• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ಇಂದು ಕೊರೊನಾ ಪ್ರಕರಣಗಳೆಷ್ಟು?

By Lekhaka
|

ಬೆಂಗಳೂರು, ಸೆಪ್ಟೆಂಬರ್ 1: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 210 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

   KS Eshwarappa ಅವರಿಗೆ ಕೊರೊನ , ಆಸ್ಪತ್ರೆಗೆ ದಾಖಲು | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ತರೀಕೆರೆ 71, ಚಿಕ್ಕಮಗಳೂರು 60, ಕಡೂರು 35, ಮೂಡಿಗೆರೆ 16, ಎನ್ಆರ್ ಪುರ 16, ಕೊಪ್ಪ 11, ಶೃಂಗೇರಿಯಲ್ಲಿ 1 ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4261ಕ್ಕೆ ಏರಿಕೆಯಾಗಿದ್ದು, 2859 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದುವರೆಗೂ ಸೋಂಕಿನಿಂದ 74 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

   ಚಿತ್ರದುರ್ಗದಲ್ಲಿ ದಿಢೀರನೆ ಹೆಚ್ಚಳವಾದ ಕೊರೊನಾ ಸೋಂಕಿತರ ಸಂಖ್ಯೆ

   ಚಿತ್ರದುರ್ಗದಲ್ಲಿ 3 ಸಾವಿರ ಗಡಿ ದಾಟಿದ ಸೋಂಕು: ಚಿತ್ರದುರ್ಗದಲ್ಲಿ ಇಂದು 149 ಜನರಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,045ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗದಲ್ಲಿ 38, ಹಿರಿಯೂರು 22, ಚಳ್ಳಕೆರೆ 23, ಮೊಳಕಾಲ್ಮೂರು 39, ಹೊಸದುರ್ಗ 24 ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 3 ಸೇರಿದಂತೆ ಒಟ್ಟು 149 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

   ಇಂದು 42 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 35 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಈಗಾಗಲೆ 1,768 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 1,242 ಸಕ್ರಿಯ ಪ್ರಕರಣಗಳು ಇವೆ.

   ರಾಮನಗರದಲ್ಲಿ 96 ಪ್ರಕರಣಗಳು: ರಾಮನಗರ ಜಿಲ್ಲೆಯಲ್ಲಿ ಇಂದು 96 ಪ್ರಕರಣಗಳು ದೃಢಪಟ್ಟಿವೆ. ಚನ್ನಪಟ್ಟಣ- 35, ಮಾಗಡಿ-20, ಕನಕಪುರ-11,

   ರಾಮನಗರ ತಾಲ್ಲೂಕಿನಲ್ಲಿ 30 ಪಾಸಿಟಿವ್ ಕೇಸ್ ದೃಢಪಟ್ಟಿವೆ. ಒಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.

   ಇಂದು 58 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 2571 ಜನರು ಗುಣಮುಖರಾಗಿದ್ದಾರೆ. 929 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕಿತರ ಸಂಖ್ಯೆ 3543ಕ್ಕೆ ಏರಿಕೆಯಾಗಿದೆ.

   English summary
   210 coronavirus cases in chikkamagaluru, 149 cases in chitradurga and 96 cases in ramanagar reported today
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X