ದೇಶಾದ್ಯಂತ ಗುತ್ತಿಗೆ ಆರೋಗ್ಯ ನೌಕರರ ಸಂಪು: ರಾಜ್ಯದಲ್ಲೂ ಸೇವೆ ವ್ಯತ್ಯಯ
ಬೆಂಗಳೂರು, ಅಕ್ಟೋಬರ್ 25: ದೇಶಾದ್ಯಂತ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಇಂದು (ಅಕ್ಟೋಬರ್ 25) ನಡೆಯಲಿದೆ. ಗುತ್ತಿಗೆ ನೌಕರರಿಗೆ ಕಡಿಮೆ ವೇತನ ಹಾಗೂ ಕೆಲಸ ಕಳೆದುಕೊಳ್ಳುವ ಭೀತಿಯಿಂದಾಗಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.
ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 22 ಸಾವಿರ ಹಾಗೂ ಇನ್ನಿತರೆ ಆರೋಗ್ಯ ಕಾರ್ಯಕ್ರಮದಡಿ ಕಾರ್ಯ ಜಿರ್ವಹಿಸುತ್ತಿದ್ದು, ಇದರಲ್ಲಿ 8 ಸಾವಿರ ಗುತ್ತಿಗೆ ನೌಕರರಾಗಿದ್ದಾರೆ. ಬೆಂಗಳೂರು ಸೇರಿದಂತೆ ಆಯಾ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ ದೇಶಾದ್ಯಂತ ಹಲವು ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದರ ಯಶಸಸ್ಸಿಗೆ ಕಾರ್ಯ ನಿರ್ವಹಿಸುತ್ತಿರುವ ಕಾಯಂ ಸಿಬ್ಬಂದಿಯಷ್ಟೇ ಗುತ್ತಿಗೆ ನೌಕರರು ಶ್ರಮಿಸುತ್ತಿದ್ದಾರೆ.

ಆದರೆ ಕೆಲಸಕ್ಕೆ ತಕ್ಕಂತೆ ವೇತನ ನೀಡುವುದರಲ್ಲಿ ಸಮಾನತೆ ಇಲ್ಲ, ಸೇವಾ ಭದ್ರತೆಯೂ ಇಲ್ಲ, ನವದೆಹಲಿ ಹಾಗೂ ಹರಿಯಾಣದಲ್ಲಿ ಸರ್ಕಾರಗಳು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ನೌಕರರಿಗೆ ಸೂಕ್ತ ವೇತನ ಹಾಗೂ ಭದ್ರತೆಯನ್ನು ನೀಡುತ್ತಿದೆ. ಆದರೆ ಆ ವ್ಯವಸ್ಥೆ ಕರ್ನಾಟಕದಲ್ಲೂ ಜಾರಿಯಾಗಬೇಕು ಎನ್ನುವುದು ನೌಕರರ ವಾದವಾಗಿದೆ.












Click it and Unblock the Notifications