ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟದ ಮಧ್ಯೆ ಗುಡ್ ನ್ಯೂಸ್ ಹೇಳಿದ ಡಾ.ಸಿ.ಎನ್.ಮಂಜುನಾಥ್: ಕಂಡೀಷನ್ ಅಪ್ಲೈ

|
Google Oneindia Kannada News

ಕೊರೊನಾ ಎರಡನೇ ಹಾವಳಿ ತಾರಕಕ್ಕೇರಿರುವ ಈ ಸಮಯದಲ್ಲಿ ಖ್ಯಾತ ವೈದ್ಯ, ಜಯದೇವ ಹೃದೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಮನಸ್ಸಿಗೆ ಅಯ್ಯಬ್ಬಾ ಎನಿಸುವ ಶುಭ ಸುದ್ದಿಯೊಂದನ್ನು ನೀಡಿದ್ದಾರೆ.

ಕೊರೊನಾ ಮೊದಲನೇ ಅಲೆಯಿಂದಲೇ ಸರಕಾರಕ್ಕೆ, ಸಾರ್ವಜನಿಕರಿಗೆ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದ ಡಾ.ಮಂಜುನಾಥ್, ಗುಡ್ ನ್ಯೂಸ್ ಜೊತೆ, ಜನತೆ ಯಾವ ಕಾರಣಕ್ಕೂ ಸ್ವಲ್ಪದಿನ ಮೈಮರೆಯಬಾರದು ಎನ್ನುವ ಸಲಹೆಯನ್ನೂ ನೀಡಿದ್ದಾರೆ.

ಮೂಗಿಗೆ ನಿಂಬೆರಸದಿಂದ ಕೊರೊನಾ ಮಾಯ? ಡಾ.ಸಿ.ಎನ್.ಮಂಜುನಾಥ್ ಏನಂತಾರೆಮೂಗಿಗೆ ನಿಂಬೆರಸದಿಂದ ಕೊರೊನಾ ಮಾಯ? ಡಾ.ಸಿ.ಎನ್.ಮಂಜುನಾಥ್ ಏನಂತಾರೆ

ಕೊರೊನ ಮೂರನೇ ಅಲೆಯ ಬಗ್ಗೆಯೂ ಮುನ್ಸೂಚನೆ ನೀಡಿರುವ ಡಾ.ಮಂಜುನಾಥ್, ಸರಕಾರ ಎಚ್ಚೆತ್ತುಕೊಂಡು ಪೂರ್ವಸಿದ್ದತೆಯನ್ನು ನಡೆಸಿದರೆ, ಅದನ್ನು ನಿಭಾಯಿಸುವುದು ಕಷ್ಟವಾಗದು ಎಂದು ಹೇಳಿದ್ದಾರೆ.

ಕೊರೊನಾ ಕರಾಳತೆ: ಬೆಚ್ಚಿಬೀಳಿಸುವ ಡಾ.ದೇವಿ ಪ್ರಸಾದ್ ಶೆಟ್ಟಿ ನೀಡಿದ ಹೆಡ್ ಲೈನ್ಕೊರೊನಾ ಕರಾಳತೆ: ಬೆಚ್ಚಿಬೀಳಿಸುವ ಡಾ.ದೇವಿ ಪ್ರಸಾದ್ ಶೆಟ್ಟಿ ನೀಡಿದ ಹೆಡ್ ಲೈನ್

ವೈದ್ಯರಿಗೆ ಹೇಳಿಕೆಗೆ ಪೂರಕ ಎನ್ನುವಂತೆ ದೇಶದ ಹದಿಮೂರು ರಾಜ್ಯಗಳಲ್ಲಿ ಕೋವಿಡ್ ಎರಡನೇ ವೈರಸಿನ ಪ್ರಭಾವ ಕಮ್ಮಿಯಾಗುತ್ತಾ ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಡಾ.ಮಂಜುನಾಥ್ ಹೇಳಿದ್ದು, ಹೀಗೆ:

 ಜಯದೇವ ಹೃದೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್

ಜಯದೇವ ಹೃದೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್

ಡಾ.ಸಿ.ಎನ್.ಮಂಜುನಾಥ್ ಪ್ರಕಾರ, "ಮಳೆಗಾಲದ ಆರಂಭದಲ್ಲಿ ಅಂದರೆ ಜೂನ್ ತಿಂಗಳ ಆರಂಭದಿಂದ ಕೊರೊನಾ ವೈರಸಿನ ಪ್ರಭಾವ ಕಮ್ಮಿಯಾಗುತ್ತಾ ಬರಲು ಆರಂಭಿಸುತ್ತದೆ. ಆದರೂ, ಸಾರ್ವಜನಿಕರು ಸರಕಾರದ ಮಾರ್ಗಸೂಚಿಯನ್ನು ಅದರ ನಂತರವೂ ಪಾಲಿಸಿಕೊಂಡು ಬರಬೇಕಾಗುತ್ತದೆ"ಎಂದು ಡಾ.ಮಂಜುನಾಥ್ ಹೇಳಿದ್ದಾರೆ.

 ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಶುಚಿತ್ವಕ್ಕೆ ಆದ್ಯತೆ ಕೊಡುವುದು

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಶುಚಿತ್ವಕ್ಕೆ ಆದ್ಯತೆ ಕೊಡುವುದು

"ನಮ್ಮ ಮುಂದಿನ ದಿನಗಳು ನೆಮ್ಮದಿಯಿಂದ ಇರಬೇಕಾದರೆ ಜನರು ಕನಿಷ್ಟ ಈ ವರ್ಷಾಂತ್ಯದವರೆಗಾದರೂ ಎಚ್ಚರಿಕೆಯಿಂದ ಇರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಶುಚಿತ್ವಕ್ಕೆ ಆದ್ಯತೆ ಕೊಡುವುದನ್ನು ಮಾಡಬೇಕು"ಎಂದು ಡಾ.ಮಂಜುನಾಥ್ ಸಲಹೆಯನ್ನು ನೀಡಿದ್ದಾರೆ.

 ಎಲ್ಲದಕ್ಕೂ ಪ್ರಮುಖವಾಗಿ ಬೇಕಾಗಿರುವುದು ಸರಕಾರದ ಸಿದ್ದತೆಗಳು

ಎಲ್ಲದಕ್ಕೂ ಪ್ರಮುಖವಾಗಿ ಬೇಕಾಗಿರುವುದು ಸರಕಾರದ ಸಿದ್ದತೆಗಳು

"ಸೆಪ್ಟಂಬರ್ ಹೊತ್ತಿಗೆ ಮೂರನೇ ಅಲೆ ಬರುವ ಸಾಧ್ಯತೆಯಿದೆ, ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡರೆ, ಇದರ ಅಪಾಯವಿಲ್ಲ. ಎಲ್ಲದಕ್ಕೂ ಪ್ರಮುಖವಾಗಿ ಬೇಕಾಗಿರುವುದು ಸರಕಾರದ ಸಿದ್ದತೆಗಳು. ಎರಡನೇ ಅಲೆಯ ರೀತಿಯಲ್ಲಿ ಪೂರ್ವಸಿದ್ದತೆಗಳು ಇಲ್ಲದಿದ್ದರೆ, ಅಪಾಯ ಕಟ್ಟಿಟ್ಟಬುತ್ತಿ"ಎಂದು ಡಾ.ಸಿ.ಎನ್.ಮಂಜುನಾಥ್ ಸರಕಾರಕ್ಕೆ ಈಗಲೇ ಎಚ್ಚರಿಕೆಯನ್ನು ನೀಡಿದ್ದಾರೆ.

Recommended Video

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊಟ್ಟ ಆದೇಶ ಏನು? | Oneindia Kannada
 ಕೂರೊನಾ ಸಂಕಷ್ಟದ ಮಧ್ಯೆ ಗುಡ್ ನ್ಯೂಸ್ ಹೇಳಿದ: ಆದರೆ ಕಂಡೀಷನ್ ಅಪ್ಲೈ

ಕೂರೊನಾ ಸಂಕಷ್ಟದ ಮಧ್ಯೆ ಗುಡ್ ನ್ಯೂಸ್ ಹೇಳಿದ: ಆದರೆ ಕಂಡೀಷನ್ ಅಪ್ಲೈ

"ಹಲವು ದೇಶಗಳಲ್ಲಿ ಅಲೆ ಕಮ್ಮಿಯಾದ ಮೂರ್ನಾಲ್ಕು ತಿಂಗಳಲ್ಲಿ ಮತ್ತೆ ಇದರ ಕಾಟ ಆರಂಭವಾದ ಉದಾಹರಣೆಯಿದೆ. ಹಾಗಾಗಿ, ಮಾಸ್ಕ್ ಧರಿಸುವುದನ್ನು ಬಿಡಬಾರದು"ಎನ್ನುವ ಅಭಿಪ್ರಾಯವನ್ನು ಡಾ.ಮಂಜುನಾಥ್ ವ್ಯಕ್ತ ಪಡಿಸಿದ್ದಾರೆ. ಇದೇ ರೀತಿಯ ಅಭಿಪ್ರಾಯವನ್ನು ಹಲವು ವೈದ್ಯರೂ ಈಗಾಗಲೇ ವ್ಯಕ್ತ ಪಡಿಸಿದ್ದಾರೆ.

English summary
Corona Second Wave Surge May Reduce From Rainy Season, Said, Dr. C N Manjunath Of Jayadeva Hospital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X