30 ವರ್ಷದಿಂದ ಗುತ್ತಿಗೆ ಬಿಲ್‌ ಬಾಕಿ: ಸರ್ಕಾರಕ್ಕೆ ಗುತ್ತಿಗೆದಾರ ಕಲಿಸಿದ ಪಾಠವೇನು ?

ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಗುತ್ತಿಗೆದಾರರ ಬಾಕಿ ಹಾಗೂ ಗುತ್ತಿಗೆದಾರರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ.

ಅಲ್ಲದೆ ಈ ನಡುವೆ ರಾಜ್ಯದಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ಸಹ ಮುಂದುವರಿದಿವೆ. ಧಾರವಾಡದಲ್ಲಿ ಬಾಕಿ ಬಿಲ್ ಪಾವತಿ ಮಾಡಿಸುವಂತೆ ಆಗ್ರಹಿಸಿ ಗುತ್ತಿಗೆದಾರರೊಬ್ಬರು ನ್ಯಾಯಲಯದ ಮೆಟ್ಟಿಲು ಹತ್ತಿದ್ದಾರೆ. ಈ ವಿಚಾರವಾಗಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಬಂಧನ ಸಹ ಆಗಿದೆ. ಎನ್. ಆರ್ ನಾಯಕ ಎನ್ನುವ ಗುತ್ತಿಗೆದಾರರು ಗುತ್ತಿಗೆ ಬಿಲ್‌ ಪಾವತಿ ಮಾಡಿಲ್ಲ ಎಂದು ಕೋರ್ಟ್‌ ಮೊರೆ ಹೋಗಿದ್ದಾರೆ. ಕಳೆದ 30 ವರ್ಷಗಳಿಂದ ಅವರಿಗೆ ಗುತ್ತಿಗೆ ಬಾಕಿ ಬಿಲ್‌ ಪಾವತಿ ಆಗಿರಲಿಲ್ಲ. ಇಷ್ಟು ವರ್ಷಗಳಿಂದ ಅವರು ಗುತ್ತಿಗೆ ಕೆಲಸ ಹಣ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಲ್ಲೇ ಇದ್ದರು.

Contract Bill Outstanding for 30 Years Contractor teach lesson to Government

ಸುದೀರ್ಘ 30 ವರ್ಷಗಳಿಂದ ಗುತ್ತಿಗೆದಾರರಿಗೆ ಬಿಲ್‌ ಬಾಕಿ ಉಳಿಸಿಕೊಂಡಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಗುತ್ತಿಗೆದಾರರು ಪಟ್ಟು ಬಿಡದೆ ಕೋರ್ಟ್‌ ಮೊರೆ ಹೋಗಿ ಈ ಕೇಸ್‌ನಲ್ಲಿ ಗೆದಿದ್ದಾರೆ. ಈ ಕೇಸ್‌ನ ವಿವರ ಇಲ್ಲಿದೆ.

ಕೊನೆಗೆ ಪರಿಹಾರ ಸಿಗದೆ ಕೋರ್ಟ್‌ ಮೊರೆ ಹೋಗಿದ್ದಾರೆ. ಇನ್ನು ಕಾಮಗಾರಿ ಮಾಡಿದ ಗುತ್ತಿಗೆದಾರರ ಬಾಕಿ ಬಿಲ್ ಉಳಿಸಿಕೊಂಡಿರುವ ಕಾರಣಕ್ಕಾಗಿ ಎಂಜಿನಿಯರ ಅರೆಸ್ಟ್‌ಸಹ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಮಾಡಿದ ಎಡವಟ್ಟಿನಿಂದಾಗಿ ಎಂಜಿನಿಯರ್ ಅರೆಸ್ಟ್‌ಮಾಡಲಾಗಿದೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ದೇವರಾಜ ಶಿಗ್ಗಾಂವಿ ಎನ್ನುವವರು ಅರೆಸ್ಟ್‌ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ ಏನು: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮಂಡವಾಡ ಗ್ರಾಮದಲ್ಲಿ ಹೊಸಕೆರೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಎನ್‌ ಆರ್‌ ನಾಯಕ್‌ ಅವರು ಮಾಡಿದ್ದರು. ಗುತ್ತಿಗೆದಾರ ಎನ್ ಆರ್ ನಾಯಕ ಅವರ ಬಾಕಿ ಬಿಲ್ ನೀಡುವಂತೆ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆಯನ್ನು ಸಹ ಎಂಜಿನಿಯರ್ ಸಲ್ಲಿಸಿದ್ದರು ಎಂದು ಹೇಳಲಾಗಿದೆ. ಹಲವು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ, ಸರ್ಕಾರದಿಂದ ಹಣ ಬಿಡುಗಡೆ ಆಗಿರಲಿಲ್ಲ ಎಂದು ಹೇಳಲಾಗಿದೆ. ಅಲ್ಲದೆ ಕಳೆದ 30 ವರ್ಷದಲ್ಲಿ 15ಕ್ಕೂ ಎಂಜಿನಿಯರ್‌ಗಳು ವರ್ಗಾವಣೆಯಾದರೂ ಬಾಕಿ ಬಿಲ್‌ ಬಿಡುಗಡೆಯಾಗಿರಲಿಲ್ಲ ಎಂದು ಹೇಳಲಾಗಿದೆ.

30 ವರ್ಷಗಳ ಹಿಂದಿನ ಕಾಮಗಾರಿ: ಇನ್ನು ಇದು 30 ವರ್ಷಗಳ ಹಿಂದಿನ ಕಾಮಗಾರಿ ಇದಾಗಿದೆ. ಅಲ್ಲಿಂದ ಇಲ್ಲಿಯವರಗೆ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡದೆ ಸಣ್ಣ ನೀರಾವರಿ ಇಲಾಖೆಯ ಬಾಕಿ ಉಳಿಸಿಕೊಂಡು ಬಂದಿದೆ. ಒಟ್ಟು 18 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದು.

18 ಲಕ್ಷಕ್ಕೆ ಬಡ್ಡಿ ಸೇರಿ 30 ವರ್ಷಕ್ಕೆ 3. 34 ಕೋಟಿ ರೂಪಾಯಿ ಆಗಿದೆ. ಹೀಗಾಗಿ, ಈ ವಿಚಾರವಾಗಿ ಗುತ್ತಿಗೆದಾರ ನಾಯಕ ಅವರು ಜಿಲ್ಲಾ ನ್ಯಾಯಾಲಯದ ಮೋರೆ ಹೋಗಿದ್ದರು. ಕೇಸ್‌ ವಿಚಾರಣೆ ನಡೆದಾಗ ನ್ಯಾಯಾಲಯದಲ್ಲಿ ಎಂಜಿನಿಯರ್ ಪರ ವಕೀಲರು 15 ದಿನಗಳವರೆಗೆ ಕಾಲಾವಕಾಶ ಕೊಡುವಂತೆ ಮನವಿ ಮಾಡಿದ್ದರು. ಆದರೆ ಜಿಲ್ಲಾ ನ್ಯಾಯಾಲಯ ಬಾಡಿ ವಾರೆಂಟ್ ಜಾರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+