ಬೆಂಗಳೂರು, ಮಾರ್ಚ್ 23: ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೊನಾವೈರಸ್ ಸೋಂಕು ಕರ್ನಾಟಕದಲ್ಲೂ ತನ್ನ ಪ್ರಭಾವವನ್ನು ಬೀರಿದೆ. ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರು ಮುಂದಾಗಿದ್ದಾರೆ. ಸಂಪೂರ್ಣ ಲಾಕ್ ಡೌನ್, ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಪ್ರತಿದಿನದ ಸರ್ಕಾರಿ ಆದೇಶ, ಆರೋಗ್ಯ ಇಲಾಖೆ ಮಾರ್ಗಸೂಚಿ, ಅಗತ್ಯ ಸಲಹೆಗಳ ಕುರಿತಂತೆ ಪ್ರತಿ ಕ್ಷಣದ ಲೈವ್ ಅಪ್ಡೇಟ್ ನಿಮಗಿಲ್ಲಿ ಸಿಗಲಿದೆ...
ಕೋವಿಡ್19 ಬಗ್ಗೆ ತೆಗೆದುಕೊಳ್ಳಬೇಕಾದ ತುರ್ತುಕ್ರಮಗಳ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರೊಂದಿಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿದರು. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್ ನಲ್ಲಿ ಇಡುವುದೇ ದೊಡ್ಡ ಸವಾಲಾಗಿದೆ.ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
30 ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುವುದು. ಖಾಸಗಿ ಆಸ್ಪತ್ರೆಯವರು ಶೇ. 50 ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
Newest FirstOldest First
11:49 PM, 26 Mar
A rumour has been spread on TV channels & social media that my daughter Ameera Rao,who returned from London on 16th March has tested positive for #COVID.
This is false & even if it was true there was no shame in admitting it.
Media should be responsible & not misinform.
— ದಿನೇಶ್ ಗುಂಡೂರಾವ್/ Dinesh Gundu Rao (@dineshgrao) March 26, 2020
ಪುತ್ರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂದು ಸ್ಪಷ್ಟನೆ ನೀಡಿದ ಮಾಜಿ ಸಚಿವ ದಿನೇಶ್ ಗುಂಡೂರಾವ್
ಕಲಬುರಗಿ ಜಿಲ್ಲೆಯಿಂದ ಇದುವರೆಗೆ ಕೋವಿಡ್-19 ಪರೀಕ್ಷೆಗೆ ಮೃತ ವಯೋವೃದ್ಧ ವ್ಯಕ್ತಿ ಸೇರಿದಂತೆ ಒಟ್ಟಾರೆ 64 ಸ್ಯಾಂಪಲ್ ಪರೀಕ್ಷೆಗೆ ಕಳಿಸಲಾಗಿತ್ತು. ಮಾರ್ಚ್ 26ರ ಸಾಯಂಕಾಲ 6 ಗಂಟೆ ವರೆಗೆ 35 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.
10:59 PM, 26 Mar
ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ 31 ಫೀವರ್ ಕ್ಲಿನಿಕ್ ಶುಕ್ರವಾರದಿಂದ ಕಾರ್ಯಾರಂಭ ಮಾಡಲಿವೆ. ವಿದೇಶದಿಂದ ಬೆಂಗಳೂರಿಗೆ ಆಗಮಿಸಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರು ಈ ಚಿಕಿತ್ಸಾಲಯಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು.
10:23 PM, 26 Mar
ಪಾಲಿಕೆ ಕಚೇರಿಯಲ್ಲಿ ತರಕಾರಿ, ಹಣ್ಣು ಮತ್ತು ಅಕ್ಕಿ ವ್ಯಾಪಾರಿಗಳ ಸಂಘದ ಸಭೆ ನಡೆಸಲಾಯಿತು. ಲಾಕ್ ಡೌನ್ ಇರುವ ಸಂದರ್ಭ ಸಾರ್ವತ್ರಿಕವಾಗಿ ವಹಿಸ ಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ವಂದಿತಾ ಶರ್ಮ, ರಾಜೇಂದ್ರ ಕಟಾರಿಯಾ, ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಜರಿದ್ದರು. pic.twitter.com/HerlJcThBs
ಶಿವಮೊಗ್ಗ ಮಹಾನಗರ ಪಾಲಿಕೆ ಶುಕ್ರವಾರದಿಂದ ಮನೆ ಬಾಗಿಲಿಗೆ ಆಹಾರ ಪೂರೈಕೆ ಮಾಡಲಿದೆ. ಗ್ರಾಹಕರು ಆರ್ಡರ್ ಮಾಡಿದ ಒಂದು ಗಂಟೆಯ ವೊಳಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮನೆಗೆ ಬರಲಿದೆ.
9:31 PM, 26 Mar
P-36 travelled in S3 coach, Lower Berth in Mangalore express from Mumbai which departed on 17.03.2020 and arrived in Batkal on 18.03.2020. Any passengers who travelled in the same coach may please contact the helpline numbers 104, 080-46848600 or 080-66692000.@CMofKarnatakapic.twitter.com/kvQkhMQ0Cg
ರೈಲಿನಲ್ಲಿ ಪ್ರಯಾಣ ಮಾಡಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ
9:14 PM, 26 Mar
ಕೊರೊನಾ ವಿರುದ್ಧ ಹೋರಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಹಾಗೂ ಪದಾಧಿಕಾರಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಲಕ್ಷ ರೂ. ದೇಣಿಗೆ ನೀಡಿದರು.
9:03 PM, 26 Mar
ಬಸ್ ಸಂಚಾರದ ಬಗ್ಗೆ ಬಿಎಂಟಿಸಿ ಸ್ಪಷ್ಟನೆ
8:54 PM, 26 Mar
PG owners are directed not to force students to vacate. Instead they should support the students from every part of India in this time of difficulty. Let’s all face it together. We shall overcome!!@CPBlr https://t.co/GPyH2GKCka
ಪಿಜಿಯನ್ನು ಖಾಲಿ ಮಾಡಿಸದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಸೂಚನೆ
8:41 PM, 26 Mar
ಮೈಸೂರು ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಗೂಲಿ ಕಾರ್ಮಿಕರಗೆ ಮತ್ತು ಜನರಿಗೆ ಫುಡ್ ಪ್ಯಾಕೇಟ್ ವಿತರಣೆ ಮಾಡಿದರು. ಭಾರತ ಲಾಕ್ ಡೌನ್ ಹಿನ್ನಲೆಯಲ್ಲಿ ಹೋಟೆಲ್ಗಳು ಮುಚ್ಚಿವೆ.
8:33 PM, 26 Mar
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶುಕ್ರವಾರ ತುರ್ತು ಸಚಿವ ಸಂಪುಟ ಕರೆದಿದ್ದಾರೆ. ಆಯಾ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮ ಪಾಲನೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡುವ ನಿರೀಕ್ಷೆ ಇದೆ.
8:21 PM, 26 Mar
ರಾಜ್ಯದಲ್ಲಿ ಇದುವರೆಗೆ 55 ಜನ #ಕೊರೊನ ಸೋಂಕು ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರನ್ನು ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಹೊಸ 4 ಪ್ರಕರಣಗಳ ಮಾಹಿತಿ, ಜಿಲ್ಲಾವಾರು ಸೋಂಕಿತರ ಪಟ್ಟಿ, ಟೆಲಿ ಮೆಡಿಸಿನ್ ಮಾಹಿತಿ, ವೈದ್ಯಕೀಯ ಸಿಬ್ಬಂದಿಗಳನ್ನು ಮನೆ/ಪಿಜಿ/ಹಾಸ್ಟೆಲ್ ಗಳಿಂದ ತೆರವುಗೊಳಿಸದಂತೆ ಆದೇಶ. 1/2 pic.twitter.com/8xxQAWndXC
ಲಾಕ್ ಡೌನ್ ಅವಧಿಯಲ್ಲಿ ಜೀವನಾವಶ್ಯಕ ಸರಕುಗಳ ಸಾಗಣೆ ಮಾಡುವ ಲಾರಿಗಳ ಸಂಚಾರಕ್ಕೆ ನಿರ್ಬಂಧವಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ. ಖಾಲಿ ಮತ್ತು ಸರಕು ತುಂಬಿದ ಲಾರಿಗಳು ಅಂತರ್ ರಾಜ್ಯ, ಅಂತರ್ ಜಿಲ್ಲೆಯ ಸಂಚಾರಕ್ಕೆ ಅನುಮತಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಪಾಸುಗಳ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
7:42 PM, 26 Mar
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ ಮುಸ್ಲಿಂ ಸಮಾಜದ ಹಿರಿಯರೊಂದಿಗೆ ಸಭೆ ನಡೆಸಿದರು. ರಾಜ್ಯದ ಯಾವುದೇ ಮಸೀದಿಗಳಲ್ಲಿ ಪ್ರಾರ್ಥನೆ ಮಾಡದ ಹಾಗೆ ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಗುಂಪು ಸೇರದ ಹಾಗೆ ಸೂಚಿಸಿದರು. ಇತ್ತಿಚೆಗೆ ರಾಜ್ಯದಲ್ಲಿ ಯಾರಾದರೂ ಹಜ್ ಪ್ರವಾಸ ಮುಗಿಸಿ ಬಂದಿದ್ದರೆ ವಿವರ ನೀಡುವಂತೆ ಕೇಳಿದರು.
7:20 PM, 26 Mar
ಕೊರೊನಾ ವೈರಸ್ಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಯಲ್ಲಿ ಪರೀಕ್ಷೆ ಮಾಡಲು ಸಂಗ್ರಹಿಸಿದ ಒಟ್ಟು 3 ವ್ಯಕ್ತಿಗಳ ಮಾದರಿಗಳಲ್ಲಿ 2 ನೆಗೆಟಿವ್ ಫಲಿತಾಂಶ ಬಂದಿವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ
7:16 PM, 26 Mar
ಮುಖ್ಯಮಂತ್ರಿಗಳ ಮನವಿ ಹಿನ್ನಲೆಯಲ್ಲಿ ಕೊರೊನಾ ನಿರ್ಮೂಲನೆಗೆ ಹುಬ್ಬಳ್ಳಿ ವಕೀಲರೊಬ್ಬರು 10 ಸಾವಿರ ರೂ.ಗಳ ಆರ್ಥಿಕ ನೆರವು ನೀಡಿದ್ದಾರೆ. ಹುಬ್ಬಳ್ಳಿಯ ಮಯೂರಿ ಗಾರ್ಡನ್ ನಿವಾಸಿಯಾದ ಪ್ರದೀಪ ಜೋಷಿ ಬೆಂಗಳೂರಿನ ಹೈಕೋರ್ಟ್ನಲ್ಲಿ ವಕೀಲರು.
7:01 PM, 26 Mar
ಮೈಸೂರಿನಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತ 35 ವರ್ಷದ ಮೈಸೂರಿನ ವ್ಯಕ್ತಿ. ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿಯಲ್ಲಿ ಕ್ವಾಲಿಟಿ ಅಶುರೆನ್ಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂಬುದು ತಿಳಿದು ಬಂದಿದೆ. ಸೋಂಕಿತ ವ್ಯಕ್ತಿಯನ್ನು ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಜನರಿಗೆ ಪೊಲೀಸರು ಲಾಠಿ ಬೀಸಿದರು.
6:21 PM, 26 Mar
ಕರ್ನಾಟಕದ ಕಲಬುರಗಿಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿದವರಿಗೆ ರಸ್ತೆಯ ಕಸ ಗುಡಿಸುವ ಕೆಲಸವನ್ನು ನೀಡಲಾಯಿತು.
6:09 PM, 26 Mar
ಕೊರೊನಾ ಹರಡದಂತೆ ತಡೆಯಲು ಕೊಡಗಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂಟೈನ್ ಮೆಂಟ್ ಮತ್ತು ಬಫರ್ ಜೋನ್ ಏರಿಯಾಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
6:00 PM, 26 Mar
ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಗಳಲ್ಲಿ ಓಡಾಡಿದರೆ ಐಪಿಸಿ ಪ್ರಕರಣ ದಾಖಲು ಮಾಡಲಾಗುತ್ತದೆ. ಹೊಮ್ ಕ್ವಾರಂಟಿನಲ್ಲಿರುವರು ಸಾರ್ವಜನಿಕವಾಗಿ ಹೊರ ಬಂದರೆ ಎಫ್ಐಆರ್ ದಾಖಲು ಮತ್ತು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
5:54 PM, 26 Mar
ಕೊರೊನಾ ಹರಡುವಿಕೆ ತಡೆಗಟ್ಟಲು ಇರುವ ಅತ್ಯಂತ ಮುಖ್ಯ ಅಸ್ತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ.
5:37 PM, 26 Mar
ಕೊರೊನಾ ಹರಡದಂತೆ ತಡೆಯಲು ಜೆಸ್ಕಾಂ, ಕೊಪ್ಪಳ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಗ್ರಾಹಕರು ವಿದ್ಯುತ್ ಬಿಲ್ಲುಗಳನ್ನು ಜೆಸ್ಕಾಂ ಕೌಂಟರ್ಗಳಿಗೆ ಹೋಗಿ ಪಾವತಿಸುವ ಬದಲು ಆನ್ಲೈನ್ ಸೇವೆಗಳಾದ ನೆಟ್ ಬ್ಯಾಂಕಿಂಗ್, ಪೇಟಿಎಂ, ಫೋನ್ಪೇ, ಗೂಗಲ್ ಪೇ, ಭೀಮ್ ಆ್ಯಪ್ ಇತ್ಯಾದಿಗಳ ಮೂಲಕ ಪಾವತಿಸಬೇಕು ಎಂದು ಮನವಿ ಮಾಡಲಾಗಿದೆ.
5:20 PM, 26 Mar
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ತುರ್ತು ವಿಡಿಯೋ ಕಾನ್ಫರೆನ್ಸ್ ನಡೆಸಿ ಕೊರೊನಾ ನಿರ್ವಹಣೆಯ ಬಗ್ಗೆ ಪರಿಶೀಲನೆ ನಡೆಸಿದರು.
5:08 PM, 26 Mar
ಆಹಾರ, ನಾಗರಿಕ ಸರಬರಾಜು ಇಲಾಖೆಯ ಎಲ್ಲ ನ್ಯಾಯಬೆಲೆ ಅಂಗಡಿಗಳು ಲಾಕ್ಡೌನ್ ಅವಧಿಯಲ್ಲಿ ಎಂದಿನಂತೆ ಅರ್ಹ ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥಗಳು ದೊರೆಯಲಿವೆ. ಆದ್ದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಬಾರದು ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
4:57 PM, 26 Mar
ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ 'ಬೇರೆ ಊರಿನವರಿಗೆ ಪ್ರವೇಶ ನಿಷೇಧಿಸಲಾಗಿದೆ' ಎಂದು ಬೋರ್ಡ್ ಹಾಕಲಾಗಿದೆ.
4:49 PM, 26 Mar
ಹುಬ್ಬಳ್ಳಿಯ ಇಂಡಿ ಪಂಪ್ ಸರ್ಕಲ್ ಬಳಿಯ ಶ್ರೀ ಬಸವೇಶ್ವರ ಮೆಡಿಕಲ್ ಶಾಪ್ ಬಳಿ ಜನರು ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ಔಷಧಗಳನ್ನು ಖರೀದಿಸುತ್ತಿದ್ದಾರೆ.
4:39 PM, 26 Mar
ಬಿಬಿಎಂಪಿ ಜೀವನೋಪಾಯಕ್ಕಾಗಿ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಆಹಾರದ ಪೊಟ್ಟಣಗಳನ್ನು ವಿತರಿಸುವ ವ್ಯವಸ್ಥೆ ಮಾಡಿದೆ.
4:24 PM, 26 Mar
ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕೃಷಿ ಸಚಿವರೂ ಹಾಗೂ ಹಿರೇಕೆರೂರು ಶಾಸಕರಾಗಿರುವ ಬಿ. ಸಿ. ಪಾಟೀಲ್ ಭೇಟಿ ನೀಡಿದರು. ವೈದ್ಯರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದರು.
READ MORE
8:33 PM, 23 Mar
ನಗರ ಪ್ರದೇಶದಲ್ಲಿ ವಾಸವಾಗಿರುವ ಜನರಿಗೆ ನಮ್ಮ ಕಳಕಳಿಯ ಮನವಿ- ದಯವಿಟ್ಟು ಇನ್ನೂ ಕೋವಿಡ್ ಸೋಂಕು ಮುಕ್ತವಾಗಿರುವ ಹಳ್ಳಿಗಳಿಗೆ ತೆರಳಬೇಡಿ. ಕೋವಿಡ್ 19 ಹರಡುವುದನ್ನು ತಡೆಯಲು ಸರ್ಕಾರದೊಂದಿಗೆ ಸಹಕರಿಸಿ, ಮನೆಯಿಂದ ಹೊರ ಬರಬೇಡಿ.
8:33 PM, 23 Mar
ರಾಜ್ಯಾದ್ಯಂತ ಮಾರ್ಚ್ 31ರ ವರೆಗೆ ಮೊನ್ನೆ ತಿಳಿಸಿದ 9 ಜಿಲ್ಲೆಗಳಲ್ಲಿ ಸೆಕ್ಷನ್ 144ನ್ನು ಮುಂದುವರೆಸಲಾಗುವುದು. ಎಲ್ಲ ಅತ್ಯವಶ್ಯಕ ಸೇವೆಗಳನ್ನು ಹೊರತು ಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
8:33 PM, 23 Mar
ಜೀವನೋಪಾಯಕ್ಕೆ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಒದಗಿಸಲಾಗುವುದು.
6:28 AM, 24 Mar
ಕರ್ನಾಟಕದಲ್ಲಿ ಲಾಕ್ಡೌನ್ ಆಗಿದ್ದರೂ ಕೂಡ ಜನರು ರಸ್ತೆಗಿಳಿದಿದ್ದಾರೆ. ಯುಗಾದಿ ಆಸುಪಾಸಿರುವುದರಿಂದ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಬೆಂಗಳೂರು ಹೊರ ವಲಯ ನೆಲಮಂಗಲದ ಬಳಿ ಸೋಮವಾರ ರಾತ್ರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
6:34 AM, 24 Mar
ಅಡ್ಡಾದಿಡ್ಡಿ ಓಡಾಡಿದರೆ ಕೇಸ್ ಬೀಳುತ್ತೆ ಹೊರಗಡೆ ರಸ್ತೆಯಲ್ಲೆಲ್ಲಾ ನಿಂತು ಸೆಲ್ಫಿ ತೆಗೆದುಕೊಳ್ಳುವಂತಿಲ್ಲ.
6:38 AM, 24 Mar
ದೇಶದಲ್ಲಿ ಕೊರೊನಾ ವೈರಸ್ಗೆ ಲಾಕ್ಡೌನ್ ಆದ 19 ನೇ ರಾಜ್ಯ ಕರ್ನಾಟಕವಾಗಿದೆ. ಮಾರ್ಚ್ 31ರವರೆಗೆ ಕೊರೊನಾ ಕರ್ಫ್ಯೂ ಮುಂದುವರೆಯಲಿದೆ.
6:42 AM, 24 Mar
ಕೆಎಸ್ಆರ್ಟಿಸಿ, ಬಿಎಂಟಿಸಿ, ಓಲಾ, ಊಬರ್ ಸೇರಿದಂತೆ ಯಾವುದೇ ಸೇವೆಗಳು ಮಾರ್ಚ್ 31ರವರೆಗೆ ಲಭ್ಯವಿರುವುದಿಲ್ಲ. ಎಂಟು ದಿನಗಳ ಕಾಲ ಮನೆಯಲ್ಲೇ ಇರಬೇಕು ಎಂದು ಸೂಚಿಸಲಾಗಿದೆ.
6:48 AM, 24 Mar
ಸೋಮವಾರ ರಾತ್ರಿ 11 ಗಂಟೆಯವರೆಗೂ ದಿನಸಿ ಖರೀದಿಗೆ ಜನರು ಮುಗಿಬಿದ್ದಿದ್ದರು. ಕರ್ನಾಟಕ ಲಾಕ್ಡೌನ್ ಆದರೆ ಏನೂ ಸಿಗುವುದಿಲ್ಲ ಎನ್ನುವ ಭಯಕ್ಕೆ ಜನರು ದಿನಸಿ ಖರೀದಿಗೆ ಮುಂದಾಗಿದ್ದರು.
6:53 AM, 24 Mar
ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ #ಕೋವಿಡ್_19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ 24 /03 /2020 ರಿಂದ 31 /03/2020 ರವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ .
ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.
ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೊವಿಡ್ 19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ ಹೊರಡಿಸಲಾಗಿದ್ದ ಲಾಕ್ಡೌನ್ ಆದೇಶವನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
6:57 AM, 24 Mar
ಅಂಗಡಿಗಳು, ಮಾರ್ಕೆಟ್, ಹೋಟೆಲ್ , ರೆಸ್ಟೋರೆಂಟ್ , ದೇವಸ್ಥಾನಗಳು ಕೂಡ ಬಂದ್ ಆಗಿರಲಿದ್ದು, ಧಾರ್ಮಿಕ ಆಚರಣೆಗೆ ಅವಕಾಶ ಇರುವುದಿಲ್ಲ. ತೀರಾ ಅಗತ್ಯವಿರುವ ತರಕಾರಿ, ದಿನಸಿ, ಹಾಲು ಮಾತ್ರ ಲಭ್ಯವಿರಲಿದೆ.
7:00 AM, 24 Mar
ಸಂಪೂರ್ಣ ಕರ್ನಾಟಕಕ್ಕೆ ಲಾಕ್ಡೌನ್ ವಿಸ್ತರಣೆ
ಸಂಪೂರ್ಣ ಕರ್ನಾಟಕಕ್ಕೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿದೆ.ಯಾರು ಕೂಡ ಗುಂಪು ಸೇರುವಂತಿಲ್ಲ, ನಿಂತು ಮಾತನಾಡುವಂತಿಲ್ಲ.
7:06 AM, 24 Mar
ಕೆಆರ್ ಮಾರ್ಕೆಟ್, ಮಲ್ಲೇಶ್ವರ, ಯಶವಂತಪುರ ಮಾರ್ಕೆಟ್ನಲ್ಲಿ ನೂರಾರು ಜನ
ಕರ್ನಾಟದಲ್ಲಿ ಲಾಕ್ಡೌನ್ ಕೆಆರ್ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ, ಜನರು ತುಂಬಿ ತುಳುಕುತ್ತಿದ್ದಾರೆ. ಮೆಜೆಸ್ಟಿಕ್, ಮಾರ್ಕೆಟ್, ಯಶವಂತಪುರದಲ್ಲಿ ಜನರು ಕಾಣಿಸಿಕೊಳ್ಳುತ್ತಿದ್ದಾರೆ. ವಾಹನಗಳು ಎಂದಿನಂತೆ ಸಂಚರಿಸುತ್ತಿವೆ.
7:12 AM, 24 Mar
ಕಲಬುರಗಿಯ ಕಣಿ ಮಾರುಕಟ್ಟೆಯಲ್ಲಿ ಖರೀದಿ ಜೋರು
ಕಲಬುರಗಿ ನಗರದ ಕಣಿ ಮಾರುಕಟ್ಟೆಯಲ್ಲಿ ಖರೀದಿ ಜೋರು, ಯಾವುದೇ ಮುಂಜಾಗ್ರತೆ ಇಲ್ಲದೆ ವಹಿವಾಟು ನಡೆಸಲಾಗುತ್ತಿದೆ. ಕೊರೊನಾದಿಂದ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದರೂ ಜನರು ಭಯಭೀತರಾದಂತೆ ಕಾಣಿಸುತ್ತಿಲ್ಲ.
7:17 AM, 24 Mar
ದೇವಸ್ಥಾನದ ಹೊರಭಾಗದಲ್ಲಿ ನಿಂತು ಪೂಜೆ
ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಬೀಗ ಹಾಕಿದ್ದರೂ, ದಂಪತಿ ದೇವಸ್ಥಾನದ ಹೊರಗಿನಿಂದಲೇ ಪೂಜೆ ಮಾಡುತ್ತಿದ್ದಾರೆ.
7:23 AM, 24 Mar
ಒಂದೇ ಕಡೆ ಐದು ಮಂದಿ ಕಾಣಿಸಿಕೊಳ್ಳುವಂತಿಲ್ಲ
ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ 144 ಸೆಕ್ಷನ್ ಜಾರಿಮಾಡಲಾಗಿದ್ದು, ಒಂದೇ ಕಡೆ ಐದು ಮಂದಿ ಕಾಣಿಸಿಕೊಳ್ಳುವಂತಿಲ್ಲ, ಹಾಗೊಮ್ಮೆ ಕಾಣಿಸಿಕೊಂಡಿದ್ದೇ ಆದಲ್ಲಿ ಅವರ ಮೇಲೂ ಪ್ರಕರಣ ದಾಖಲಾಗುವುದು.
7:30 AM, 24 Mar
ಯಾವ್ಯಾವ ಸೇವೆಗಳು ಲಭ್ಯ
ಪೆಟ್ರೋಲ್ಬಂಕ್, ಎಲ್ಪಿಜಿ ಗ್ಯಾಸ್, ಆಸ್ಪತ್ರೆ, ಎಟಿಎಂ, ಇಂಟರ್ನೆಟ್ ಸೇವೆ ಲಭ್ಯವಿರಲಿದೆ. ಮಾಂಸ,ಮೀನು, ತರಕಾರಿ ಸೇರಿದಂತೆ ಚಿಲ್ಲರೆ ಮಾರುಕಟ್ಟೆಗಳು ತೆರೆದಿರಲಿವೆ.
7:39 AM, 24 Mar
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಜನಜಂಗುಳಿ
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಜನಜಂಗುಳಿ ಆರಂಭವಾಗಿದೆ. ಖರೀದಿಯಿಲ್ಲದೆ ಹೂವನ್ನು ರೈತರು ರಸ್ತೆಗೆ ಚೆಲ್ಲಿದ್ದಾರೆ. ವ್ಯಾಪಾರಿಗಳಿಂದ ಎಂದಿನಂತೆ ವ್ಯಾಪಾರ- ವಹಿವಾಟು ನಡೆಯುತ್ತಿದೆ.
7:45 AM, 24 Mar
ಮಂಗಳೂರಲ್ಲಿ ಕಲ್ಪನಾ ಬೇಕರಿ ಅರ್ಧ ಬಾಗಿಲು ತೆರೆದು ತಿಂಡಿ-ತಿನಿಸುಗಳನ್ನು ಜನರಿಗೆ ವಿತರಣೆ ಮಾಡುತ್ತಿದೆ. ಬೇಕರಿಯ ತಿಂಡಿಯನ್ನು ಪಡೆಯಲು ಜನರು ಮುಗಿಬಿದ್ದಿದ್ದಾರೆ. ಇನ್ನೊಂದೆಡೆ ಮಾಸ್ಕ್ ಧರಿಸಿದೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ಜನರು ಜಮಾಯಿಸಿದ್ದಾರೆ.
7:50 AM, 24 Mar
ಜನರು ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ, ಅಗತ್ಯ ಸೇವೆಗಳು ಲಭ್ಯವಿರಲಿವೆ. ಆಸ್ಪತ್ರೆಗಳು ತೆರೆದಿರಲಿವೆ. ಕೊರೊನಾ ಸೋಂಕಿತರಿಗೆ ದಿನಕ್ಕೆ ಎರಡು ಬಾರಿ ತಪಾಸಣೆ ಮಾಡಲಾಗುತ್ತದೆ.
7:55 AM, 24 Mar
ಕ್ವಾರಂಟೈನ್ ಸ್ಟ್ಯಾಂಪ್
5000Home quarantine stamping was carried to ensure they remain home in public interest.I have received calls some of those stamped are moving in BMTC buses and sitting in restaurants. Please call 100,these people will be picked up, arrested and sent to Government Quarantine.
ವಿದೇಶದಿಂದ ಬಂದಿರುವ ಒಟ್ಟು 5 ಸಾವಿರ ಮಂದಿಗೆ ಕೈಯಲ್ಲಿ ಕ್ವಾರಂಟೈನ್ ಸ್ಟ್ಯಾಂಪ್ ಹಾಕಿ ಗೃಹಬಂಧನದಲ್ಲಿರಿಸಲಾಗಿದೆ ಎಂದು ಹೇಳಲಾಗಿತ್ತು ಆದರೆ ಸ್ಟ್ಯಾಂಪ್ ಹಾಕಿದ್ದ ಕೆಲವರು ಬಿಎಂಟಿಸಿಯಲ್ಲಿ ಸಂಚರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ ಅವರು ಕಂಡುಬಂದಲ್ಲಿ 100ಕ್ಕೆ ಕರೆ ಮಾಡಿ ಎಂದು ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
7:59 AM, 24 Mar
ಕರ್ನಾಟಕದಲ್ಲೆಡೆ ಸಂಪೂರ್ಣ ಲಾಕ್ ಡೌನ್ ಮೊದಲ ದಿನವೇ ವಿಫಲ
ಜನರಿಗೆ ಯಾಕೆ ಅರ್ಥ ಆಗ್ತಿಲ್ಲಾ. ನಾವೆಲ್ಲ ಬದುಕಿದ್ರೆ ಯುಗಾದಿ. ಇಲ್ಲಾಂದ್ರೆ ಸಂಪೂರ್ಣ ಸಮಾಧಿ 😒 https://t.co/8BJhtxS3rX
ಕರ್ನಾಟಕದಲ್ಲೆಡೆ ಸಂಪೂರ್ಣ ಲಾಕ್ ಡೌನ್ ಮೊದಲ ದಿನವೇ ವಿಫಲವಾಗಿದೆ.
ಯುಗಾದಿ ಹಬ್ಬದ ಖರೀದಿಯಲ್ಲಿ ತೊಡಗಿರುವ ಸಾರ್ವಜನಿಕರು, ಬೆಂಗಳೂರು, ಕಲಬುರಗಿ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ವಿವಿಧೆಡೆ ಮಾರುಕಟ್ಟೆ ಓಪನ್
ರಾಮನಗರದ ಎಪಿಎಂಸಿ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದಾರೆ. ಇದಕ್ಕೆ ನಿರ್ದೇಶಕ ಪವನ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ.
8:09 AM, 24 Mar
ಬಳ್ಳಾರಿಯಲ್ಲೂ ಲಾಕ್ಡೌನ್ ಉಲ್ಲಂಘನೆ
ಬಳ್ಳಾರಿಯಲ್ಲೂ ಲಾಕ್ಡೌನ್ ಉಲ್ಲಂಘನೆ, ಎಪಿಎಸಂಸಿ ಬಳಿ ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.ಗುಂಪು ಗುಂಪಾಗಿ ತರಕಾರಿ ಖರೀದಿಸುತ್ತಿದ್ದಾರೆ.
8:14 AM, 24 Mar
ಇಂದಿರಾ ಕ್ಯಾಂಟೀನ್ನಲ್ಲಿ ಲಾಕ್ಡೌನ್ ನಿರ್ಲಕ್ಷ್ಯ
ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಉಪಹಾರ ವಿತರಿಸುತ್ತಿರುವ ಕಾರಣ, ಕ್ಯಾಂಟೀನ್ ಮುಂಭಾಗ 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ಒಂದೇ ಕಡೆ ಗುಂಪು ಗುಂಪಾಗಿ ಜನರು ಸೇರುವಂತಿಲ್ಲ ಎಂದು ಸರ್ಕಾರದ ಆದೇಶವಿದ್ದರೂ ಅದೆಲ್ಲವನ್ನೂ ಮೀರಿದ್ದಾರೆ.
8:20 AM, 24 Mar
ಬೆಳಗಾವಿಯಲ್ಲಿ ಜನರನ್ನು ಚದುರಿಸಲು ಲಾಠಿಚಾರ್ಜ್ ಮಾಡಲಾಯಿತು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡಿದ್ದರು. ಮೈಕ್ ಮೂಲಕ ಅನೌನ್ಸ್ ಮಾಡಿದ್ರು ತಲೆಕೆಡೆಸಿಕೊಳ್ಳದವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ.
8:29 AM, 24 Mar
ಯಾದಗಿರಿಯಲ್ಲಿ ಲಾಕ್ಡೌನ್ ಸಂಪೂರ್ಣ ನಿರ್ಲಕ್ಷ್ಯಮಾಡಿದ್ದಾರೆ. ಯಾದಗಿರಿ ಹೊರವಲಯದ ಭೀಮಾನದಿಯಲ್ಲಿ ನೂರಾರು ಮಂದಿ ಸ್ನಾನ ಮಾಡಿದ್ದಾರೆ.
8:39 AM, 24 Mar
ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ. ವಾಹನಗಳು ಕಂಡುಬಂದಲ್ಲಿ ಅವರನ್ನು ನಿಲ್ಲಿಸಿ ತಿಳಿಹೇಳಲಾಗುತ್ತಿದೆ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
8:51 AM, 24 Mar
ಚಿಕ್ಕಮಗಳೂರು: ಚಿಕ್ಕಮಗಳೂರು ಎಪಿಎಂಸಿಯಲ್ಲಿ ಜನಜಂಗುಳಿ, ತರಕಾರಿಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ. ವ್ಯಾಪಾರ-ವಹಿವಾಟು ಎಂದಿನಂತೆಯೇ ಸಾಗುತ್ತಿದೆ.
8:56 AM, 24 Mar
ಶಿವಾಜಿನಗರದಲ್ಲಿ ಬೀದಿಗಿಳಿದ ಪೊಲೀಸರು
ಲಾಕ್ಡೌನ್ ಆದೇಶ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ ಖಾಕಿ, ಶಿವಾಜಿನಗರದಲ್ಲಿ ಬೀದಿಗಿಳಿದ ಪೊಲೀಸರು, ಹೇಳಿದ್ದು, ಕೇಳಿದ್ದು ಎಲ್ಲಾ ಆಯ್ತು ಇನ್ನು ಲಾಠಿಚಾರ್ಜ್ ಮಾತ್ರ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
9:02 AM, 24 Mar
ಎಟಿಎಂನಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸಿಲ್ಲ
ಎಟಿಎಂನಿಂದ ವೈರಸ್ ಹರಡುವ ಭೀತಿ ಇದ್ದರೂ ಇದುವರೆಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ, ಸ್ಯಾನಿಟೈಸರ್ ಕೂಡ ಇಡದೆ ನಿರ್ಲಕ್ಷ್ಯ ಮಾಡಲಾಗಿದೆ.
9:14 AM, 24 Mar
ಶಿವಮೊಗ್ಗ ಎಪಿಎಂಸಿಯಲ್ಲಿ ಲಾಠಿ ಚಾರ್ಜ್
ಶಿವಮೊಗ್ಗ: ಶಿವಮೊಗ್ಗ ಎಪಿಎಂಸಿಯಲ್ಲಿ ಜನರನ್ನು ಚದುರಿಸಲು ಪೇದೆಯಿಂದ ಲಘು ಲಾಠಿ ಪ್ರಹಾರ, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಎಪಿಎಂಸಿಗೆ ಬಂದಿದ್ದ ಜನರನ್ನು ಮನೆಗೆ ಕಳುಹಿಸಲಾಗುತ್ತಿದೆ.