ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಎಣ್ಣೆ ಪ್ಯಾಕೇಟ್‌ಗಳು, ನಿಲ್ಲಿಸಿ ಅಣ್ಣ ಗಾಡಿ!, ಕಾರು ಸವಾರರು ದಿಲ್‌ಖುಷ್ Video

ಬೆಂಗಳೂರು: ರಾಜಧಾನಿ ಬೆಂಗಳೂರು ಹಾಗೂ ಮೈಸೂರು ಮಧ್ಯದ ಎಕ್ಸ್‌ಪ್ರೆಸ್‌ವೇನಲ್ಲಿ ಚೆಲ್ಲಾಪಿಲ್ಲಿಯಾಗಿ ಅಡುಗೆ ಎಣ್ಣೆ ಪಾಕೀಟ್ ಬಿದ್ದಿದ್ದು, ಅವುಗಳನ್ನು ರಾಶಿ ರಾಶಿಯಾಗಿ ಸವಾರರು ವಾಹನ ಎತ್ತಿಕೊಂಡ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದು, ಸಾರ್ವಜನಿಕರ ಅದೃಷ್ಟ, ಮಾಲೀಕನ ದುರಾದೃಷ್ಟ ಎಂದು ನೆಟ್ಟಿಗರು ಹೇಳಿದ್ದಾರೆ. ವಿಶೇಷವೆಂದರೆ ಈ ಪ್ಯಾಕೇಜ್ ಆಯ್ದುಕೊಳ್ಳುತ್ತಿರುವವರಲ್ಲಿ ಬಹುತೇಕರು ಕಾರು ಸವಾರರಾಗಿದ್ದು, ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ (@ravikeerthi22)ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ನಡೆದ ಘಟನೆ ಎನ್ನಲಾಗಿದೆ. ನಿತ್ಯ ಎಕ್ಸ್‌ಪ್ರೆಸ್‌ವೇನಲ್ಲಿ ಆಟೋ, ಟ್ರ್ಯಾಕ್ಟರ್ ಮತ್ತು ಬೈಕ್ ಹೊರತಾಗಿ ಕಾರು, ಬಸ್‌ಗಳು, ಲಾರಿ ಇನ್ನಿತರ ವಾಹನಗಳ ಸಂಚಾರಕ್ಕೆ ಅವಕಾಶ ಇದೆ. ಒಂದು ಲೀಟರ್ ಪ್ಯಾಕೇಟ್ ಅಡುಗೆ ಎಣ್ಣೆಗಳ ಇರುವ ಬಾಕ್ಸ್‌ಗಳನ್ನು ಹೊತ್ತಿದ್ದ ಲಾರಿ/ಗೂಡ್ಸ್ ವಾಹನದಿಂದ ನೂರಾರು ಪ್ಯಾಕೇಟ್‌ಗಳು ರಸ್ತೆಗೆ ಬಿದ್ದಿವೆ. ಇದನ್ನು ವಾಹನ ಮಾಲೀಕ ಗಮನಿಸಿಲ್ಲ ಎನ್ನಲಾಗಿದೆ.

Cooking Oil Packets

ಎಣ್ಣೆ ನೋಡಿ 'ನಿಲ್ಲಿಸಿ ಅಣ್ಣ ಗಾಡಿ'..

ಎಕ್ಸ್‌ಪ್ರೆಸ್‌ ವೇ ಹೆದ್ದಾರಿ ತುಂಬೆಲ್ಲ ಅಡುಗೆ ಎಣ್ಣೆ ಪ್ಯಾಕೇಟ್‌ಗಳನ್ನು ನೋಡಿದ ಬಸ್‌ನಲ್ಲಿ ಕೂತಿದ್ದ ಮಹಿಳಾ ಪ್ರಯಾಣಿಕರು ಸಹಿತ 'ನಿಲ್ಲಿಸಿ ಅಣ್ಣ ಗಾಡಿ' ಎಂಬುದು ಕೇಳುತ್ತದೆ. ಎಣ್ಣೆ ಪ್ಯಾಕೇಟ್‌ಗಳು ಬಿದ್ದಿರುವುದು ಕಾಣುತ್ತಿದ್ದಂತೆ ರಸ್ತೆಗಳಲ್ಲಿ ಬರುವ ಕಾರುಗಳು ಸವಾರರು, ಪ್ರಯಾಣಿಕರು ಅಡ್ಡಾದಿಡ್ಡಿಯಾಗಿ ಕಾರು ನಿಲ್ಲಿಸಿ ಎಣ್ಣೆ ಪ್ಯಾಕೇಟ್‌ಗಳನ್ನು ಎತ್ತುಕೊಂಡಿದ್ದಾರೆ. ಒಂದಷ್ಟು ಪ್ಯಾಕೇಟ್‌ಗಳು ಒಡೆದು ರಸ್ತೆಯಲ್ಲಿ ಎಣ್ಣೆ ಚೆಲ್ಲಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಉಚಿತವಾಗಿ ಸಿಕ್ರೆ ಯಾರು ಬಿಡಲ್ಲ: ನೆಟ್ಟಿಗರು ಹೇಳಿದ್ದೇನು?

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ಹೊರ ಹಾಕಿದ್ದಾರೆ. 'ನಾವು ಭಾರತೀಯರು, ಉಚಿತ ಸಿಗುವುದಕ್ಕೆ ಮತ ಹಾಕುತ್ತೇವೆ. ಹೆದ್ದಾರಿಯಲ್ಲಿ ಎಣ್ಣೆ ಉಚಿತವಾಗಿ ಸಿಗುತ್ತಿದ್ದೆ ಎಂದಾದರೆ ಮರ್ಸಿಡಿಸ್, ಆಡಿ, ಬಿಎಂಡಬ್ಲ್ಯು, ರೋಲ್ಸ್ ರಾಯ್ಸ್ ಮಾಲೀಕರು ಸಹ ನಿಂತು ಉಚಿತ ಎಣ್ಣೆಗಳನ್ನು ತೆಗೆದುಕೊಳ್ಳುತ್ತಾರೆ. ಲಕ್ನೋದಲ್ಲಿ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಕದಿಯಲು ಮರ್ಸಿಡಿಸ್ ನಿಂತಿತ್ತು ಎಂಬುದನ್ನು ನೆನಪಿಡಿ! ಇನ್ನೂ ಬಿಟ್ಟ ಎಣ್ಣೆಯನ್ನು ಏಕೆ ಬಿಡಬೇಕು' ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ.

ವೀಡಿಯೊ ಪುರಾವೆಗಳ ಇಟ್ಟುಕೊಂಡು ಎಣ್ಣೆ ಪ್ಯಾಕೇಟ್ ಹೊತ್ತೊಯ್ದವರ ಮೇಲೆ ಕಳ್ಳತನ ಕೇಸ್ ಹಾಕಬೇಕು. ಇವರೆಲ್ಲರಿಗೆ ಸರಿಯಾದ ಉದ್ದೇಶ ಇದ್ದಿದ್ದರೆ ಇತರ ವಾಹನ ಸವಾರರಿಗೆ ಅನುಕೂಲವಾಗುವಂತೆ, ಅಪಘಾತ ತಪ್ಪಿಸಲು ಆ ಎಲ್ಲ ಪ್ಯಾಕೆಟ್‌ಗಳನ್ನು ಸಂಗ್ರಹಿಸಿ ರಸ್ತೆ ಬದಿಗೆ ಇಡಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ' ಎಂದು ಎರಡನೇ ಬಳಕೆದಾರರು ಬೇಸರ ಹೊರ ಹಾಕಿದ್ದಾರೆ.

'ಈ ದಿನ ಟ್ರಕ್ ಚಾಲಕನ ದುರದೃಷ್ಟದಿಂದ ಈ ಎಲ್ಲಾ ಅದೃಷ್ಟವಂತರು ಎಣ್ಣೆ ಪ್ಯಾಕೇಟ್‌ಗಳನ್ನು ದಾನವಾಗಿ ಪಡೆದಿದ್ದಾರೆ' ಎಂದು ಮೂರನೆಯವರು ತಿಳಿಸಿದ್ದಾರೆ. ಇತ್ತೀಚೆಗೆ ಲಕ್ನೌದಲ್ಲಿ ತುಪ್ಪದ ಲಾರಿಯೊಂದು ಪಲ್ಟಿ ಆಗಿದ್ದರಿಂದ ಜನರು ಬಕೇಟ್‌ಗಳಲ್ಲಿ ತುಪ್ಪ ತುಂಬಿಕೊಂಡು ಹೋಗಿದ್ದರು. ಈ ವಿಡಿಯೋ ವೈರಲ್ ಅಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+