ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ; ಕರ್ನಾಟಕ 9 ಮೃಗಾಲಯಗಳು ಬಂದ್

|
Google Oneindia Kannada News

ಬೆಂಗಳೂರು, ಮಾರ್ಚ್ 15 : ಕೊರೊನಾ ಭೀತಿ ಹಿನ್ನಲೆಯಲ್ಲಿ ಕರ್ನಾಟಕದ 9 ಮೃಗಾಲಯಗಳನ್ನು ಒಂದ್ ಮಾಡಲಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರ ಒಂದು ವಾರ ಸಾರ್ವಜನಿಕ ಸಮಾರಂಭ, ಮಾಲ್, ಚಿತ್ರಮಂದಿರ ಬಂದ್ ಮಾಡಿದೆ.

ಅರಣ್ಯ ಸಚಿವ ಆನಂದ್ ಸಿಂಗ್ ಮೃಗಾಲಯಗಳನ್ನು ಬಂದ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ 15 ರ ಭಾನುವಾರದಿಂದ 23ರ ಸೋಮವಾರದ ತನಕ ಮೃಗಾಲಯಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

"ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ. ಅತಿಥಿಗಳ ಸುರಕ್ಷತೆಯ ಭಾಗವಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಡಿ ಬರುವ ಎಲ್ಲಾ 9 ಮೃಗಾಲಯಗಳನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ" ಎಂದು ಹೇಳಿದ್ದಾರೆ.

 ಕರ್ನಾಟಕದಲ್ಲಿ ಕೊರೊನಾ; ಶನಿವಾರದ ಹೆಲ್ತ್ ಬುಲಿಟಿನ್ ಕರ್ನಾಟಕದಲ್ಲಿ ಕೊರೊನಾ; ಶನಿವಾರದ ಹೆಲ್ತ್ ಬುಲಿಟಿನ್

ಶಿವಮೊಗ್ಗ, ಗದಗ, ಚಿತ್ರದುರ್ಗ, ಬೆಳಗಾವಿ, ಕಲಬುರಗಿ, ಹಂಪಿ ಮತ್ತು ಆನಗೋಡಿನಲ್ಲಿರುವ ಮೃಗಾಲಯ, ಲಯನ್ ಸಫಾರಿಗಳನ್ನು ಒಂದು ವಾರಗಳ ಕಾಲ ಬಂದ್ ಮಾಡಲಾಗಿರುತ್ತದೆ. ಪ್ರವಾಸಿಗಳು ಮೃಗಾಲಯಗಳಿಗೆ ಭೇಟಿ ನೀಡಲು ಅವಕಾಶವಿಲ್ಲ.

zoo bandh

ಕರ್ನಾಟಕ ಸರ್ಕಾರ ಮಾರ್ಚ್ 14 ರಿಂದ 23ರ ತನಕ ಚಿತ್ರಮಂದಿರ, ಶಾಪಿಂಗ್ ಮಾಲ್, ಸಾರ್ವಜನಿಕ ಸಮಾರಂಭಗಳನ್ನು ನಿಷೇಧಿಸಿತ್ತು. ಜನರು ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದ್ದು, ಕೆಎಸ್ಆರ್‌ಟಿಸಿಗೆ ನಷ್ಟ ಉಂಟಾಗುತ್ತಿದೆ.

 ಕೊರೊನಾ ಭಯ; ನೂರು ದಿನ ರಜೆ ಕೊಡಿ ಎಂದ ನಂಗಲಿ ಪೇದೆ ಪತ್ರ ವೈರಲ್ ಕೊರೊನಾ ಭಯ; ನೂರು ದಿನ ರಜೆ ಕೊಡಿ ಎಂದ ನಂಗಲಿ ಪೇದೆ ಪತ್ರ ವೈರಲ್

ಬೆಂಗಳೂರು ನಗರದಲ್ಲಿಯೂ ಮಾಲ್, ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದು, ಮಾಲ್ ತೆರೆದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

ರಾಜ್ಯಾದ್ಯಂತ ಕೊರೊನಾ ಭೀತಿ ಹಿನ್ನಲೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಕಲಬುರಗಿ ನಗರ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕಿ ಮಾರ್ಚ್ 10ರಂದು ಮೃತಪಟ್ಟಿದ್ದರು. ಮಾರ್ಚ್ 12ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ದೃಢಪಟ್ಟಿತ್ತು.

English summary
Karnataka forest department minister Anand Singh informed that 9 zoo under zoo authority of Karnataka closed from March 15 to 23, 2020 due to Coronavirus and safety of tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X