2ಸಾವಿರಕ್ಕಿಂತಲೂ ಕಮ್ಮಿ ಸಕ್ರಿಯ ಪ್ರಕರಣವಿರುವ ರಾಜ್ಯದ 7 ಜಿಲ್ಲೆಗಳು

ಕೊರೊನಾ ಎರಡನೇ ಅಲೆಯ ತೀವ್ರತೆ ತಜ್ಞರು ಅಂದಾಜಿಸಿದಂತೆ ಕಮ್ಮಿಯಾಗುತ್ತಿದೆ. ಮೇ ಮಧ್ಯಭಾಗದಿಂದ ಜೂನ್ ಮಧ್ಯಭಾಗದ ವೇಳೆ ವೈರಸ್ ಪ್ರಭಾವ ಕಮ್ಮಿಯಾಗುತ್ತದೆ ಎಂದು ಹೇಳಿದ್ದರು.

ಕಳೆದ ಒಂದು ವಾರದಿಂದ ಒಟ್ಟಾರೆಯಾಗಿ ರಾಜ್ಯದಲ್ಲಿ ಹೊಸ ಪ್ರಕರಣ ಇಳಿಮುಖವಾಗುತ್ತಿದೆ. ಆದರೆ, ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡು ಬರದೇ ಇರುವುದು ಗಮನಿಸಬೇಕಾದ ವಿಚಾರ.

ಸತತವಾಗಿ ಇಂದು (ಜೂನ್ 1) ಕೂಡಾ ಹೊಸ ಪ್ರಕರಣಕ್ಕಿಂತ ದುಪ್ಪಟ್ಟು ಬಿಡುಗಡೆಯಾದವರ ಸಂಖ್ಯೆ ಇರುವುದು ನೆಮ್ಮದಿಯ ವಿಚಾರ. ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರದ ಹಿಂದೆ ಆರು ಸಾವಿರವಿದ್ದ ಹೊಸ ಪ್ರಕರಣ ಈಗ 3,418ಕ್ಕೆ ಇಳಿದಿದೆ.

ರಾಜ್ಯದ ಮೂವತ್ತು ಜಿಲ್ಲೆಗಳ ಪೈಕಿ, ಏಳು ಜಿಲ್ಲೆಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣ ಎರಡು ಸಾವಿರಕ್ಕಿಂತಲೂ ಕಮ್ಮಿಯಿರುವ ನಿಟ್ಟುಸಿರು ಬಿಡುವ ವಿಚಾರ. ಆ ಏಳು ಜಿಲ್ಲೆಗಳು ಯಾವುವು? (ಜೂನ್ ಒಂದರ ಆರೋಗ್ಯ ಇಲಾಖೆಯ ಅಂಕಿಅಂಶದ ಪ್ರಕಾರ)

 ಬೆಳಗಾವಿ, ಹಾಸನ, ಮೈಸೂರು, ತುಮಕೂರುನಲ್ಲಿ ಹತ್ತು ಸಾವಿರಕ್ಕೂ ಮೇಲಿದೆ

ಬೆಳಗಾವಿ, ಹಾಸನ, ಮೈಸೂರು, ತುಮಕೂರುನಲ್ಲಿ ಹತ್ತು ಸಾವಿರಕ್ಕೂ ಮೇಲಿದೆ

ಸಕ್ರಿಯ ಪ್ರಕರಣಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಇದಾದ ನಂತರ ಬೆಳಗಾವಿ, ಹಾಸನ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಈ ಸಂಖ್ಯೆಯು ಹತ್ತು ಸಾವಿರಕ್ಕೂ ಮೇಲಿದೆ. ಬೆಂಗಳೂರಿನಲ್ಲಿ ಹೊಸ ಪ್ರಕರಣ ಕಮ್ಮಿ ಮತ್ತು ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಲ್ಲೂ ಸಕ್ರಿಯ ಪ್ರಕರಣಗಳು ಇಳಿಕೆಯಾಗುತ್ತಿದೆ.

ಜಿಲ್ಲೆ: ಯಾದಗಿರಿ
ಒಟ್ಟು ಪಾಸಿಟಿವ್ ಕೇಸುಗಳು: 26,724
ಸಕ್ರಿಯ ಪ್ರಕರಣಗಳು: 1,618
ಒಟ್ಟು ಸಾವು: 201

 ದಿನೇದಿನೇ ಇಳಿಕೆಯಾಗುತ್ತಿರುವ ಕೋವಿಡ್ ಹೊಸ ಕೇಸುಗಳು

ದಿನೇದಿನೇ ಇಳಿಕೆಯಾಗುತ್ತಿರುವ ಕೋವಿಡ್ ಹೊಸ ಕೇಸುಗಳು

ಜಿಲ್ಲೆ: ಬಾಗಲಕೋಟೆ
ಒಟ್ಟು ಪಾಸಿಟಿವ್ ಕೇಸುಗಳು: 33,181
ಸಕ್ರಿಯ ಪ್ರಕರಣಗಳು: 1,841
ಒಟ್ಟು ಸಾವು: 281

ಜಿಲ್ಲೆ: ಬೀದರ್
ಒಟ್ಟು ಪಾಸಿಟಿವ್ ಕೇಸುಗಳು: 23,860
ಸಕ್ರಿಯ ಪ್ರಕರಣಗಳು: 319
ಒಟ್ಟು ಸಾವು: 379

 ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಜಾಸ್ತಿ

ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಜಾಸ್ತಿ

ಜಿಲ್ಲೆ: ಹಾವೇರಿ
ಒಟ್ಟು ಪಾಸಿಟಿವ್ ಕೇಸುಗಳು:19,935
ಸಕ್ರಿಯ ಪ್ರಕರಣಗಳು: 1,515
ಒಟ್ಟು ಸಾವು: 446

ಜಿಲ್ಲೆ: ಕಲಬುರಗಿ
ಒಟ್ಟು ಪಾಸಿಟಿವ್ ಕೇಸುಗಳು: 60,156
ಸಕ್ರಿಯ ಪ್ರಕರಣಗಳು: 1,520
ಒಟ್ಟು ಸಾವು: 775

Recommended Video

    ಭಾರತ ಹೆಗಲಿಗೆ ಬಿದ್ದ BRICS ಶೃಂಗಸಭೆ | Oneindia Kannada
     ಹೊಸ ಪ್ರಕರಣ ಕಮ್ಮಿ ಮತ್ತು ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚು

    ಹೊಸ ಪ್ರಕರಣ ಕಮ್ಮಿ ಮತ್ತು ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚು

    ಜಿಲ್ಲೆ: ರಾಮನಗರ
    ಒಟ್ಟು ಪಾಸಿಟಿವ್ ಕೇಸುಗಳು: 22,424
    ಸಕ್ರಿಯ ಪ್ರಕರಣಗಳು: 1,841
    ಒಟ್ಟು ಸಾವು: 264

    ಜಿಲ್ಲೆ: ವಿಜಯಪುರ
    ಒಟ್ಟು ಪಾಸಿಟಿವ್ ಕೇಸುಗಳು: 33,405
    ಸಕ್ರಿಯ ಪ್ರಕರಣಗಳು: 1,874
    ಒಟ್ಟು ಸಾವು: 416

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+