಜ್ಯ ಅಬಕಾರಿ ಆದೇಶ ಜಾರಿ ಮಾಡಿದೆ. ಈ ನಿಯಮ ರಾಜ್ಯದ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೂ ಅನ್ವಯ ಆಗಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಪಬ್ ಮಾಲ್ ಬಂದ ಮಾಡಿದೆ
ಕೊರೊನಾ ಎಫೆಕ್ಟ್ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈವರೆಗೂ ಮಾಲ್, ಥಿಯೇಟರ್‌ಗಳನ್ನು ಬಂದ್ ಮಾಡಿಸಿದ್ದ ರಾಜ್ಯ ಸರ್ಕಾರ ಇದೀಗ ಕರ್ನಾಟಕ ರಾಜ್ಯಾದ್ಯಂತ ಬಾರ್ ಹಾಗೂ ಪಬ್‌ಗಳನ್ನೂ ಬಂದ್ ಮಾಡುವಂತೆ ಆದೇಶಿಸಿದೆ.

ಪಾರ್ಸಲ್ ಇರುತ್ತೆ
ರೆಸ್ಟೋರೆಂಟ್, ಕೆಫೆಗಳೂ ಕೂಡಾ ಆಹಾರ ವಿತರಣೆಯನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದ್ರೆ, ಮನೆಗಳಿಗೆ ಪಾರ್ಸೆಲ್ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಜಾರಿಯಲ್ಲಿಡಲು ಸರ್ಕಾರ ನಿರ್ದೇಶನ ನೀಡಿದೆ.












Click it and Unblock the Notifications