ಕಡಿಮೆಯಾದ ಮತದಾನ ಪ್ರಮಾಣ: ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಹೀಗೊಂದು ವಿಶ್ಲೇಷಣೆ

ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕರ್ನಾಟಕದಲ್ಲಿ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇಂದು ಸಂಜೆ 6 ಗಂಟೆಗೆ ಮುಕ್ತಾಯವಾದ ಮತದಾನದ ಪ್ರಮಾಣವು ಸುಮಾರು ಶೇ 70 ರಷ್ಟಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಇದು ಯಾವ ಲಾಭ ತಂದು ಕೊಡಲಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.

2008 ರಲ್ಲಿ ಆದ ಮತದಾನ ಪ್ರಮಾಣವೆಷ್ಟು?

2008 ರಲ್ಲಿ ಶೇ 64.68 ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯು 110 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಕಾಂಗ್ರೆಸ್‌ ಪಕ್ಷವು 80 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಗಿತ್ತು. ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್‌ ಕೇವಲ 28 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಭಾರತೀಯ ಜನತಾ ಪಕ್ಷಕ್ಕೆ ಶೇ 33.86 ರಷ್ಟು ಮತಗಳು ಬಿದ್ದಿದ್ದವು. ಕಾಂಗ್ರೆಸ್‌ಗೆ ಶೇ 34.76 ಮತಗಳು ಬಂದಿದ್ದವು. ಜೆಡಿಎಸ್‌ ಶೇ 18.96 ಮತಗಳನ್ನು ಗಳಿಸುವಲ್ಲಿ ಸಫಲವಾಗಿತ್ತು. ಆ ಸಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಪ್ರಮಾಣ ಬಂದಿದ್ದರೂ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.

Which Party will Get Benefits from Low Voters Turnout in Karnataka?

2013 ರಲ್ಲಿ ಆದ ಮತದಾನ ಪ್ರಮಾಣವೆಷ್ಟು?

2013 ರಲ್ಲಿ ಶೇ 71.83 ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತದೊಂದಿಗೆ ಆರಿಸಿ ಬಂದಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ 122 ಸ್ಥಾನಗಳು ಬಂದಿದ್ದವು. ಬಿಜೆಪಿ ಕೇವಲ ಕ್ಷೇತ್ರಗಳಲ್ಲಿ ಜಯ ಸಾಧಿಸುವಲ್ಲಿ ಸಫಲವಾಗಿತ್ತು. ಜೆಡಿಎಸ್‌ಗೆ 40 ಸ್ಥಾನಗಳು ಲಭ್ಯವಾಗಿದ್ದವು. ಆ ಬಾರಿಯ ಚುನಾವಣೆಯಲ್ಲಿ ಶೇ 36.6ರಷ್ಟು ಮತಗಳು ಕಾಂಗ್ರೆಸ್‌ಗೆ ಬಂದಿದ್ದವು. ಬಿಜೆಪಿಗೆ ಶೇ 20.2ರಷ್ಟು ಸ್ಥಾನಗಳು ಲಭ್ಯವಾಗಿದ್ದವು. ಜೆಡಿಎಸ್‌ಗೆ ಶೇ 19.9ರಷ್ಟು ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

2018 ರಲ್ಲಿ ಆದ ಮತದಾನ ಪ್ರಮಾಣವೆಷ್ಟು?

2018 ರಲ್ಲಿ ಶೇ 72.50ರಷ್ಟು ಮತದಾನವಾಗಿತ್ತು. ಆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಆದರೆ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿಗೆ 104 ಸ್ಥಾನಗಳು ದೊರೆತಿದ್ದವು. 80 ಸ್ಥಾನಗಳನ್ನು ಕಾಂಗ್ರೆಸ್‌ ಪಡೆದುಕೊಂಡಿತ್ತು. 37 ಕ್ಷೇತ್ರಗಳಲ್ಲಿ ಜೆಡಿಎಸ್‌ ಜಯ ಸಾಧಿಸಿತ್ತು. ಆ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಶೇ 36.35ರಷ್ಟು ಮತಗಳು ಬಂದಿದ್ದವು. ಕಾಂಗ್ರೆಸ್‌ಗೆ ಶೇ 38.14ರಷ್ಟು ಮತಗಳು ಸಿಕ್ಕಿದ್ದವು. ಜೆಡಿಎಸ್‌ಗೆ ಶೇ 18.3ರಷ್ಟು ಮತಗಳು ಸಿಕ್ಕಿದ್ದವು. ಕಾಂಗ್ರೆಸ್‌ಗೆ ಹೆಚ್ಚು ಮತ ಪ್ರಮಾಣದ ಮತಗಳು ಬಂದಿದ್ದರೂ, ಬಿಜೆಪಿಗೆ ಹೆಚ್ಚು ಸೀಟುಗಳು ದೊರೆತಿದ್ದವು.

ಇಂದಿನ ಮತದಾನದ ಪ್ರಮಾಣದ ಪ್ರಕಾರ ನೋಡುವುದಾದರೆ, ಕಳೆದ ಬಾರಿಗಿಂತ ಈ ಬಾರಿ ಕರ್ನಾಟಕದಲ್ಲಿ ಕಡಿಮೆ ಮತದಾನವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿರುವುದು ಬಿಜೆಪಿಗೆ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಕ್ಷೇತ್ರಗಳಲ್ಲಿ ಹೆಚ್ಚು ಪ್ರಮಾಣದ ಮತದಾನವಾಗಿರುವುದು ಕಾಂಗ್ರೆಸ್‌ಗೆ ಲಾಭ ತಂದು ಕೊಡಬಹುದು ಎಂದು ಹೇಳಲಾಗುತ್ತಿದೆ. ಆದರೆ, ಪಕ್ಷಗಳು ಪಡೆದಿರುವ ಮತ ಪ್ರಮಾಣವನ್ನು ಫಲಿತಾಂಶ ಹೊರಬರುವ ದಿನದಂದೇ ತಿಳಿಯಬಹುದು.

ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಬಹುತೇಕ ಅತಂತ್ರ ಸರ್ಕಾರ ಬರಬಹುದು ಎಂದು ಹೇಳಲಾಗುತ್ತಿದೆ. ಈಗ ಹೊರಬಂದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಐದರಲ್ಲಿ ಕಾಂಗ್ರೆಸ್‌ ಮುಂದಿದೆ. ಎರಡರಲ್ಲಿ ಬಿಜೆಪಿ ಮುಂದಿದೆ. ಸಮೀಕ್ಷೆಗಳ ಪ್ರಕಾರ, ಕರ್ನಾಟಕದ ಫಲಿತಾಂಶ ಅತಂತ್ರವಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+